ಗುಣಮಟ್ಟದ ತರಬೇತಿ ವಿಚಾರ ವಿನಿಮಯಕ್ಕೆ ದಾರಿ

 

ಗುಣಮಟ್ಟದ ತರಬೇತಿ ವಿಚಾರ ವಿನಿಮಯಕ್ಕೆ ದಾರಿ: ಪಟೇಲ್ ಶಿವರಾಂ

ಹಾಸನ : ದಿನನಿತ್ಯದ ಜೀವನದಲ್ಲಿ ಬರುವ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಿವ, ಧೈರ್ಯ ಮತ್ತು ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಸಮಾಜಕ್ಕೆ ಬಹುದೊಡ್ಡದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕ್ ನಿರ್ದೇಶಕರಾದ ಪಟೇಲ್ ಶಿವರಾಂ ಅವರು  ಅಭಿಪ್ರಾಯಪಟ್ಟರು. 

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು , ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾಸಹಕಾರ ಕೇಂದ್ರ ಬ್ಯಾಂಕ್ ಹಾಸನ. ಸಹಕಾರ ಇಲಾಖೆ, ಹಾಸನ. ಇವರ ಸಂಯುಕ್ತಾಶ್ರಯದಲ್ಲಿಂದು ಡಿ.ಸಿ.ಸಿ ಬಾಂಕಿನ ಹೆಚ್.ಡಿ.ದೇವೇಗೌಡ ರೈತ ಸಭಾಂಗಣದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಪಿಕಾಡ್ ಬ್ಯಾಂಕುಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಪರಿಪೂರ್ಣ ತರಬೇತಿ ಇದ್ದರೆ ಮಾತ್ರ ಪರಿಣಾಮಕಾರಿಯಾಗಿ ಸಾಧನೆ ಮಾಡಬಹುದು ಎಂದರು.

ಸಹಕಾರಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರುವುದು ಅಗತ್ಯವಿದೆ ಈ ನಿಟ್ಟಿನಲ್ಲಿ ಸಮಾಜಮುಖಿ ಕೆಲಸವಾಗಬೇಕು, ಅಧಿಕಾರಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವುದರಿಂದ ವಿಚಾರ ವಿನಿಮಯಕ್ಕೆ ದಾರಿಯಾಗಿದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. 

 ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಸೋಮನಹಳ್ಳಿ ನಾಗರಾಜು ಮಾತನಾಡುತ್ತಾ ತರಬೇತಿ ಎನ್ನುವುದು ನಿಂತರವಾಗಿ ನಡೆಯಬೇಕಾದ ಪ್ರಕ್ರಿಯೆಯಾಗಿದೆ ಅದಕ್ಕೆ ಸಂಬಂದಪಟ್ಟ ವಿಚಾರಗಳನ್ನು ತಿಳಿದುಕೊಳ್ಳಬೇಕು ಆಗ ಮಾತ್ರ ಸ್ವಾವಲಂಬನೆ ತತ್ವ ಜನರಿಗೆ ಅರ್ಥವಾಗುತ್ತದೆ. ಕೃಷಿಕವರ್ಗ ಆರ್ಥಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ರೈತರು, ದೀನದಲಿತರ ಹಿತಕ್ಕಾಗಿ ಹೆಚ್.ಡಿ.ಸಿ.ಸಿ ಬ್ಯಾಂಕ್ ದುಡಿಯುತ್ತಿದ್ದು ಆರ್ಥಿಕ ಸ್ವಾವಲಂಬನೆಗೆ ಸಹಕಾರ ಬ್ಯಾಂಕ್‍ಗಳು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿವೆ ಎಂದರಲ್ಲದೆ ಪ್ರತಿಯೋಬ್ಬ ಮನುಷ್ಯನು ಆರ್ಥಿಕವಾಗಿ ಬೆಳೆಯಲು ಸಹಕಾರ ಬ್ಯಾಂಕ್‍ಗಳು  ನೆರವು ನೀಡುತ್ತಿವೆ ಎಂದರು. 

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಶೇಷಾದ್ರಿ ಅವರು ಮಾತನಾಡಿ ಸಾಲ ನೀಡುವುದು ಹಾಗೂ ಅದನ್ನು ಮರು ಪಾವತಿಸುವಂತೆ ಜನರ ಮನವೂಲಿಸಿವುದು ಸಾಮಾನ್ಯದ ಕೆಲಸವಲ್ಲ, ಈ ಪ್ರಯತ್ನ  ಶ್ಲಾಘನೀಯವಾದದ್ದು ಎಂದರು. 

ರಾಜ್ಯದಲ್ಲಿ ಅತಿವೃಷ್ಠಿಯಲ್ಲಿ ಅಸುನೀಗಿದವರಿಗೆ ಮೌನಾಚಾರಣೆ ಮತ್ತು ಶ್ರಧಾಂಜಲಿ ಸಮರ್ಪಿಸಲಾಯಿತು ಹಾಗೆಯೇ ಸಹಕಾರ ಬ್ಯಾಂಕ್ ನಿರ್ದೇಶಕರಾದ ನಿಂಗರಾಜು ಈ ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಾಜಪ್ಪಗೌಡ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಡಿ ಆರ್ ಲಿಂಗರಾಜು,  ಉಪ ನಿಬಂಧಕರು ವಿಜಯ ಕುಮಾರ್, ಮುಖ್ಯಕಾರ್ಯ ನಿರ್ವಹಕಾಧಿಕಾರಿ ಹೆಚ್ ಕೆ ದಯಾನಂದ್, ನಿವೃತ್ತ ಅಪರ ನಿಬಂಧಕರು ಹೆಚ್ ಎಸ್ ನಾಗರಾಜ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಭಾರತಿ ಹಾಗೂ ಸಹಕಾರ ಸಂಘದ ಸದಸ್ಯರು, ಸಿಬ್ಬಧಿವರ್ಗದವರು ಹಾಜರಿದ್ದರು.

Last modified on Friday, 16 August 2019 14:17

About author

terrel

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by terrel
- Aug 15, 2019
ಹಲವು ಅಂಗಡಿಗಳಿಗೆ ಕನ್ನ: ಪ್ರವಾಹವನ್ನೇ ಬಂಡವಾಳ ಮಾಡಿಕೊಂಡ ...
Has no content to show!

Visitors Counter

00553119
Today
This Month
Last Month
All days
195
3971
0
553119
Your IP: 185.191.171.25
2020-11-27 07:24

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…