ಸ್ಥಳೀಯ ಸುದ್ದಿ

{mpg}https://youtu.be/GBCi2ug3WYA{/mpg}

ಹಾಸನ: ಮಧ್ಯಂತರ ಚುನಾವಣೆ ಬಂದಿದ್ರೆ ಮೋದಿ ಮತ್ತು ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತ ಭಾಷಣದ ಮೇಲೆ ಭಾಷಣ ಮಾಡಿ ಹೋಗ್ತಿದ್ದರು ಆದರೆ ಇವತ್ತು ಲಕ್ಷಾಂತರ ಮಂದಿ ಪ್ರವಾಹಕ್ಕೆ ಸಿಲುಕಿ ರಾಜ್ಯದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ ಅವರ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರಿಸದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಟುವಾಗಿ ಟೀಕಿಸಿದರು.

ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗ್ಗೆ ಹಾಸನಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಕ್ಷದ ಮುಖಂಡರುಗಳಿಂದ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಗಳನ್ನು ಪಡೆದ ಬಳಿಕ ಜಿಲ್ಲೆಯ ಆಲೂರು ಸಕಲೇಶಪುರ ಬಾಳ್ಳುಪೇಟೆಯ ಕೆಲಭಾಗಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.

ಪ್ರವಾಹ ಪೀಡಿತ ಪ್ರದೇಶಗಳನ್ನು ಒಳಗೊಂಡಂತೆ ಪ್ರವಾಸ ಸಿಲುಕಿ ಸಂಕಷ್ಟವನ್ನು ಎದುರಿಸಿರುವ ಕುಟುಂಬಗಳಿಗೂ ಸಾಂತ್ವನ ಹೇಳಿ, ಮೃತಪಟ್ಟ ಸಕಲೇಶಪುರದ ಪ್ರಕಾಶ್ ಮತ್ತು ರಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 50 ಸಾವಿರ ರೂ. ನಂತೆ ಪಕ್ಷದ ವತಿಯಿಂದ ಆರ್ಥಿಕ ಸಹಾಯ ಮಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಸುಮಾರು 300 ಕೋಟಿಯಷ್ಟು ಹಾನಿ ಸಂಭವಿಸಿದ್ದು, ಶೀಘ್ರವಾಗಿ ಪರಿಹಾರ ಕಾರ್ಯ ಚುರುಕುಗೊಳ್ಳಿಸಬೇಕು. ಜೊತೆಗೆ ರಾಜ್ಯದಲ್ಲಿ ಸಂಭವಿಸಿರುವ ಹಾನಿಗೆ ಸದ್ಯ ರಾಜ್ಯ ಸರ್ಕಾರವೇ ಎಲ್ಲ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ತಕ್ಷಣ 5-10 ಸಾವಿರ ಕೋಟಿ ಬಿಡುಗಡೆ ಮಾಡಿ ರಾಷ್ಟ್ರೀಯ ವಿಪತ್ತು ಅಂತ ಇದನ್ನು ಘೋಷಣೆ ಮಾಡಬೇಕು ಅಂತ ಒತ್ತಾಯಿಸಿದರು.

ಇನ್ನೂ ಈಗಾಗಲೇ ಕೇಂದ್ರದ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಇಬ್ಬರೂ ವೈಮಾನಿಕ ಸಮೀಕ್ಷೆ ನಡೆಸಿದರು ಯಾವುದೇ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಕ್ಕೆ ಪರಿಹಾರವನ್ನು ನೀಡುವುದರಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ. ನಾನು ಒತ್ತಾಯ ಮಾಡುವುದು ಇಷ್ಟೇ ನಮ್ಮ ಪಕ್ಷದ ವತಿಯಿಂದ ಸಹಾಯ ಮಾಡುವ ಜೊತೆಗೆ ರಾಜ್ಯ ಸರ್ಕಾರ ಪಕ್ಷಗಳ ಜೊತೆ ಸಮನ್ವಯ ಸಾಧಿಸಿ ತಕ್ಷಣ ಸಭೆ ಕರೆದು ಒಮ್ಮತದ ತೀರ್ಮಾನವನ್ನು ಪಡೆದುಕೊಂಡು ಜಾತ್ಯತೀತವಾಗಿ ಎಲ್ಲರನ್ನು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಕೆಲಸ ಮಾಡಲಿ ಅಂತ ಯಡಿಯೂರಪ್ಪಗೆ ಸಲಹೆ ನೀಡಿದರು.

ಇನ್ನು ಸಚಿವ ಸಂಪುಟ ರಚನೆಯಾಗಿದೆ ಇರುವುದರಿಂದ ಮುಖ್ಯಮಂತ್ರಿಗಳೇ ಸೂಪರ್ ಮ್ಯಾನ್ ರೀತಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಓಡಾಡುತ್ತಿದ್ದಾರೆ. ಇನ್ನು ವಿಧಾನಸೌಧದಲ್ಲಿ ಕೂಡ ಯಾವುದೇ ಕೆಲಸಗಳು ನಡೆಯದೆ ವಿಧಾನಸೌಧದ ಮುಂದಾಗಿದೆ. ಇಷ್ಟೊತ್ತಿಗಾಗಲೇ ಸಂಪುಟ ರಚನೆ ಯಾಗಿದ್ದರೆ ರಾಜ್ಯದ ಪ್ರವಾಹ ಪೀಡಿತರ ಪ್ರತಿ ಜಿಲ್ಲೆಯಲ್ಲಿಯೂ ಆಯಾ ಮಂತ್ರಿಗಳು ಭೇಟಿ ನೀಡಿ ಪರಿಹಾರ ಕಾರ್ಯಗಳು ಸಮಗ್ರೋಪಾದಿಯಲ್ಲಿ ನಡೆಯುತ್ತಿದ್ದರೆ ಸಚಿವ ಸಂಪುಟ ರಚನೆ ಆಗುವ ಲಕ್ಷಣಗಳು ಕಾಣುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

ಇನ್ನು ಹಾಸನದಲ್ಲಿ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯ ನಡುವೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಕಲೇಶಪುರ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ಕೊಟ್ಟು ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ ಚಿಕ್ಕಮಗಳೂರು ಜಿಲ್ಲೆಯ ಕಡೆ ಹೊರಟರು.

Last modified on Saturday, 17 August 2019 23:02
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 18, 2019
ಬಳ್ಳಾರಿ- ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ...
Has no content to show!

Visitors Counter

00553129
Today
This Month
Last Month
All days
205
3981
0
553129
Your IP: 34.237.138.69
2020-11-27 07:41

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…