ಸ್ಥಳೀಯ ಸುದ್ದಿ

ಪತ್ರಕರ್ತನಾದವನಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ ಕೆ.ದೀಪಕ್

ಹಾಸನ: ಪತ್ರಕರ್ತನಾದವನು ಮಾನಸಿಕವಾಗಿ, ದೈಹಿಕವಾಗಿ, ಪ್ರಜ್ಞಾವಂತನಾಗಿರಬೇಕು ಅಲ್ಲದೆ ಉತ್ತಮ ಪತ್ರಕರ್ತನಿಗೆ ಸಾಮಾಜಿಕ ಹೊಣೆಗಾರಿಕೆ ಅತಿ ಮುಖ್ಯ ಎಂದು ಹಿರಿಯ ಪತ್ರಕರ್ತ  ಕೆ.ದೀಪಕ್ ಅಭಿಪ್ರಾಯಪಟ್ಟರು. 

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ ಪ್ರಥಮ ವರ್ಷದ ಪತ್ರಿಕೋದ್ಯಮ  ವಿದ್ಯಾರ್ಥಿಗಳಿಗೆ ಸ್ನೇಹ ಸಂಗಮ ಹಾಗೂ ಮಾಧ್ಯಮ ಲೋಕದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುವಲ್ಲಿ ಭವಿಷ್ಯದ ಪತ್ರಕರ್ತರಿಗೆ ಎದುರಾಗುವ ಸಮಸ್ಯೆಗಳನ್ನು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕೆ.ದೀಪಕ್‌ರವರು ಉದ್ಘಾಟನೆ ನಡೆಸಿ ಮಾತನಾಡಿದರು. 

ಪತ್ರಕರ್ತರಾದವರಿಗೆ ತರಬೇತಿ ಅವಶ್ಯಕ, ಉತ್ತಮ ಪತ್ರಕರ್ತರಾಗಬೇಕೆಂದು ಬಯಸುವವರು ಜ್ಞಾನ, ಕೌಶಲ್ಯ, ದೃಡತೆ, ಸೃಜನಾತ್ಮಕತೆ, ವಿಭಿನ್ನವಾಗಿ ಯೋಚಿಸುವ ದೃಷ್ಟಿಕೋನ ಹೊಂದಿರಬೇಕು, ದೇಶದ ಬದ ಲಾವಣೆ ಉತ್ತಮ ಪತ್ರಕರ್ತರಿಂದ ಮಾತ್ರ ಸಾದ್ಯ, ಪ್ರಾಮಾಣಿಕತೆ ಹಾಗು ಧೈರ್ಯ ಅವನ ಅಸ್ತ್ರಗಳು, ಮಾಧ್ಯಮಗಳು ಜನರಲ್ಲಿ ಭರವಸೆಯ ಬೆಳಕನ್ನು ತುಂಬಬೇಕು ಎಂದು ನುಡಿದರು. 

ಪ್ರಾಸ್ತವಿಕ ನುಡಿಗಳನ್ನಾಡಿದ ವಿಭಾಗದ ಮುಖ್ಯಸ್ಥೆ ರಶ್ಮಿ ಎ.ವಿ ಅರಕಲಗೂಡು ರವರು ತಮ್ಮ ವಿಭಾಗದ ಸಾಧನೆ ಹಾಗು ವಿದ್ಯಾರ್ಥಿಗಳಿಗಾಗುತ್ತಿರುವ ಪ್ರಯೋಜನಗಳನ್ನು ಕುರಿತು ವಿವರಿಸಿದರು .ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಿಸಿದ ಸ್ನೇಹಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಯಿತು, ವಿಷಯ ಮಂಡನೆಗೆ ಸಂಬಂದಿಸಿದಂತೆ ಒಂದು ಗಂಟೆಗಳಿಗು ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿ.ರಾಜಪ್ಪ ಅಧ್ಯಕ್ಷತೆ ವಹಿಸಿದರು. ಗೌರವ ಉಪಸ್ಥಿತರಾಗಿ ಕಾಲೇಜಿನ ಶೈಕ್ಷಣಿಕ ನಿಯೋಜಕರಾದ ಡಾ.ಉದಯಕುಮಾರ್, ಪರೀಕ್ಷಾ ನಿಯಂತ್ರಕ ಪ್ರೊ.ಟಿ.ಪಿ ಪುಟ್ಟರಾಜು, ವ್ಯವಸ್ಥಾಪಕ ಧರ್ಮಪ್ಪ ಬಿ.ಎಸ್, ಅದೀಕ್ಷಕ ಕೆ.ಟಿ ಸತ್ಯಮೂರ್ತಿ, ವಿಭಾಗದ ಉಪನ್ಯಾಸಕರಾದ ಡಾ.ನಾಗರಾಜಮೂರ್ತಿ ಉಪಸ್ಥಿತರಿದ್ದರು, ಅಧ್ಯಾಪಕರಾದ ಪ್ರೊ.ಶಿವಣ್ಣ, ಪ್ರೊ.ಶೇಖರ್ ಹೊಡೆನೂರ್, ಪ್ರೊ.ಚೆನ್ನಯ್ಯ ಹಾಜರಿದ್ದರು, ಉಪನ್ಯಾಸಕರಾದ ಫರ್ನಾಸ್, ರಾಮಚಂದ್ರ, ಸಂದೇಶ್, ಮತ್ತು ಬೇರೆ ಬೇರೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದರು.

 

- ಅರಕಲಗೂಡು ರಶ್ಮಿ, ಪತ್ರಿಕೋದ್ಯಮ ಮುಖ್ಯಸ್ಥೆ 

Last modified on Tuesday, 20 August 2019 14:26
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 18, 2019
ಬಳ್ಳಾರಿ- ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ...
Has no content to show!

Visitors Counter

00553129
Today
This Month
Last Month
All days
205
3981
0
553129
Your IP: 34.237.138.69
2020-11-27 07:41

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…