ಸ್ಥಳೀಯ ಸುದ್ದಿ

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಕನಕಪುರದಲ್ಲಿ ಪ್ರತಿಭಟನೆ.

ರಾಮನಗರ: ಡಿ.ಕೆ ಶಿವಕುಮಾರ್ ರನ್ನು ಇ.ಡಿ ವಶಕ್ಕೆ ಪಡೆದಿರುವ ಹಿನ್ನೆಲೆ ಕರ್ನಾಟಕದಲ್ಲಿ ಪ್ರತಿಭಟನೆಯ ಕಾವು ಇಂದೂ ಕೂಡ ಮುಂದುವರೆದಿದೆ. ಕನಕಪುರದ ನಗರಸಭೆ ಎದುರು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಮಿತ್ ಶಾ ಹಾಗೂ ಮೋದಿ ವಿರುದ್ದ ಘೋಷಣೆ ಕೂಗಿ ತಮ್ಮ ಆಕ್ರೊಶ ವನ್ನು ಹೊರಹಾಕಿದರು.
ಕೇಂದ್ರ ಸರ್ಕಾರ ಇಡಿ ಅಧಿಕಾರಿಗಳನ್ನು ತಮ್ಮ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ.
ಕಳೆದ ‌ವರ್ಷ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ದುಡಿದ ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಜೆಪಿ ಈಗ ಇಡಿ ಅಧಿಕಾರಿಗಳ ಮೂಲಕ ಡಿಕೆಶಿ ಅವರನ್ನು ಬಂಧಿಸಿದೆ.

ರಾಜ್ಯದ ಬಿಜೆಪಿ ನಾಯಕರು ಡಿಕೆ ಶಿವಕುಮಾರ್ ಬಂಧನದಲ್ಲಿ ಬಿಜೆಪಿಯ ಪಾತ್ರ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ,ಆದರೆ ಡಿ ಕೆ ಶಿವಕುಮಾರ್ ಅವರ ಬಂಧನ ಬಿಜೆಪಿಯ ದ್ವೇಷದ ರಾಜಕಾರಣವನ್ನು ತೋರಿಸುತ್ತದೆ ಎಂದು ಕಿಡಿಕಾರಿದರು .ಆದರೆ ಬಿಜೆಪಿ ಇಂತಹ ತಂತ್ರಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವ ಜಾಯಮಾನದವರಲ್ಲ ಡಿ.ಕೆ ಶಿವಕುಮಾರ್ ಅವರು ಜೈಲಿನಿಂದಲೇ ತಮ್ಮ ಹೋರಾಟವನ್ನು ಆರಂಭಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಡಿಕೆಶಿ ಬಂಧನವಾಗಿ ಮೂರ್ನಾಲ್ಕು ದಿನಗಳು ಕಳೆದಿದ್ದರೂ ಕನಕಪುರದಲ್ಲಿ ಪ್ರತಿಭಟನೆ ಮುಂದುವರಿಸಿರುವ ಡಿಕೆಶಿ ಅಭಿಮಾನಿಗಳು ಒಂದು ವೇಳೆ ಡಿ.ಕೆ ಶಿವಕುಮಾರ್ ಅವರನ್ನು ಬಂಧಮುಕ್ತಗೊಳಿಸಿದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 03, 2019
ಹಾಸನ: ಮಲೆನಾಡು ಭಾಗದ  ಕಾಡಂಚಿನಿಂದ ಮತ್ತೆ ಕಾಡನೆಗಳು ಈಗ ...
Has no content to show!

Visitors Counter

00553202
Today
This Month
Last Month
All days
278
4054
0
553202
Your IP: 34.237.138.69
2020-11-27 09:09

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…