ಸ್ಥಳೀಯ ಸುದ್ದಿ

ಮಾಧ್ಯಮದವರ ವಿರುದ್ಧ ಮತ್ತೆ ಗುಡುಗಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ .

ತುಮಕೂರು: ತಿಪಟೂರು ತಾಲೂಕು ನೊಣವಿನಕೆರೆ ಗ್ರಾಮದಲ್ಲಿ ನಡೆದ ಬಿಜಿಎಸ್ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮದವರಿಗೆ ಸಾಮಾನ್ಯ ಜ್ಞಾನವೂ ಇಲ್ಲದೆ ನನ್ನ ಬಗ್ಗೆ ಬರೆಯುತ್ತಿದ್ದಾರೆ. ನಾನು ಸಾಲ ಮನ್ನಾ ಮಾಡಿದ್ದಕ್ಕೆ ಅವರು ನನಗೆ ಯಾವುದೇ ಸರ್ಟಿಫಿಕೇಟ್ ಕೊಡಲಿಲ್ಲ. ಆದರೆ ನಾನು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವನಲ್ಲ. ನಾನು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಬಳಿಕ ರಾಜಕೀಯದಿಂದ ನಿವೃತ್ತಿಯಾಗಬೇಕೆಂದುಕೊಂಡಿದ್ದೆ ಆದರೆ ನಿಮ್ಮೆಲ್ಲರ ಅಭಿಮಾನದಿಂದ ನಾನು ಮತ್ತೆ ರಾಜಕೀಯದಲ್ಲಿ ಹೋರಾಟ ಮಾಡುವ ಮನಸ್ಸು ಮಾಡಿದ್ದೇನೆ.

ರೈತರಿಗೆ ಎಷ್ಟು ಸಾಲಮನ್ನಾ ಮಾಡಿದೆ ಎಂಬುದನ್ನು ದಾಖಲೆ ಸಮೇತ ನಾನು ಈ ಪುಸ್ತಕದ ರೂಪದಲ್ಲಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇನೆ. ನಾನು ಬರುವ ಮುನ್ನ ನೀವು ಗೌಡರ ಗೌಡ ದೇವೇಗೌಡ ಎಂದು ಹೇಳಿದ್ದೀರಿ. ಅವರು ಸೋತಿದ್ದರೂ ಅವರನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದೀರಿ ಅದಕ್ಕೆ ನಿಮಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ನಾನು ಬಿಜೆಪಿಯವರ ತರಹ ಪಾಪದ ಹಣವನ್ನು ಸಂಗ್ರಹ ಮಾಡಿ ಶಾಸಕರಿಗೆ ಕೊಟ್ಟು ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ ನಾನು ಆ ಕೆಲಸ ಮಾಡಲಿಲ್ಲ ಬದಲಿಗೆ 6.5 ಕೋಟಿ ರೂ. ಹಣವನ್ನು ಸರ್ಕಾರದಲ್ಲಿ ಇಟ್ಟು ಬಂದಿದ್ದೇನೆ ಎಂದರು.

ಖಾಯಿಲೆಯಿಂದ ಬಳಲುತ್ತಿದ್ದದವರಿಗೆ ಮುಖ್ಯಮಂತ್ರಿ ಪರಿಹಾರನಿದಿಯಿಂದ 100 ಕೋಟಿ ರೂಗಳನ್ನು ಕೊಟ್ಟ ಯಾರಾದ್ರು ಮುಖ್ಯ ಮಂತ್ರಿ ಇದ್ರೆ ಅದು ನಮ್ಮ ಅವದಿಯಲ್ಲಿ. ನೀವು ಬೆಳಸಿದರೆ ಹೋರಾಡುತ್ತೇವೆ ಇಲ್ಲದೇ ಇದ್ದರೆ ಮನೆಯಲ್ಲಿ ಇರುತ್ತೇನೆ. ಕೋಟ್ಯಾಂತರ ರೂ ಕೊಟ್ಟು ಯಡಿಯೂರಪ್ಪ ಅಪರೇಷನ್ ಸಿಡಿ ಕಥೆ ಎನಾಯ್ತು. ನನ್ನ ಅವದಿಯಲ್ಲಿ ಅದನ್ನು ತನಿಖೆ ಮಾಡಿಸಬಹುದಿತ್ತು ಆದರೆ ನಾನು ಯಾವತ್ತು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು.

KONDI NEWS, TUMKUR..

Last modified on Tuesday, 10 September 2019 00:33
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by terrel
- Aug 15, 2019
ಹಲವು ಅಂಗಡಿಗಳಿಗೆ ಕನ್ನ: ಪ್ರವಾಹವನ್ನೇ ಬಂಡವಾಳ ಮಾಡಿಕೊಂಡ ...
Has no content to show!

Visitors Counter

00553119
Today
This Month
Last Month
All days
195
3971
0
553119
Your IP: 185.191.171.25
2020-11-27 07:24

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…