ಸ್ಥಳೀಯ ಸುದ್ದಿ

ಬೇಕಾದ್ರೆ ತಗೋಳಿ ಸಾಕಾದ್ರೆ ಬಿಡ್ರಿ--ರೈತರಿಗೆ ರೇವಣ್ಣ ಆವಾಜ್

ಹೊಳೆನಸೀಪುರ: ಹೊಳೆನರಸೀಪುರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನ ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ದೇವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದ್ರು.

ಹೌದು, ಸದಾ ಒಂದಿಲ್ಲೊಂದು ಯಡವಟ್ಟುಗಳನ್ನ ಮೈಮೇಲೆಳಡದುಕೊಳ್ಳೋ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ರೈತರ ವಿರುದ್ಧವೇ ಗರಂ ಆದರಲ್ಲದೇ ಗಧರಿಸಿ ರೈತರ ಬಾಯಿ ಮುಚ್ಚಿಸಿದ್ರು.

ಅಭಿವೃದ್ಧಿ ಹರಿಹಾರ ಎಂದ ಕರೆಯೋ ಶಾಸಕ ಹೆಚ್.ಡಿ.ರೇವಣ್ಣ ಅವರಿಂದು ತಾಲ್ಲೂಕಿನ ಹಳೇಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್‌ಗಳನ್ನ ವಿತರಿಸೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು, ಈ ವೇಳೆ ಕಳೆದ ಭಾರಿ ಟಾರ್ಪಲ್ ಪಡೆದಿದ್ದ ಕೆಲವರು ಸಾರ್, ಕಳೆದ ಭಾರಿ ನೀಡಿದ ಟಾರ್ಪಲ್‌ಗಳ ಕ್ವಾಲಿಟಿ ಚೆನ್ನಾಗಿಲ್ಲ, ಮಾರ್ಕೆಟ್‌ನಲ್ಲೇ 900-1000ರೂ.ಗೆ ಒಳ್ಳೆಯ ಟಾರ್ಪಲ್ ಸಿಕ್ತವೆ ಅಂತ ಪ್ರಶ್ನಿಸಿದ್ರು.

ಆದ್ರೆ ಇಷ್ಟಕ್ಕೆ ಸಿಟ್ಟಿಗೆದ್ದ ರೇವಣ್ಣ, ಯಾವನ್ರಿ ಅವ್ನು, ಬೇಕಾದ್ರೆ ತಗೊಳಿ ಸಾಕಾದ್ರೆ ಬಿಡ್ರಿ ಅಂತಾ ಸಿಡಿದೆದ್ರು, ಇದರಿಂದ ತಮ್ಮ ಶಾಸಕರಿಗೆ ಸಮಸ್ಯೆ ಹೇಳಿಕೊಳ್ಳಲು ಬಂದ ರೈತರು ಸೈಲೆಂಟಾದ್ರು, ತಮ್ಮ ಸಿಟ್ಟು ಕಮ್ಮಿಯಾಗಲಿಲ್ಲ, ಅಧಿಕಾರಿಗಳ ವಿರುದ್ಧ ಸಿಡಿದೆದ್ದ ರೇವಣ್ಣ, ಆ ನನ್ ಮಕ್ಳು ಮೇಲಿನವ್ರು ದುಡ್ ಹೊಡಿತರೆ ಇವು ಬಂದ್ ಇಲ್ ನಮ್ ಕೇಳ್ತವೆ ಅಂತಾ ಗ್ರಾಮೀಣ ಭಾಷೆಯಲ್ಲಿ ಅವ್ಯಾಚ್ಯ ಶಬ್ದ ಬಳಸಿ ನಿಂದಿಸಿದ್ರು.

ಈ ಹಿಂದೆ ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ರೇವಣ್ಣ ಅವರು ಈ ಭಾರಿ ನಿರಾಶ್ರಿತರು ಸಮಸ್ಯೆ ಹೇಳಿಕೊಳ್ಳುವ ಅದನ್ನು ಆಲಿಸದೇ ಬೆಲ್ ಹೊಡೆಯುತ್ತಾ ಕುಳಿತುಕೊಳ್ಳುವ ಮೂಲಕ ಜನರ ಆಕ್ರೋಶಕ್ಕೀಡಾಗಿದ್ರು.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 18, 2019
ಕೋಲಾರ: ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ...
Has no content to show!

Visitors Counter

00553139
Today
This Month
Last Month
All days
215
3991
0
553139
Your IP: 34.237.138.69
2020-11-27 07:56

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…