ರಾಜಕೀಯ

{YouTube}https://youtu.be/58LCW-an2tQ{/YouTube}

ಹಾಸನ: ಅದೆಷ್ಟು ದಿನ ಹಾಸನ ಜಿಲ್ಲೆಯ ಬಗ್ಗೆ ದ್ವೇಷದ ರಾಜಕಾರಣ ಮಾಡ್ತಾರೋ ಮಾಡ್ಲಿ. ನಂತರ ಏನ್ ಮಾಡಬೇಕು ಅಂತ ನಿರ್ಧಾರ ಮಾಡ್ತೀನಿ. ದೇವೇಗೌಡ್ರ ಮಕ್ಳು ಅದೇನ್ ಕಡ್ದು ಕಟ್ಟೆಯಾಕವ್ರೆ ಅಂತಾನೂ ಹೇಳ್ತೀನಿ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮತ್ತೆ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಸವಾಲ್ ಹಾಕಿದ್ರು.

ಹಾಸನದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಎರಡು ಸರ್ಕಾರಗಳು ಜಿಲ್ಲೆಯನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಅಲ್ಲದೆ ಹತ್ತು ವರ್ಷದಿಂದ ಹಾಸನಕ್ಕೆ ಒಂದೇ ಒಂದು ಬಿಡಿಗಾಸು ಕೂಡ ಸರ್ಕಾರಗಳು ನೀಡಿಲ್ಲ. ಶಿವಮೊಗ್ಗ ಮತ್ತು ಶಿಕಾರಿಪುರವನ್ನು ಅಭಿವೃದ್ಧಿ ಮಾಡಿಯೇ ಹಾಸನವನ್ನು ಅಭಿವೃದ್ಧಿ ಮಾಡಲಿ. ಅದನ್ನ ಬಿಟ್ಟು ದ್ವೇಷದ ರಾಜಕಾರಣ ಮಾಡ್ತೀನಿ ಅಂದರೆ ಮಾಡಲಿ ನಾನು ನೋಡುತ್ತೇನೆ ಎಂದು ಖಾರವಾಗಿ ನುಡಿದರು.

ಇನ್ನು ನಮ್ಮ ಸರ್ಕಾರದಲ್ಲಿ 63 ಕೋಟಿ ವೆಚ್ಚದಲ್ಲಿ ಹಾಸನಕ್ಕೆ ತೋಟಗಾರಿಕಾ ಇಲಾಖೆಯೊಂದು ಮಂಜೂರಾಗಿತ್ತು. ಆದರೆ ಈಗಿನ ಸರ್ಕಾರ ಅದರ ಆದೇಶವನ್ನ ತಡೆ ಹಿಡಿದಿದ್ದು, ಅದೆಷ್ಟು ದಿನ ದ್ವೇಷದ ರಾಜಕಾರಣ ಮಾಡ್ತಾರೋ ನೋಡೋಣ. ಸಿಎಂಗೆ ಸಮಯ ಕೊಡುತ್ತೇನೆ ಆಮೇಲೆ ಮಾತನಾಡುತ್ತೇನೆ ಎಂದ್ರು. ಇನ್ನು ಪ್ರವಾಹದ ಸಮಸ್ಯೆ ಮುಗಿದ ಬಳಿಕ ಅಭಿವೃದ್ಧಿ ಕಾರ್ಯ ಮಾಡಲಿ ಅಂತ ಒತ್ತಾಯ ಮಾಡಿದ ಅವರು, ನಾನು ಕೇವಲ ಹೊಳೆನರಸೀಪುರಕ್ಕೆ ಮಾತ್ರ ಕೇಳುತ್ತಿಲ್ಲ. ಹಾಸನವನ್ನು ಅಭಿವೃದ್ಧಿ ಮಾಡಲು ಸ್ಥಳೀಯ ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡಲಿ. ನಾನು ಬೇಡ ಎನ್ನುವುದಿಲ್ಲ. ಆದರೆ ಜಿಲ್ಲೆಯನ್ನು ಕಡೆಗಣಿಸಬಾರದು ಎಂದ್ರು.

ಹಾಗೇ ಪ್ರವಾಹದಿಂದ ಜಿಲ್ಲೆಯಲ್ಲಿ ಸುಮಾರು 590 ಕೋಟಿ ನಷ್ಟ ಉಂಟಾಗಿದ್ದು, 25 ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಎಂ ಡಿ ಆರ್ ಎಫ್ ಗೈಡ್ ಲೈನ್ ಪ್ರಕಾರ ಕೇವಲ 9 ಕೋಟಿ ಮಾತ್ರ ನಷ್ಟ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮತ್ತೊಮ್ಮೆ ಕೂಲಂಕುಶವಾಗಿ ಜಿಲ್ಲಾಡಳಿತ ಉಂಟಾಗಿರುವ ನಷ್ಟದ ಮಾಹಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಿ  ಜೊತೆಗೆ ಆದಷ್ಟು ಬೇಗ ಪರಿಹಾರದ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿ ಅಂತ ಬಿಎಸ್ ವೈ ಗೆ ಒತ್ತಾಯ ಮಾಡಿದರು.

ನೋಡ್ರಿ ಸರ್ಕಾರ ಟೇಕಾಫ್ ಆಫ್ ಆಯ್ತೋ, ಸೈಕಲ್ ಆಯ್ತೋ.. ಅದೆಲ್ಲಾ ನಂಗೊತ್ತಿಲ್ಲ. ನನಗೆ ಮೊದಲು ರಾಜ್ಯದ ಪ್ರವಾಹದ ಸಮಸ್ಯೆ ಮುಗಿಯಲಿ. ಬಳಿಕ ರಾಜಕಾರಣ ಮಾತನಾಡುತ್ತೇನೆ. ದೇವೇಗೌಡ್ರ ಮಕ್ಕಳು ಅದೇನ್ ಕಡಿದು ಕಟ್ಟೆಯಾಕಿದ್ದಾರೆ ಎನ್ನುವುದನ್ನ ನಾನು ಮುಂದಿನ ದಿನದಲ್ಲಿ ಹೇಳ್ತೇನೆ. 15 ವರ್ಷದಿಂದ ರೈಲ್ವೆ ಬ್ರಿಡ್ಜ್ ಮಾಡೋಕೆ ಆಗಿತ್ತಾ. ನೋಡ್ರಿ...ನಾನು ನಮ್ಮ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸದ್ಯ 5 ಜಿಲ್ಲೆಯ ಮುಖಂಡರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವ ಕೆಲಸ ಮಾಡ್ತಿವಿ. ಕೇವಲ ನಾನು ಈಗ ಹೊಳೆನರಸೀಪುರಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯದ ಪ್ರವಾಸ ಮಾಡ್ತಿವಿ. ಕುಮಾರಣ್ಣ, ದೇವೇಗೌಡ್ರು ಕೇವಲ ಸಂಘಟನೆಯ ಭಾಷಣಕ್ಕೆ ಮಾತ್ರ ಬರಬೇಕು. ಉಳಿದಿದ್ದೇಲ್ಲವಂತ ನಾನು ನೋಡಿಕೊಂಡು ಕುಮಾರಣ್ಣನ ಹೆಗಲಿಗೆ ನಿಂತು ಕೈ ಬಲಪಡಿಸುತ್ತೇವೆ. ನಾನು ರಾಜಕಾರಣ ಮಾಡಿದ್ದೇನೆ. ಮುಂದೆ ಜಿಲ್ಲೆಗೇನು ಮಾಡಬೇಕು ಅಂತ ಗೊತ್ತಿದೆ. ಈಗ ಪ್ರವಾಹದ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ ಅಂತ ಎದ್ದು ಹೊರಟೇಬಿಟ್ಟರು.

News Desk, Kondi News, 

Last modified on Tuesday, 03 September 2019 17:58
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 18, 2019
ಬಳ್ಳಾರಿ- ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ...
Has no content to show!

Visitors Counter

00553129
Today
This Month
Last Month
All days
205
3981
0
553129
Your IP: 34.237.138.69
2020-11-27 07:41

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…