ಯಾವುದೇ ರಾಜಕೀಯ ಮಾಡಿದರೆ ಇಲ್ಲಿ ನಡೆಯಲ್ಲಾ:ಮಾಧುಸ್ವಾಮಿ

ಹಾಸನ: ಯಾರೋ ಹೇಳಿದರು ಎಂದು ರಾಜಕೀಯ ಮಾಡಿದರೆ ಇಲ್ಲಿ ನಡೆಯಲ್ಲಾ ಎಂದು ಹಾಸನದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮಾಧುಸ್ವಾಮಿ, ಯಾರೋ ಹೇಳಿದರು ಎಂದು ರಾಜಕೀಯ ಮಾಡಿದರೆ ಇಲ್ಲಿ ನಡೆಯಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣರ ಹೆಸರು ಹೇಳದೇ ಪರೋಕ್ಷವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಾನು 1989ರಿಂದಲೂ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಇಲಾಖೆಯವರು ಸಂಪೂರ್ಣ ಮಾಹಿತಿ ತರಬೇಕು. ಯಾವುದೋ ಸಮಯಕ್ಕೆ ಬರೋದು ಹೋಗೋದು ಅಂದರೆ ಆಗಲ್ಲಾ. ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ನಾವು ಸಾರ್ವಜನಿಕರ ಹಣದಿಂದ ಕೆಲಸ ಮಾಡುತಿದ್ದೇವೆ. ಎರಡು ಮೂರು ತಿಂಗಳಲ್ಲಿ ಎರಡು ಮೂರು ಬಾರಿ ಸಭೆ ಮಾಡುತ್ತೇನೆ. ನೆರೆ ಮತ್ತು ಬರದ ಮಾಹಿತಿ ಸ್ಪಷ್ಟವಾಗಿ ಹೇಳಬೇಕು. ಕೆಡಿಪಿ ಸಭೆಯ ಪುಸ್ತಕದ ಎಲ್ಲಾ ಮಾಹಿತಿಯನ್ನು ನಾನು ಓದುತ್ತೇನೆ. ಮಾಹಿತಿ ಸರಿಯಾಗಿ ನೀಡಲಿಲ್ಲಾ ಎಂದರೆ ನಾನು ಸಹಿಸೋಲ್ಲ. ನಿಮ್ಮ ಬೇರೆ ವರ್ತನೆ ಇದ್ದರೆ ಸರಿ ಮಾಡಿಕೊಳ್ಳಿ ಎಂದು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ ಅವರು, ನೀವು ಮಾನಸಿಕವಾಗಿ ಸಿದ್ಧರಾಗಿರಬೇಕು. ಎಲ್ಲರೂ ತಯಾರಾಗಿ ಬರಬೇಕು. ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ನಮ್ಮ ಸರ್ಕಾರದಲ್ಲಿ ಇದೆಲ್ಲಾ ನಡೆಯಲ್ಲಾ ಸರಿಯಾಗಿ ಕೆಲಸ ಮಾಡಬೇಕು. ಸರಿಯಾಗಿ ಯಾರೂ ಕೆಲಸ ಮಾಡುತ್ತಿಲ್ಲಾ ಎಂಬುವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಲಯದ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದ ಕಾರಣ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಮಾಧುಸ್ವಾಮಿ ಮತ್ತು ವಕೀಲರ ನಡುವೆ ಹಾಸನ ವಕೀಲರ ಸಂಘದಲ್ಲಿ ಮಾತಿನ ಚಕಮಕಿ ನಡೆಯಿತು. ಕೆಡಿಪಿ ಸಭೆಗೆ ಆಗಮಿಸುವ ಮುನ್ನಾ ವಕೀಲರ ಸಂಘಕ್ಕೆ ಸಚಿವ ಮಾಧುಸ್ವಾಮಿ ಆಗಮಿಸಿದ್ದರು. ಈ ವೇಳೆ ನ್ಯಾಯಾಲಯದ ಕಟ್ಟಡ ಪೂರ್ಣಗೊಂಡರೂ ಯಾಕೆ ಉದ್ಘಾಟನೆ ಮಾಡಿಲ್ಲಾ ಎಂದು ವಕೀಲರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಕೆಲವೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸ್ವಲ್ಪ ಸಮಯದ ಬಳಿಕ ಕೆಲ ವಕೀಲರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 20, 2019
ಹಾಸನ: ಅಂತೂ ಇಂತು ಕೊನೆಗೂ ಸಚಿವ ಸಂಪುಟ ರಚನೆಯಾಯ್ತು. ...
Has no content to show!

Visitors Counter

00553190
Today
This Month
Last Month
All days
266
4042
0
553190
Your IP: 114.119.141.67
2020-11-27 08:50

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…