ಹಸ್ತ ಮಳೆಗೆ ಹರ್ಷಚಿತ್ತಗೊಂಡ ಜಿಲ್ಲಾ ರೈತಾಪಿವರ್ಗ

ಹಾಸನ: ಜಿಲ್ಲೆಯಲ್ಲಿ ಮತ್ತೆ ಮಳೆ ಮುಂದುವರೆದಿದ್ದು ಹಾಸನ ಜಿಲ್ಲೆಯ ಬಯಲುಸೀಮೆಯ ಭಾಗದ ವಿವಿಧೆಡೆ ಭರ್ಜರಿ ಮಳೆಯಾಗಿದ್ದು ರೈತರ ಮುಖದಲ್ಲಿ ಮತ್ತೊಮ್ಮೆ ಮಂದಹಾಸ ಮೂಡಿದೆ. 

ಆಗಸ್ಟ್ ತಿಂಗಳಲ್ಲಿ ಸುರಿದ ಆಶ್ಲೇಷ,  ಮಖಾ,  ಹಾಗೂ ಪುಬ್ಬೆ ಮಳೆಗೆ ಜಿಲ್ಲೆಯ ಜನ ಹೈರಾಣಾಗಿದ್ದರು. ಅವಧಿಗೂ ಮುನ್ನವೇ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ತುಂಬಿ ಹರಿದಿದ್ದರಿಂದ ಜಿಲ್ಲೆ ಅಷ್ಟೇ ಅಲ್ಲದೆ ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ರೈತರು ಕೂಡ ಖುಷಿಯಾಗಿರು.  ಸೆಪ್ಟಂಬರ್ ನಲ್ಲಿ ಜಿಲ್ಲೆಯ ಬಯಲು ಸೀಮೆ ಪ್ರದೇಶಗಳಲ್ಲೂ ಸುರಿದ ಉತ್ತರೆ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿದಿದ್ದು, ಮೊನ್ನೆಯಿಂದ ಪ್ರಾರಂಭವಾದ ಹಸ್ತ  ಮಳೆಯಿಂದ ಬಯಲುಸೀಮೆಯ ರೈತರು ಫುಲ್ ಖುಷಿಯಾಗಿದ್ದಾರೆ. 

ಹಾಸನ ತಾಲೂಕಿನ ದುದ್ದ, ಹೊನ್ನಾವರ, ಚಿಕ್ಕಕಡಲೂರು,  ಹೊನ್ನೇನಹಳ್ಳಿ, ಚಿಟ್ಟನಹಳ್ಳಿ, ಭಾಗದಲ್ಲಿ ಹಸ್ತ ಮಳೆಯ ಆಗಮನ ಜಿಲ್ಲೆಯ ಜನರಿಗೆ ಹರ್ಷ ತಂದಿದೆ. ರಾಗಿ,  ಜೋಳ,  ಶುಂಠಿ ಸೇರಿದಂತೆ ಇತರ ದ್ವಿದಳ ಧಾನ್ಯ ಬೆಳೆಗಳಿಗೆ ಮಳೆಯ ಸಿಂಚನವಾಗಿದ್ದರಿಂದ ಬಂಪರ್ ಬೆಳೆ ಬರಬಹುದು ಎಂಬ ನಿರೀಕ್ಷೆ ರೈತಾಪಿ ವರ್ಗದವರದ್ದು. 

ದುದ್ದ ಪಟ್ಟಣದಲ್ಲಿ ಕೆಲವು ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ನೀರಿನಲ್ಲಿ ಮುಳುಗಿದ್ದು ಅಸಮರ್ಪಕವಾಗಿರುವ ಚರಂಡಿ ವ್ಯವಸ್ಥೆಯೇ ಇದಕ್ಕೆಲ್ಲ ಕಾರಣ ಎಂಬುದು ಸ್ಥಳೀಯರ ಆರೋಪ. 

ಅಲ್ಲದೆ ಎರಡು ದಿನಗಳಿಂದ ಹಾಸನ ತಾಲೂಕಿನ ಶಾಂತಿಗ್ರಾಮ ಹಾಗೂ ಬಯಲು ಸೀಮೆಯ ಚನ್ನರಾಯಪಟ್ಟಣ ಹೋಬಳಿಯ ಬಾಗೂರು ನುಗ್ಗೆಹಳ್ಳಿ ಎಂ. ಶಿವರ, ಕಾರೆಹಳ್ಳಿ, ಚಿಕ್ಕೋನಹಳ್ಳಿ, ಅವ್ವೇರಹಳ್ಳಿ, ಭಾಗದಲ್ಲಿ ಮಳೆಯಾಗಿದ್ದರಿಂದ ರೈತರ ಮುಖದಲ್ಲಿ ಖುಷಿ ತಂದಿದೆ. ದಶಕಗಳ ಕಾಲ ಮಳೆಯಿಲ್ಲದೆ ಬೆಯಿತೆರೆದಿದ್ದ ಭೂತಾಯಿಯ ಮೊಗದಲ್ಲೂ ಹಚ್ಚಹಸಿರು ಕಾಣುತ್ತಿದೆ.  ಕೆರೆಕಟ್ಟೆಯಲ್ಲಿ ನೀರು ಬಂದಿರುವುದರಿಂದ ಜನ ಜಾನುವಾರುಗಳು ಹೆಚ್ಚು ಅನುಕೂಲವಾಗಿದೆ. 

ಒಟ್ಟರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಹಸ್ತ ಮಳೆ ರೈತಾಪಿ ವರ್ಗದವರಿಗೆ ಖುಷಿ ತಂದರೇ,  ನಗರ ಪ್ರದೇಶದ ವಾಸಿಗಳಿಗೆ ಮಾತ್ರ ಜಿಟಿಜಿಟಿ ಮಳೆಯಿಂದ ಮತ್ತೊಮ್ಮೆ ಕಿರಿಕಿರಿಯಾಗುತ್ತಿದೆ.  ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಸಾಕಪ್ಪಾ. .  ಸಾಕು ಅಂತ ವರುಣನಿಗೆ  ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

-Kondinews, Hassan

Last modified on Tuesday, 01 October 2019 20:31
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Oct 03, 2019
ಹಾಸನ: ಜಿಲ್ಲೆಯಾದ್ಯಂತ ಅ.14 ರಿಂದ ನವೆಂಬರ್.4 ರವರೆಗೆ ...
Has no content to show!

Visitors Counter

00553157
Today
This Month
Last Month
All days
233
4009
0
553157
Your IP: 34.237.138.69
2020-11-27 08:12

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…