ಕಸವನ್ನ ತುಂಬಿ ಹಾಕುವ ಮೂಲಕ ಮಾದರಿಯಾದ ಶಾಸಕ

ಹಾಸನ/ಬೇಲೂರು: ಗಾಂಧಿ ಜಯಂತಿ ಅಂಗವಾಗಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಕಸವನ್ನ ವಿಲೇವಾರಿ ಮಾಡುವ ಮೂಲಕ ಇತರರಿಗೆ ಮಾದರಿಯಾದ್ರು. 

ಇಂದು ಬೆಳಗ್ಗೆ ಗಾಂಧಿ ಜಯಂತಿ ಆಚರಣೆಯ ಬಳಿಕ ನಗರದ ಕೆಲವೆಡೆ ರಸ್ತೆಯಲ್ಲಿದ್ದ ಕಸದ ರಾಶಿಯನ್ನ ಕಂಡು ಸ್ವತಃ ಗುದ್ದಲಿಯನ್ನ ಹಿಡಿದು ಕಸವನ್ನ ತುಂಬಿ ವಾಹನಕ್ಕೆ ತುಂಬಿದ್ರು. ಶಾಸಕರು ಕಸವನ್ನ ತೆಗೆಯುತ್ತಿದ್ದಂತೆ ಅವರೊಂದಿಗಿದ್ದ ಕಾರ್ಯಕರ್ತರು, ಮತ್ತು ಅನುಯಾಯಿಗಳು ಸ್ವಯಂ ಪ್ರೇರಿತವಾಗಿ ಸ್ವಚ್ಚ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆಯನ್ನ ಸಂಪೂರ್ಣ ಸ್ವಚ್ಚಗೊಳಿಸಿದ್ರು. 

ವಿಶ್ವದ ಮನ್ನಣೆಗಳಿಸಿದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿಯವರ ಸ್ಮರಣೆ ಆದರ್ಶಗಳನ್ನ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ವಿಷಕಾರಿ ವಸ್ತು. ಅದ್ರ ವಿಲೇವಾರಿ ಬಹಳ ಕಠಿಣ. ಇದು ಪರಿಸರಕ್ಕೆ ಮಾತ್ರವಲ್ಲದೇ ಪಶು-ಪಕ್ಷಿ, ಜಾನುವಾರುಗಳ ಜೀವಕ್ಕೂ ಮಾರಕವಾಗಿದೆ. ಈ ಹಿನ್ನಲೆಯಲ್ಲಿ ಮಹಾತ್ಮಗಾಂಧಿಯವರ 150ನೇ ದಿನದ ಅಂಗವಾಗಿ ರಾಷ್ಟ್ರವಾಪ್ತಿ ಪ್ಲಾಸ್ಟಿಕ ನಿಷೇದ ಜಾರಿಯಾಗಬೇಕು. ಅದಕ್ಕೆ ನಮ್ಮ ಸಹಮತವಿದೆ ಎಂದ್ರು. ಗಾಂಧಿ ಸ್ಮರಣಾರ್ಥ ಪುರಸಭೆ ವತಿಯಿಂದ ಡಾ.ಅಂಬೇಡ್ಕರ್ ವೃತ್ತದ ಸಮೀಪ ಪೌರಕಾರ್ಮಿಕರೊಂದಿಗೆ ಕೈಜೋಡಿಸಿ ಸ್ಚಚ್ಚತಾ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾದ್ರು.  

ಇದೇ ವೇಳೆ ಬೇಲೂರು ಪುರಸಭೆಯ ವತಿಯಿಂದ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆಗಾಗಿ ಹಸಿ ಮತ್ತು ಒಣ ಕಸವನ್ನ ಬೇರ್ಪಡಿಸಲು ಸಹಕಾರಿಯಾಗುವಂತಹ ಬಕೀಟ್ ಗಳನ್ನ ಶಾಸಕ ವಿತರಿಸಿದ್ರು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 18, 2019
ಕೋಲಾರ: ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ...
Has no content to show!

Visitors Counter

00553139
Today
This Month
Last Month
All days
215
3991
0
553139
Your IP: 34.237.138.69
2020-11-27 07:56

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…