ಸ್ವಚ್ಛತಾ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಬೇಕು

ಹಾಸನ/ಶ್ರವಣಬೆಳಗೊಳ: ಸ್ವಚ್ಛತಾ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕು ಎಂದು ಗೈಡ್‌ಲೈನ್‌ ಶಾಲೆಯ ಅಧ್ಯಕ್ಷ ಕೆ.ಆರ್.ರಮೇಶ್ ಹೇಳಿದರು.

ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಸಂತೆ ಮೈದಾನವನ್ನು ಶ್ರಮಧಾನದೊಂದಿಗೆ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಗಾಂಧೀಜಿಯವರ 150ನೇ ಜನ್ಮದಿನೋತ್ಸವ ಅಂಗವಾಗಿ ನಗರದ ಗೈಡ್‌ಲೈನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ವತಿಯಿಂದ  ಹಮ್ಮಿಕೊಂಡಿದ್ದ  ಸಂತೆ ಮೈದಾನ ಸ್ವಚ್ಛತಾ ಕಾರ್ಯಕ್ರಮ  ಬಳಿಕ  ರಮೇಶ್ ಮಾತನಾಡಿದರು . ಎಲ್ಲೆಂದರಲ್ಲಿ ಕಸ ಎಸೆಯುವ ಮೂಲಕ ನಾವೇ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಇನ್ನು ವಿಷ ಯುಕ್ತ ಪ್ಲಾಸ್ಟಿಕ್ಕನ್ನು ಬಳಕೆ ಮಾಡುವ ಮೂಲಕ ಪರಿಸರವು ಹಾಳಾಗುತ್ತಿದ್ದು ಆರೋಗ್ಯದ ಮೇಲೂ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿದೆ ಹಾಗಾಗಿ ನಾವೆಲ್ಲರೂ ನಮ್ಮ ಮತ್ತು ನಮ್ಮ ಪರಿಸರವನ್ನು ಹಸಿರು ಮುಕ್ತ ಮಾಡಿಕೊಂಡು ಬದುಕಬೇಕು ಇಲ್ಲವಾದರೆ ಮುಂದೊಂದು ದಿನ ಪರಿಸರವೇ ನಮಗೆ ಮಾರಕವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಶ್ರವಣಬೆಳಗೊಳದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ ಸಂತೆ ನಡೆದ ಅಲ್ಲಿ ಸ್ವಚ್ಛತೆ ಕಾಣದಿರುವುದು ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದ್ದು ಇಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನೋತ್ಸವದ ಅಂಗವಾಗಿ ಶಾಲೆಯ ಆಡಳಿತ ಮಂಡಳಿ ಮೈದಾನವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಚಾಲನೆ ನೀಡಿದರು. 

2ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 30ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದು ವಿಶೇಷವಾಗಿತ್ತು. ನಿನ್ನೆ ಸಂತೆ ಯಾಗಿದ್ದರಿಂದ  ಸಂತೆಯ ಅವರಣದಲ್ಲಿ  ತ್ಯಾಜ್ಯ  ತುಂಬಿದ್ದು ಇಂದು ಆ ತ್ಯಾಜ್ಯ ಎಲ್ಲವನ್ನ  ಶಾಲಾ ವಿದ್ಯಾರ್ಥಿಗಳು ಸ್ವಚ್ಛಗೊಳಿಸುವ ಮೂಲಕ  ಪುರಸಭೆಗೆ ಮಾದರಿಯಾದರು.

KONDINEWS, SHRAVANABELAGOLA

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 20, 2019
ಹಾಸನ: ಅಂತೂ ಇಂತು ಕೊನೆಗೂ ಸಚಿವ ಸಂಪುಟ ರಚನೆಯಾಯ್ತು. ...
Has no content to show!

Visitors Counter

00553190
Today
This Month
Last Month
All days
266
4042
0
553190
Your IP: 114.119.141.67
2020-11-27 08:50

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…