ಮನೆಹಾನಿ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಹಣ ನೀಡಿ: ಜಿಲ್ಲಾಧಿಕಾರಿ

ಹಾಸನ: ಅತಿವೃಷ್ಠಿಯಿಂದ ಅತೀ ಕಡಿಮೆ ಪ್ರಮಾಣದಲ್ಲಿ ಮನೆಹಾನಿಯಾಗಿ ಪರಿಹಾರ ವಿತರಣೆಗೆ ಬಾಕಿ ಇರುವ 112 ಮನೆಗಳಿಗೆ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಮಾತನಾಡಿದ ಅವರು ಅಧಿಕೃತ ಮನೆಗಳ ಹಾನಿಯ ವಿವರವನ್ನು ರಾಜೀವ್ ಗಾಂಧೀ ಪೋರ್ಟಲ್‍ನಲ್ಲಿ ಜಿ.ಪಿ.ಎಸ್ ನಕಾಶೆಗೆ ಒಳಪಡಿಸುವಂತೆ  ಹೇಳಿದರು. 

ರಾಜ್ಯ ಸರ್ಕಾರದಿಂದ ಜಿಲ್ಲೆಯ ನೆರೆಹಾನಿ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳ ಸಲುವಾಗಿ 15 ಕೋಟಿ ರೂ ನೆರೆ ಹಾನಿ ಪರಿಹಾರ ಹಣ ಬಿಡುಗಡೆಯಾಗಿದ್ದು, ಹಾನಿಗೊಳಗಾಗಿರುವ ಪ್ರಾಥಮಿಕ ಶಾಲಾ ಕಟ್ಟಡಗಳು, ಅಂಗನವಾಡಿ ಮತ್ತು ಆಸ್ಪತ್ರೆ ಕಟ್ಟಡಗಳ ದುರಸ್ಥಿ ಹಾಗೂ ನಿರ್ಮಾಣ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಕ್ರೀಯಾ ಯೋಜನೆ ರೂಪಿಸಿ ಶೀಘ್ರದಲ್ಲಿ ಅನುಮೋದನೆ ಪಡೆಯುವಂತೆ ಪಿ.ಆರ್.ಈ.ಡಿ. ಕಾರ್ಯಪಾಲಕ ಎಂಜಿನಿಯರ್ ಆನಂದ್ ಕುಮಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. 

ಜಿಲ್ಲೆಯಲ್ಲಿ 2018 ರ ಹಿಂಗಾರು ಬರ ಪರಿಹಾರ ಕುರಿತಂತೆ ತಂತ್ರಾಂಶದಲ್ಲಿ 96% ದತ್ತಾಂಶಗಳು ಗಣಕೀಕರಣಗೊಂಡಿದ್ದು, (ಮಾಹಿತಿ ದಾಖಲಾತಿಯಾಗಿದ್ದು) ಪರಿಹಾರ ಹಣ ಬಿಡುಗಡೆಯಾಗಬೇಕಿದೆ ಎಂದು ಅವರು ಹೇಳಿದರು. 

ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಕುಮಾರ್, ಪಿ.ಆರ್.ಈ.ಡಿ. ಕಾರ್ಯಪಾಲಕ ಎಂಜಿನಿಯರ್ ಆನಂದ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಪಾಪಬೋವಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಮಧುಸೂಧನ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರಕಾಶ್ ಸಭೆಯಲ್ಲಿ ಹಾಜರಿದ್ದರು.

  • KondiNews, Hassan. 

 

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Oct 03, 2019
ಹಾಸನ: ಜಿಲ್ಲೆಯಾದ್ಯಂತ ಅ.14 ರಿಂದ ನವೆಂಬರ್.4 ರವರೆಗೆ ...
Has no content to show!

Visitors Counter

00553157
Today
This Month
Last Month
All days
233
4009
0
553157
Your IP: 34.237.138.69
2020-11-27 08:12

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…