ಸಕಾಲದಲ್ಲಿ ಬ್ಯಾಂಕಿನ ಸಾಲಸೌಲಭ್ಯ ದೊರೆಯಲಿ: ಬಿ.ಎ. ಪರಮೇಶ್

ಹಾಸನ: ಬ್ಯಾಂಕುಗಳು ಸಕಾಲದಲ್ಲಿ ಜನಸಾಮಾನ್ಯರಿಗೆ ಸಾಲನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಹೇಳಿದರು.

ಕೇಂದ್ರಿಯ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದ ಮೇರೆಗೆ ಜಿಲ್ಲಾ ಅಗ್ರಣಿ ಬ್ಯಾಂಕ್, ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಹಾಸನದ ಕಲಾಭವನ ಆವರಣದಲ್ಲಿ ವಿಶೆಷ ಗ್ರಾಹಕ ಮೇಳವನ್ನು  ಉದ್ಘಾಟಿಸಿ ಮಾತನಾಡಿದ ಅವರು ಜನ ಸಾಮಾನ್ಯರು ಈ ಹಿಂದೆ ಯಾರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆಯೋ ಅವರಿಗೆ ಸಾಲವನ್ನು ಸ್ಥಳದಲ್ಲಿಯೇ ಮಂಜೂರು ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಇದನ್ನು ಜನ ಸಾಮಾನ್ಯರು ಸದುಪಯೋಗ ಪಡಿಸಿಕೊಳ್ಳಬೇಕು. ಸಾಲ ಸೌಲಭ್ಯ ಬ್ಯಾಂಕ್ ಮತ್ತು ಫಲಾನುಭವಿಗಳ ನಡುವಿನ ನಿರಂತರ ಪ್ರಕ್ರೀಯೇಯಾಗಿದ್ದು ಇದು ನೇರವಾಗಿ ರೈತರಿಗೆ ತಲುಪುವ ಕೆಲಸವಾಗಬೇಕು, ಮಧ್ಯವರ್ತಿಗಳ ಹಾವಳಿ ಇರಬಾರದು ಎಂದರು.

ಬ್ಯಾಂಕ್ ಸಾಲಸೌಲಭ್ಯಗಳಿಂದ ಯುವಕರು ಸಣ್ಣ ಕೈಗಾರಿಕೆಗಳನ್ನು ಅಭಿವೃಧ್ದಿಪಡಿಸಲು ಸಾದ್ಯವಿದೆ ಹಾಗೂ ಅನೇಕ ಆದಾಯ ಮೂಲಗಳನ್ನು ಕಂಡುಕೊಂಡು ಆರ್ಥಿಕ ಸ್ವಾವಲಮಭನೆ ಸಾದ್ಯವಾಗುತ್ತದೆ ಅದೇರೀತಿ ಜನ ಸಾಮಾನ್ಯರೂ ಸಹ ತಾವು ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಬ್ಯಾಂಕಿನಿಂದ ವಿವಿಧ ಉದ್ದೇಶಗಳ ಬಳಕೆಗೆ ನೀಡಿದ ಸಾಲ ಜನಸಾಮಾನ್ಯರ ಹಣವಾಗಿರುತ್ತದೆ ಜನರು ಇದನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದರು.

ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಯೋಗೇಶ್ ಆಚಾರ್ಯ ರವರು ಮಾತನಾಡಿ ಈ ಗ್ರಾಹಕ ಮೇಳವು 2 ಹಂತದಲ್ಲಿ ದೇಶಾದ್ಯಂತ 400 ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 250 ಜಿಲ್ಲೆಗಳಲ್ಲಿ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ರಾಷ್ರೀಕೃತ ಬ್ಯಾಂಕಿನ ಸಹಯೋಗದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ಶಂಕರನಾರಾಯಣ ಅವರು ಮಾತನಾಡಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಹಮ್ಮಿಕೊಳ್ಳಲಾದ ಕಾರ್ಯಕ್ರಮ ಇದಾಗಿದ್ದು ಈ ಮೇಳದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಭಾಗವಹಿಸಿದ್ದು ಆಯಾ ಬ್ಯಾಂಕುಗಳಲ್ಲಿ ದೊರೆಯುವ ಕೃಷಿ, ಸಣ್ಣ ಉದ್ದಿಮೆ, ಗೃಹ ಹಾಗೂ ವಾಹನ ಮತ್ತು ಇನ್ನಿತರ ಸಾಲ ಸೌಲಭ್ಯಗಳನ್ನು ಹಾಗೂ ಅದನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿ ನಿಯಮಾನುಸಾರ ಸಾಲ ಮಂಜುರಾತಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕರಾದ ವಿ.ಜಿ.ಭಟ್ ರವರು ಮಾತನಾಡಿ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸದ್ಯದಲ್ಲೆ ಆಚರಿಸಲ್ಪಡುವ ವಿವಿಧ ಹಬ್ಬಗಳ ಅವಧಿಯಲ್ಲಿ ಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸಾಲ ಸೌಲಭ್ಯಗಳ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಮಹಾಪ್ರಬಂಧಕರಾದ ಟಿ. ಜಗದೀಶ್, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಬಸವರಾಜು, ವಿಭಾಗೀಯ ಪ್ರಬಂಧಕರಾದ ಎ.ಮಂಜುನಾಥ, ವೆಂಕಟರಮಣ, ಬ್ಯಾಂಕ್ ಆಫ್ ಬರೋಡಾದ ಉಪ ಮಹಾ ಪ್ರಬಂಧಕರಾದ ಕೆ.ಆರ್.ಕಲಂಗಳ್, ಎಸ್.ಬಿ.ಐ. ವಿಭಾಗೀಯ ಮಹಾ ಪ್ರಬಂಧಕರಾದ ಸುಮಿಂತ್ರೇಂದ್ರ ರೆಡ್ಡಿ, ಕಾರ್ಪೋರೇಶನ್ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕರಾದ ಎಸ್.ವಿ.ದೇಶಪಾಂಡೆ, ಸಿಂಡಿಕೇಟ್ ಬ್ಯಾಂಕಿನ ವಿಭಾಗೀಯ ಪ್ರಬಂಧಕರಾದ ಕೆ.ವಿ.ಅಶೋಕ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶೇಖರ್ ಶೆಟ್ಟಿ ಮತ್ತಿತರರು ಹಾಜರಿದ್ದರು.

  • Kondinews, Hassan. 
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Aug 18, 2019
ಬಳ್ಳಾರಿ- ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ...
Has no content to show!

Visitors Counter

00553129
Today
This Month
Last Month
All days
205
3981
0
553129
Your IP: 34.237.138.69
2020-11-27 07:41

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…