ಸಾರಿಗೆ ಬಸ್ ಡಿಕ್ಕಿ ವ್ಯಕ್ತಿ ಸ್ಥಳದಲ್ಲೆ ಸಾವು.

ಸಾರಿಗೆ ಬಸ್ ಡಿಕ್ಕಿ ವ್ಯಕ್ತಿ ಸ್ಥಳದಲ್ಲೆ ಸಾವು

ಹಾಸನ: ನಗರದ ರಾಷ್ಟ್ರೀಯ ಹೆದ್ದಾರಿ ೭೫ ರ ತಾಲ್ಲೂಕು ಕಚೇರಿ ಎದುರು ಸಾರಿಗೆ ಬಸ್ ಪಾದಚಾರಿಯ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವೀಗೀಡಾದ ಘಟನೆ ನಡೆದಿದೆ. ನಗರದ ಮೂರನೆ ಸೆಷನ್ಸ್ ನ್ಯಾಯಾಲಯದ ಗುಮಾಸ್ತ ನಾಗಿ‌ ಕಾರ್ಯನಿರ್ವಹಿಸುತ್ತಿದ್ದ ರಮೇಶ್(೫೬) ಮೃತ ವ್ಯಕ್ತಿ. ಎಂದಿನಂತೆ ಕೋರ್ಟ್ ಕೆಲಸಕ್ಕೆ ಹೊರಟಿದ್ದ ರಮೇಶ್‌ ತಮ್ಮ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನ ತಳ್ಳಿಕೊಂಡು ತಾಲ್ಲೂಕು ಕಚೇರಿ ಎದುರಿಂದ‌ ಸರ್ಕಾರಿ‌ ಆಸ್ಪತ್ರೆ ರಸ್ತೆ ಕಡೆಗೆ ದಾಟುತ್ತಿದ್ದ ವೇಳೆ‌‌‌ ಎದುರಿಗೆ ಬಂದ ಬೆಂಗಳೂರಿನ ಕಡೆಗೆ‌ ಹೊರಟಿದ್ದ ಕೆಎ ೧೩ ಎಫ್ ೨೦೧೨ ನಂಬರಿನ ಕೆಎಸ್ ಅರ್ ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ರಮೇಶ್ ತಲೆಗೆ ತೀವ್ರಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೆ ಸಾವೀಗೀಡಾದರು. ಚಾಲಕನ‌ ಅಜಾಗಾರುಕತೆ ಕಾರಣ‌‌ ಅಪಘಾತ ಸಂಭವಿಸಿದೆ ಎಂದು‌ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಘಟನಾ ಸ್ಥಳಕ್ಕಾಗಮಿಸಿದ ಜಿಲ್ಲಾ ಪೋಲೀಸ್ ಅಧೀಕ್ಷಕ ರಾಮ್ ನಿವಾಸ್ ಸಪೇಟ್ ಹಾಗೂ ಎ‌ಎಸ್‌ಪಿ ನಂದಿನಿ‌ ಸ್ಥಳ ಪರಿಶೀಲನೆ‌ ನಡೆಸಿದರು. ಮೃತ‌ ಕುಟುಂಬಕ್ಕೆ ಸಾರಿಗೆ ಇಲಾಖೆಯಿಂದ ೫೦ ಸಾವಿರ ತಾತ್ಕಾಲಿಕ ಪರಿಹಾರ‌ ನೀಡಲಾಗುತ್ತಿದೆ. ನಗರದ ಸಂಚಾರಿ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಪೀಡ್ ಬ್ರೇಕರ್ ಈ ಒಂದು ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನ‌ ಸಂಚಾರವಿರುತ್ತದೆ‌‌ ಅಲ್ಲದೆ ಇಲ್ಲಿ ಕೋರ್ಟ್ , ಸರ್ಕಾರಿ‌ ಆಸ್ಪತ್ರೆ , ಡಿ‌ಸಿ ಕಚೇರಿ ,ತಾಲ್ಲೂಕು ಕಚೇರಿ ಸೇರಿದಂತೆ ಹಲವು ಕಚೇರಿ ಇರುವ ಕಾರಣ ಹೆಚ್ಚಿನ ವಾಹನ‌ ಸಂಚಾರ ಇರುತ್ತದೆ ಹಾಗೂ ಈ ರಸ್ತೆಯಲ್ಲಿ ಸಾಕಷ್ಟು ವಾಹನ ಮಿತಿಮೀರಿದ ವೇಗದಲ್ಲಿ ಸಂಚಾರ ಮಾಡುವ ಕಾರಣ‌ ಇಂತಹ ಅಪಘಾತ ಪದೇಪದೇ ಸಂಭವಿಸುತ್ತಲೆ‌ ಇದೆ . ಆದ್ದರಿಂದ ಈ ರಸ್ತೆಯ ಎರಡು ಬದಿಯಲ್ಲಿ ಸ್ಪೀಡ್ ಬ್ರೇಕರ್ ಹಾಕುವಂತೆ ಸಾರ್ವಜನಿಕರ‌ ಒತ್ತಾಯವಾಗಿದೆ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 03, 2019
ಹಾಸನ: ಮಲೆನಾಡು ಭಾಗದ  ಕಾಡಂಚಿನಿಂದ ಮತ್ತೆ ಕಾಡನೆಗಳು ಈಗ ...
Has no content to show!

Visitors Counter

00553202
Today
This Month
Last Month
All days
278
4054
0
553202
Your IP: 34.237.138.69
2020-11-27 09:09

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…