ಹುಚ್ಚ ವೆಂಕಟ್ ಹುಚ್ಚಾಟ: ಬಿತ್ತು ಸಕತ್ ಗೂಸಾ...!!

ಕೊಡಗು: ಸ್ಯಾಂಡಲ್ ವುಡ್ ನಟ ಹುಚ್ಚಾ ವೆಂಕಟ್ ಸ್ಥಳೀಯ ನಿವಾಸಿ ಜೊತೆ ವಿನಾಃ ಕಾರಣ ಜಗಳ ತೆಗೆದು ಥಳಿಸಿ ನಂತರ ಹಲ್ಲೆಗೊಳಗಾದವನಿಂದಲೇ ಗೂಸಾ ನೀಡಿದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪ ನಡೆಯಿತು‌. 

ನಾಪೋಕ್ಲು ನಿವಾಸಿ ದಿಲೀಪ್ ವೆಂಕಟ್‌ನಿಂದ ಹಲ್ಲೆಗೊಳಗಾದ ಯುವಕ. ನಗರದ ಹೋಟೆಲ್ ಕೂರ್ಗ್ ಮ್ಯಾಂಡ್ರಿಲ್ ಬಳಿ ಕಾರನ್ನು ಪಾರ್ಕಿಂಗ್ ಮಾಡಿದ್ದ ದಿಲೀಪ್ ವೆಂಕಟ್ ಅವರನ್ನು ಇವರು ಹುಚ್ಚಾ ವೆಂಕಟ್ ಇರಬಹುದು ಎಂದು ಆಶ್ಚರ್ಯದಿಂದ ನೋಡಿದ್ದಾರೆ. ಅದಕ್ಕೆ ಏನ್ ಹಾಗೆ ನೋಡ್ತಿದಿಯಾ ಎಂದು ಕಪಾಳ ಮೋಕ್ಷ ಮಾಡಿದ್ದಾರೆ. ನಾನು ಹುಚ್ಚಾ ವೆಂಕಟ್ ಹೆಸರಷ್ಟೇ ಅಂದುಕೊಂಡಿದ್ದೆ. ನಿಜವಾಗಲೂ ಇವನು ಹುಚ್ಚನೇ ಎಂದು ಹಲ್ಲೆಗೊಳಗಾದ ದಿಲೀಪ್ ಆರೋಪಿಸಿದ್ದಾರೆ. 

ಅಷ್ಟಕ್ಕೆ ಸುಮ್ಮನಿರದ ವೆಂಕಟ್ ಕೆಲಕಾಲ ಆತಂಕವನ್ನೇ ಸೃಷ್ಟಿಸಿದರು. ಪುಟ್‌ಫಾತ್ ಮೇಲೆಲ್ಲಾ ದಿಲೀಪ್‌ಗೆ ಹೊಡೆಯಲು ಅಟ್ಟಾಡಿಸಿದರು.ಅಲ್ಲದೆ ಹೊಟೇಲ್ ಮುಂದೆ ನಿಲ್ಲಿಸಿದ್ದ ಅವರ ಮಾರುತಿ 800 ಕಾರಿನ ಮೇಲೆ ಕಲ್ಲು ಎಸೆದು ಪುಡಿಮಾಡಿ ಇದ್ರ ಬೆಲೆ ಎಷ್ಟಾಗುತ್ತೆ ಹೇಳೋ..?. ನೀನೇನು ರೌಡಿನಾ..? ಯಾರನ್ನ ಕರೆಸುತ್ತೀಯಾ ಕರೆಸು.. ಎಂದೆಲ್ಲಾ ಆವಾಜ್ ಹಾಕಿದರು‌. ವೆಂಕಟ್ ಹುಚ್ಚಾಟ ನೋಡಿದ ದಿಲೀಪ್ ಮತ್ತು ಸಂಗಡಿಗರು ಗೂಸಾ ಕೊಟ್ಟರು.ಅಷ್ಟರಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ವೆಂಕಟ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.

 ನ್ಯೂಸ್ ಬ್ಯೂರೋ...ಕೊಂಡಿ ನ್ಯೂಸ್...

Read 48 times Last modified on Sunday, 01 September 2019 02:17
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 18, 2019
ಕೋಲಾರ: ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ...
Has no content to show!

Visitors Counter

00553139
Today
This Month
Last Month
All days
215
3991
0
553139
Your IP: 34.237.138.69
2020-11-27 07:56

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…