Today: 26.Apr.2018

ಶ್ರೀರೆಡ್ಡಿ ಸದಸ್ಯತ್ವ ರದ್ದು:ಟಾಲಿವುಡ್ ಸ್ಪಷ್ಪನೆ.

 ಅರೆ ಬೆತ್ತಲಾಗಿದ್ದ ನಟಿಗೆ ಸದಸ್ಯತ್ವ ಇಲ್ಲ: ಟಾಲಿವುಡ್ ಸ್ಪಷ್ಟನೆ

08 Apr 2018 0 comment
(0 votes)
 

ಹೈದರಾಬಾದ್​: 'ಆಕೆಯ ದುರ್ವರ್ತನೆಯೇ ಸಂಘದ ನಿರ್ಧಾರಕ್ಕೆ ಕಾರಣ, ಅಕೆಯ ಅರ್ಜಿಯನ್ನು ನಿರಾಕರಿಸುತ್ತಿದ್ದೇವೆ' ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿಗೆ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಮೂವಿ ಆರ್ಟಿಸ್ಟ್​ ಅಸೋಸಿಯೇಷನ್​ (ಎಂಎಎ) ತಿಳಿಸಿದೆ.

ಶ್ರೀ ರೆಡ್ಡಿ ಅವರು ಸಾರ್ವಜನಿಕವಾಗಿ ತೋರಿದ ವರ್ತನೆಯಿಂದಾಗಿ ಸಂಘ ಮುಜುಗರಕ್ಕೀಡಾಗಿದ್ದು, ಅವರ ದುರ್ವರ್ತನೆಯಿಂದಾಗಿಯೇ ಅವರಿಗೆ ಸದಸ್ಯತ್ವ ನೀಡಲು ಸಾದ್ಯವಿಲ್ಲ. ಅವರು ಈ ಮೊದಲು ಸಂಘದ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಸಲ್ಲಿಸಿದ್ದ ಅರ್ಜಿ ಸಮರ್ಪಕವಾಗಿರಲಿಲ್ಲ ಎಂದು ಸಂಘದ ಅಧಿಕಾರಿ ಶಿವಾಜಿ ರಾಜ ಅವರು ತಿಳಿಸಿದ್ದಾರೆ. ಒಂದು ವೇಳೆ ಶ್ರೀರೆಡ್ಡಿ ಕುರಿತು ಸಂಘ ಮೃದು ಧೋರಣೆ ಅನುಸರಿಸಿದರೆ, ಭವಿಷ್ಯದ ನಟ ನಟಿಯರೂ ಇದೇ ದಾರಿ ತುಳಿಯುವ ಅಪಾಯವಿದೆ. ಹೀಗಾಗಿ ಶ್ರೀರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶ್ರೀ ರೆಡ್ಡಿ ಅವರು ಶನಿವಾರ ತೆಲುಗು ಫಿಲಂ ಚೇಂಬರ್​ ಆಫ್​ ಕಾಮರ್ಸ್​ ಕಚೇರಿಯ ಮುಂದೆ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಘೋಷಣೆ ಕೂಗಿ ಅರಬೆತ್ತಲಾಗಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಗ್ನವಾದ ಫೋಟೋ ಮತ್ತು ವಿಡಿಯೋ ಕಳುಹಿಸುವಂತೆ ಹಲವರು ಬೇಡಿಕೆ ಒಡ್ಡಿದ್ದರು. ಬೇರೆ ದಾರಿ ಕಾಣದೆ ಹಾಗೆ ನಡೆದುಕೊಂಡರೂ ಸಹ ನಂತರ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದರು. ಇನ್ನು ನಟಿ ಶ್ರೀರೆಡ್ಡಿ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಚಟುವಟಿಕೆ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.

More in this category: « ಬಾಹುಬಲಿ-2
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: