Today: 18.Oct.2017
ಚಾಮರಾಜನಗರ

ಚಾಮರಾಜನಗರ (2)

ರೊಟ್ಟಿ ಹಬ್ಬ ಇಲ್ಲಿ ಫೆಮಸ್ಸು

ನಿಗಿ ನಿಗಿ ಕೆಂಡದ ರಾಶಿ.. ಅದರ ಮೇಲೆ ರೊಟ್ಟಿ ಕಾಯಿಸುವುದರಲ್ಲಿ ನಿರತರಾದ ಜನರು. ಘಮಘಮಿಸುವ ಅವರೆಕಾಯಿ, ಕುಂಬಳಪಲ್ಯ.. ನೆರೆದವರ ಮುಖದಲ್ಲಿ ಸಡಗರ ಸಂಭ್ರಮ.. ಇದೆಲ್ಲ ಕಂಡು ಬಂದಿದ್ದು ಚಾಮರಾಜನಗರದ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯ ರೊಟ್ಟಿಹಬ್ಬದಲ್ಲಿ.

ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಕೌಡಿಹಳ್ಳ ಗ್ರಾಮದ ಕಾಡಂಚಿನ ನಂದಿಕಂಬದ ಗುಡ್ಡೆ ಕುಂಬೇಶ್ವರ ದೇವಾಲಯ ಬಳಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ರೊಟ್ಟಿಹಬ್ಬವನ್ನು ಆಧುನಿಕತೆಯ ಕಾಲಘಟ್ಟದಲ್ಲಿಯೂ ಗಿರಿಜನರು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.

ಹಬ್ಬ ನಡೆಯುವ ವ್ಯಾಪ್ತಿಯ ಗ್ರಾಮದ ಗಿರಿಜನರು ಕೃಷಿಯನ್ನು ನಂಬಿ ಬದುಕುತ್ತಿದ್ದಾರೆ. ಸುಗ್ಗಿಕಾಲ ಆರಂಭವಾಗಿ ಧಾನ್ಯ ಮನೆಗೆ ಬರುತ್ತಿದ್ದಂತೆಯೇ ಅದರಲ್ಲಿ ಒಂದಷ್ಟನ್ನು ಉಪಯೋಗಿಸದೆ ಮಡಿಯಿಂದ ಜೋಪಾನವಾಗಿ ತೆಗೆದಿಡುತ್ತಾರೆ.
ಬೀಸುವ ಕಲ್ಲಿನಿಂದ ಹಿಟ್ಟು ತಯಾರಿಸಿ ನಿಗದಿತ ದಿನದಂದು ಊರವರೆಲ್ಲ ಸೇರಿ ರೊಟ್ಟಿ ಮಾಡಿ ಕುಲದೇವರಿಗೆ ನೈವೇದ್ಯ ಅರ್ಪಿಸಿ ಕುಟುಂಬಕ್ಕೂ, ಬೆಳೆಯುವ ಬೆಳೆಗೂ ಯಾವುದೇ ತೊಂದರೆಯಾಗದಿರಲಿ ಎಂದು ಬೇಡಿಕೊಳ್ಳುವುದು ರೊಟ್ಟಿ ಹಬ್ಬದ ವಿಶೇಷ. ಹಿಂದಿನಿಂದಲೂ ನಡೆದುಕೊಂಡು ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ

ಬೇಯಿಸಿದ ರೊಟ್ಟಿಯನ್ನೆಲ್ಲೇ ಗುಡ್ಡೆ ಹಾಕಿ ಅದರ ಜತೆಗೆ ಅವರೇಕಾಯಿ ಕುಂಬಳಯಿಂದ ತಯಾರಿಸಿದ ಪಲ್ಯ ಮತ್ತು ಅನ್ನ ಸಾರು ತಯಾರಿಸಿ ಕುಲದೇವರಿಗೆ ನೈವೇದ್ಯವನ್ನು ಬಡಿಸಲಾಗುತ್ತದೆ. ದೇವರಿಗೆ ನೈವೇದ್ಯ ನೀಡಿದ ನಂತರ ನೆರೆದವರೆಲ್ಲರೂ ಒಂದೆಡೆ ಕುಳಿತು ಸಾಮೂಹಿಕ ಭೋಜನ ಸವಿಯುತ್ತಾರೆ. ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬ ಕಳೆದ ಬಳಿಕ ನಡೆಯುವ ಈ ಹಬ್ಬ ಸಂಪ್ರದಾಯ, ಸಹಬಾಳ್ವೆ, ಪ್ರಕೃತಿ ಪೂಜೆ ಹೀಗೆ ಹಲವು ವೈಶಿಷ್ಟ್ಯತೆಯನ್ನು ಸಾರುತ್ತಾ ಬರುತ್ತಿದೆ.

Saturday, 23 January 2016 Written by

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits