Today: 18.Nov.2018
ಹಾಸನ

ಹಾಸನ (6)

ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಶಾಸ್ತ್ರ ಪದವಿ ಪಡೆದವರಿಗೆ ಉದ್ಯೋಗಾವಕಾಶ ಹೆಚ್ಚು- ಪುಟ್ಟಸ್ವಾಮಿ

ಕೊಣನೂರು: ಯಾವುದೇ ವಿಭಾಗದ ಪದವಿಗಳಿಗೆ ಹೋಲಿಕೆ ಮಾಡಿ ನೋಡಿದರೆ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಾಗಿ ಲಭ್ಯವಾಗುತ್ತದೆ

Wednesday, 07 October 2015 Written by

ಬನ್ನೂರು ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

ಕೊಣನೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೀಡುವ ೨೦೧೪-೧೫ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹೋಬಳಿಯ ಬನ್ನೂರು ಗ್ರಾಮ ಪಂಚಾಯತಿ ಆಯ್ಕೆಯಾಗಿದ್ದು, ಗಾಂಧಿ

Wednesday, 07 October 2015 Written by

ದೃಡೀಕೃತ ಬಿತ್ತನೆ ಆಲೂಗೆಡ್ಡೆ ಬೀಜದ ಫಲಶೃತಿ ಮತ್ತು ವಿಚಾರ ಸಂಕೀರಣ

ಹಾಸನ, ಅಕ್ಟೋಬರ್ 5- ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಹಾಸನ ಹಾಗೂ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿ ಕಾವಲು ಹಾಸನ ರವರ ಸಹಯೋಗದಲ್ಲಿ ದಿನಾಂಕ

Wednesday, 07 October 2015 Written by

ಜೀರ್ಣೋದ್ಧಾರ ಕಾಮಗಾರಿ :ಉಪವಿಭಾಗಾಧಿಕಾರಿ ಮಧುಕೇಶ್ವರ್ ಪರಿವೀಕ್ಷಣೆ

ಕೊಣನೂರು: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಕೊಳಲು ಗೋಪಾಲಕೃಷ್ಣ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ಸಕಲೇಶಪುರದ ಉಪವಿಭಾಗಾಧಿಕಾರಿ ಮಧುಕೇಶ್ವರ್ ಪರಿವೀಕ್ಷಣೆ ಮಾಡಿದರು.

Wednesday, 07 October 2015 Written by

ಸಿಗರನಹಳ್ಳಿಯಲ್ಲಿ ಶಾಂತಿ ಸಭೆ

ಹಾಸನ, ಸೆಪ್ಟಂಬರ್ 29: ದಲಿತರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಿ ಸಮಸ್ಯೆ ತಲೆದೋರಿದ್ದ ಹೊಳೆನರಸೀಪುರ ತಾಲ್ಲೂಕು ಸಿಗರನಹಳ್ಳಿಯಲ್ಲಿ ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸಗಲ್ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸುತ್ತಿನ ಶಾಂತಿ ಸಭೆ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಉಪವಿಭಾಗಾಧಿಕಾರಿ ವಿಜಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಶೋತ್ತಮ ಮತ್ತಿತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಘಟಿಸಲಾಗಿದ್ದ ಸಭೆಯಲ್ಲಿ ದಲಿತರ ದೈನಂದಿನ ಬದುಕು ಹಾಗೂ ದುಡಿಮೆಗೆ ಅಗತ್ಯ ಏರ್ಪಾಡುಗಳನ್ನು ಮಾಡುವ ಸಲುವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಲಾಯಿತು.

ಉದ್ಯೋಗ ಕಾರ್ಡ್ ಹೊಂದಿರುವ ಎಲ್ಲರಿಗೂ ಗ್ರಾಮದಲ್ಲೇ ಕಡ್ಡಾಯವಾಗಿ ಉದ್ಯೋಗ ಸೃಷ್ಠಿಸಿ ನೀಡುವುದು. ಕೃಷಿ ಜಮೀನು ಹೊಂದಿರುವ ದಲಿತರಿಗೆ ತಮ್ಮ ಜಮೀನು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಉದ್ಯೋಗ ಸೃಷ್ಠಿಮಾಡಿಕೊಡುವಂತೆ ಜಿಲ್ಲಾಧಿಕಾರಿ ಉಮೇಶ್ ಹೆಚ್. ಕುಸಗಲ್ ಅವರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ರಹಿತರಿಗೆ ಮನೆ, ಅಗತ್ಯವಿರುವವರಿಗೆ ದನದ ಕೊಟ್ಟಿಗೆ ಹಾಗೂ ಶೌಚಗೃಹ ರಹಿತರಿಗೆ ಕಟ್ಟಡ ನಿರ್ಮಾಣ, ಅಗತ್ಯವಿರುವ ಎಲ್ಲಾ ನೆರವನ್ನೂ ಒದಗಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ದಲಿತ ಕಾಲೋನಿಯಲ್ಲಿ ಹಾಲಿ ಇರುವ ಕೊಳವೆ ಬಳಸಿ ಕಿರು ನೀರು ಸರಬರಾಜು ಯೋಜನೆ ಒದಗಿಸುವಂತೆ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗೆ ನಿರ್ದೇಶನ ನೀಡಿದ ಅವರು ಸಿಗರನಹಳ್ಳಿಯ ದಲಿತ ಕಾಲೋನಿಗಳಿಗೆ ರಸ್ತೆ, ಚರಂಡಿ, ಮತ್ತಿತರ ಮೂಲಭೂತ ಸೌಕರ್ಯವನ್ನು ಒದಗಿಸಲು ಕ್ರಮ ವಹಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳು ಸೂಚಿಸಿದರು.

2008ರಿಂದಲೂ ಉದ್ಘಾಟನೆಯಾಗದ ಸಮುದಾಯ ಭವನದಲ್ಲಿ ಬಾಕಿ ಇರುವ ಕಾಮಗಾರಿಯನ್ನು ೧೫ ದಿನದೊಳಗೆ ಪೂರ್ಣಗೊಳಿಸಿ ಎಲ್ಲಾ ಜನ ಸಮುದಾಯದ ಸೇವೆಗೆ ದೊರೆಯುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಿರಿಯ ಇಂಜಿನಿಯರ್ ಅವರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ತಲತಲಾಂತರದಿಂದ ನೆಲೆಸಿರುವ ಗ್ರಾಮಸ್ಥರು ಪರಿಸರ ಸ್ನೇಹ ಸಹಬಾಳ್ವೆಯಿಂದ ಬದುಕಬೇಕು ಎಂದು ಕಿವಿ ಮಾತು ಹೇಳಿದ ಜಿಲ್ಲಾಧಿಕಾರಿ ಮನೆಗಳನ್ನು ವಸತಿರಹಿತರಿಗಷ್ಟೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಕನಿಷ್ಠ 1 ಎಕರೆ ಜಮೀನು ಹೊಂದಿರುವ ದಲಿತ ಸಮುದಾಯದ ರೈತರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬೋರ್‌ವೆಲ್ ಸೌಲಭ್ಯ ಒದಗಿಸಲು ಸೂಚಿಸಿದಾಗ ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಗ್ರಾಮದಲ್ಲಿ ಸಂವಿಧಾನ ಬದ್ಧವಾಗಿ ದಲಿತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಧಿಕಾರಿ ಜವರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Tuesday, 29 September 2015 Written by

ಕೊಣನೂರಿನಲ್ಲಿ ಚೊಚ್ಚಲ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ

ಕೊಣನೂರು: ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಮೊದಲನೆಯ ವರ್ಷದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವನ್ನು ಬಹು ಸಡಗರದಿಂದ ಆಚರಣೆ ಮಾಡಲಾಯಿತು. ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು ೧೯೩೭ಕ್ಕೆ ಸಲ್ಲುವ ಮನ್ಮಥನಾಮ ಸಂವತ್ಸರ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ದಶಿಯಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಗಂಗಾವರಣ ಗಣಪತಿ ಹೋಮ, ಕಾಳಿಕಾ ಹೋಮ, ನವಗ್ರಹ ಹೋಮ ಹಾಗೂ ಪ್ರಧಾನ ವಿಶ್ವಕರ್ಮ ಹೋಮಾದಿಗಳು ಮತ್ತು ಶ್ರೀ ಕಾಳಿಕಾಂಬ ಅಮ್ಮನವರ ಮೂರ್ತಿಗೆ ಪಂಚಾಮೃತ ಅಭೀಷೇಕ, ವಿಶೇಷ ಅಲಂಕಾರ ತದನಂತರ ಪಂಚಾಬ್ರಹ್ಮಾದಿ ಜಯಾದಿ ಹೋಮಗಳು, ಪೂಣಾಹುತಿ, ಬಲಿಹರಣ ಅಷ್ಟೋತ್ತರ ಪೂಜಾವಿದಿ ವಿಧಾನಗಳು ಮತ್ತು ಪಟ್ಟಣದ ರಾಜ ಬೀದಿಗಳಲ್ಲಿ ವಿಶ್ವಕರ್ಮಮೂರ್ತಿಯ ಮೆರವಣಿಗೆ ನಂತರ ಸ್ವಸ್ತಿ ವಾಚನದೊಂದಿಗೆ ಮಹಾಮಂಗಳಾರತಿ ಅನಂತರ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಹೋಬಳಿಯ ಶ್ರೀ ವಿಶ್ವಕರ್ಮ ಸಮಾಜ ಸಂಘದ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ನಾಗರಾಜಚಾರ್, ಅಧ್ಯಕ್ಷ ಸುಬ್ಬಣ್ಣಾಚಾರ್, ಉಪಾಧ್ಯಕ್ಷ ಕೆ.ಎನ್.ಹರೀಶ್, ಖಜಾಂಚಿ ಬಿ.ಪಿ.ಆನಂದ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಘವೇಂದ್ರ, ಸಹ ಕಾರ್ಯದರ್ಶಿ ಗಣೇಶ್, ನಿರ್ದೇಶಕರುಗಳು, ಸದಸ್ಯರುಗಳು ಹಾಗೂ ಸುತ್ತಮುತ್ತಲ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

Tuesday, 29 September 2015 Written by

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: