Today: 18.Nov.2018
ಕ್ರೀಡಾ ಕೊಂಡಿ

ಕ್ರೀಡಾ ಕೊಂಡಿ (9)

ಕ್ರಿಕೇಟ್ ಪಂದ್ಯಾವಳಿ

ಡಾ.ಬಿ.ಆರ್.ಅಂಬೇಡ್ಕರ್ ಕಪ್ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ 2008

Friday, 06 April 2018 Written by

ಭಾರತ ಫೈನಲಿಗೆ.

ಅಂಡರ್ 19 ವಿಶ್ವಕಪ್: ಲಂಕಾ ಮಣಿಸಿದ ಭಾರತ ಫೈನಲಿಗೆ.

Tuesday, 09 February 2016 Written by

ದ್ರಾವಿಡ್ ಶಿಷ್ಯರಿಂದ ಅಭ್ಯಾಸ ಪಂದ್ಯದಲ್ಲೇ ಭರ್ಜರಿ ಆಟ

ಅಂಡರ್ 19 ವಿಶ್ವಕಪ್ ಗಾಗಿ ಪೂರ್ವ ತಯಾರಿ ನಡೆಸಿರುವ ಭಾರತದ ಯುವ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಇಶಾನ್ ಕಿಶಾನ್ ನೇತೃತ್ವದಲ್ಲಿ ಕೆನಡಾ ವಿರುದ್ಧ 372 ರನ್ ಗಳ ಬೃಹತ್ ಅಂತರದ ಜಯ ದಾಖಲಿಸಿದೆ.

ಕೆನಡಾ ವಿರುದ್ಧ 50 ಓವರ್ ಗಳಲ್ಲಿ 485/3 ಸ್ಕೋರ್ ಮಾಡಿದ ಯುವ ಭಾರತ ತಂಡ ನಂತರ ಕೆನಡಾ ತಂಡವನ್ನು 113 ಸ್ಕೋರಿಗೆ ನಿಯಂತ್ರಿಸಿ ಭರ್ಜರಿ ಜಯ ದಾಖಲಿಸಿದೆ. ಭಾರತ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಜನವರಿ 25ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

ಬಾಂಗ್ಲಾದೇಶದ ಕ್ರಿರಾ ಶಿಖಾ ಪ್ರತಿಷ್ಠಾನ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ನಾಯಕ ಇಶಾನ್ ಕಿಶನ್ 138 ರನ್ ಹಾಗೂ ರಿಕಿ ಭುಯಿ 115 ರನ್ ಅಮೋಘ ಜೊತೆಯಾಟ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.

ಶತಕ ವೀರರಿಬ್ಬರೂ ಮಿಕ್ಕವರಿಗೆ ಅಭ್ಯಾಸವಾಗಲಿ ಎಂದು ನಿವೃತ್ತಿ ಪಡೆದು ಪೆವಿಲಿಯನ್ ಗೆ ಬಂದರು. ನಂತರ ಮಹಿಪಾಲ್ ಅವರು 23 ಎಸೆತಗಳಲ್ಲಿ 55 ರನ್ ಬಾರಿಸಿದರು.[ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿಶನ್ ನಾಯಕ] 485ರನ್ ಚೇಸ್ ಮಾಡಿದ ಕೆನಡಾ ತಂಡ 31.1 ಓವರ್​ಗಳಲ್ಲಿ ಕೇವಲ 113 ರನ್​ಗೆ ಆಲೌಟಾಗಿ ಸೊಲೊಪ್ಪಿಕೊಂಡಿತು. ಭಾರತ: 6 ವಿಕೆಟ್​ಗೆ 485 (ಇಶಾನ್ ಕಿಶನ್ 138, ರಿಕಿ ಭುಯಿ 115, ರಿಷಭ್ ಪಂತ್ 62, ಲಾಮ್ರರ್ 55*, ಸರ್ಫ್ರಾಜ್​ಖಾನ್ 48, ಅಬ್ದುಲ್ ಹಸೀಬ್ 56ಕ್ಕೆ 1), ಕೆನಡಾ: 31.1 ಓವರ್​ಗಳಲ್ಲಿ 113 ( ಹರ್ಷ್ ಠಾಕರ್ 25, ಶುಭಂ ಮವಿ 20ಕ್ಕೆ 2, ಜೀಶನ್ ಅನ್ಸಾರಿ 39ಕ್ಕೆ 2, ಲಾಮ್ರರ್ 19ಕ್ಕೆ 3). ಆಸ್ಟ್ರೇಲಿಯಾ ತಂಡ 19 ವಯೋಮಿತಿಯ ಏಕದಿನ ಕ್ರಿಕೆಟ್​ನಲ್ಲಿ 2002ರಲ್ಲಿ 480 ರನ್ ಬಾರಿಸಿದ್ದು ದಾಖಲೆ. ಭಾರತ 2004ರಲ್ಲಿ 425 ರನ್ ಮೊತ್ತ 2ನೇ ಸ್ಥಾನದಲ್ಲಿದೆ.

ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯವಾಗಿದ್ದರೂ ಇದು ಅಧಿಕೃತ ದಾಖಲೆಯಾಗಿ ಪರಿಗಣಿಸುತ್ತಿಲ್ಲ. ಡಿ ಗುಂಪಿನಲ್ಲಿರುವ ಭಾರತ ತಂಡದ ಜೊತೆಗೆ ಐರ್ಲೆಂಡ್, ನೇಪಾಳ ಹಾಗೂ ನ್ಯೂಜಿಲೆಂಡ್ ಕೂಡಾ ಸ್ಪರ್ಧಿಸುತ್ತಿವೆ. ಜನವರಿ 28 ಗುರುವಾರ ಮಿರ್ಪುರ್ ನಲ್ಲಿ ಐರ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಪಂದ್ಯವಾಡಲಿದೆ. ಜನವರಿ 27 ರಿಂದ ಫೆಬ್ರವತರಿ 14ರ ತನಕ ವಿಶ್ವಕಪ್ ನಡೆಯಲಿದೆ

Sunday, 24 January 2016 Written by

ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ

ಬೆಂಗಳೂರು, ಅ.05: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತನ್ನ ಸುದೀರ್ಘ ಪ್ರವಾಸವನ್ನು ಗೆಲುವಿನ ಮೂಲಕ ಆರಂಭಿಸಿದೆ.

Wednesday, 07 October 2015 Written by

ಆಸ್ಟ್ರೇಲಿಯಾದಲ್ಲಿ 'ಬೆಸ್ಟ್ ಇನ್ನಿಂಗ್ಸ್' ಪಟ್ಟಿಯಲ್ಲಿ ಸೆಹ್ವಾಗ್ ಶತಕ!

ಮೆಲ್ಬೋರ್ನ್, ಸೆ. 22: ಭಾರತ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಅವರ ಶತಕವೊಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟರ್ ಗಳು ಬಾರಿಸಿರುವ ಬೆಸ್ಟ್ ಇನ್ನಿಂಗ್ಸ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

Wednesday, 07 October 2015 Written by

ಅಸ್ಸಾಂನಲ್ಲಿ ಹೈಡ್ರಾಮಕ್ಕೆ ತುತ್ತಾದ ವಿನಯ್ ಪಡೆ

ಗುವಹಾಟಿ, ಅ.5: ಹಾಲಿ ಚಾಂಪಿಯನ್ ಕರ್ನಾಟಕ ಗೆಲುವಿನ ಕನಸು ಭಗ್ನಗೊಳ್ಳುವುದಕ್ಕೂ ಮುನ್ನ ಆಟೋರಿಕ್ಷಾದಲ್ಲಿ ಸುತ್ತಾಡಿ ಬಸವಳಿದು ಮೈದಾನಕ್ಕೆ ಬಂದಿಳಿದ ಘಟನೆ ನಡೆದಿದೆ.

Wednesday, 07 October 2015 Written by

ಕ್ರಿಕೆಟ್ : 'ಮಂಕಿ ಗೇಟ್' ಬಗ್ಗೆ ಅನಿಲ್ ಕುಂಬ್ಳೆ ವಿಷಾದ

ಮುಂಬೈ, ಅ.05: ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯದ ನಡುವೆ ಕಪ್ಪುಚುಕ್ಕೆಯಾದ 'ಮಂಕಿ ಗೇಟ್' ಪ್ರಕರಣದ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತೊಮ್ಮೆ

Wednesday, 07 October 2015 Written by

ಭಾರತ-ಪಾಕಿಸ್ತಾನ ಸರಣಿಗೆ ಬಗ್ಗೆ ಹೊಸ ಅಧ್ಯಕ್ಷರು ಹೇಳಿದ್ದೇನು?

ಮುಂಬೈ, ಅ.04: ನಾಗಪುರ ಮೂಲದ ವಕೀಲ ಶಶಾಂಕ್ ಮನೋಹರ್ ಅವರು ಎರಡನೇ ಬಾರಿಗೆ ಭಾರತೀಯ ಕ್ರಿಕೆಟ್ ಚುಕ್ಕಾಣಿ ಹಿಡಿದಿದ್ದಾರೆ.

Wednesday, 07 October 2015 Written by

ಅಪ್ರಾಪ್ತ ಮನೆಕೆಲಸದಾಕೆ ಮೇಲೆ ಹಲ್ಲೆ, ಕ್ರಿಕೆಟರ್ ಪತ್ನಿ ಬಂಧನ

ಢಾಕಾ, ಅ.04: ಅಪ್ರಾಪ್ತ ಮನೆ ಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಕ್ರಿಕೆಟರ್ ಶಹದಾತ್ ಹುಸೇನ್ ಪತ್ನಿಯನ್ನು ಬಾಂಗ್ಲಾದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಾಂಗ್ಲಾದೇಶದ ತಂಡದ ವೇಗಿ ಶಹದಾತ್ ಹಾಗೂ ಆತನ ಪತ್ನಿ ವಿರುದ್ಧ 11 ವರ್ಷ ವಯಸ್ಸಿನ ಮನೆಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಕ್ರಿಕೆಟರ್ ಮನೆಯಲ್ಲಿ ಹಲ್ಲೆಗೊಳಗಾಗಿ ಅಸ್ವಸ್ಥಳಾಗಿದ್ದ ಹುಡುಗಿಯನ್ನು ರಕ್ಷಿಸಿದ ಪತ್ರಕರ್ತರೊಬ್ಬರು ಇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.

ಹುಡುಗಿಯಿಂದ ಹೇಳಿಕೆ ಪಡೆದ ಪೊಲೀಸರು, ಆಕೆ ಮೈಮೇಲಾಗಿದ್ದ ಗಾಯವನ್ನು ಪರೀಕ್ಷಿಸಿದ್ದಾರೆ. ನಂತರ ಢಾಕಾ ಮೆಡಿಕಲ್ ಕಾಲೇಜ್ -ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ದೂರು ದಾಖಲಿಸಿಕೊಂಡು ಕ್ರಿಕೆಟರ್ ಮನೆ ಕಡೆಗೆ ವಿಚಾರಣೆಗಾಗಿ ತೆರಳಿದ್ದಾರೆ. ಅಷ್ಟರಲ್ಲೇ ವೇಗಿ ಶಹದಾತ್ ಅವರು ಮಿರ್ ಪುರ್ ಪೊಲೀಸರಿಗೆ ದೂರು ನೀಡಿ ಮನೆಕೆಲಸದಾಕೆ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ಇಬ್ಬರ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 29 ವರ್ಷ ವಯಸ್ಸಿನ ಬಾಂಗ್ಲಾದೇಶದ ಶಹದಾತ್ 38 ಟೆಸ್ಟ್ ಪಂದ್ಯ ಹಾಗೂ 51 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಕಳೆದ ಮೇ ತಿಂಗಳಿನಲ್ಲಿ ಆಡಿದ್ದ ಹುಸೇನ್ ನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಹುಸೇನ್ ಪತ್ನಿ ಸದ್ಯ ಪೊಲೀಸರ ವಶದಲ್ಲಿದ್ದು, ಹುಸೇನ್ ನಾಪತ್ತೆಯಾಗಿದ್ದಾರೆ.

 

Sunday, 04 October 2015 Written by

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: