Today: 18.Nov.2018
ಚುನಾವಣಾ ಸುದ್ದಿ

ಚುನಾವಣಾ ಸುದ್ದಿ (8)

ನೀತಿ ಸಂಹಿತೆ ಉಲ್ಲಂಘನೆ-ಪ್ರಕರಣ ದಾಖಲು

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಪ್ರಕ್ರಿಯೆ ಚುರುಕು ಬಿರುಸಿನ ತಪಾಸಣೆ

Friday, 06 April 2018 Written by

ಜೆಡಿಎಸ್ ಸಭೆ

60ವರ್ಷದ ಕಾಂಗ್ರೆಸ್ ದುರಾಡಳಿತವನ್ನು ಜನ ನೋಡಿ ಬೇಸತ್ತಿದ್ದಾರೆ ಅರಸೀಕೆರೆಯಲ್ಲಿ ರೇವಣ್ಣ ಗುಡುಗು

Friday, 06 April 2018 Written by

ನೀತಿ ಸಂಹಿತೆ ಉಲ್ಲಂಘನೆ

ನೀತಿ ಸಂಹಿತೆ ಉಲ್ಲಂಘನೆ: ಸಚಿವ .ಮಂಜು ವಿರುದ್ಧ ಮೊಕದ್ದಮೆ ದಾಖಲು

Thursday, 05 April 2018 Written by

ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯಥಿ೯

ಹೊಸಕೋಟೆ  ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯಥಿ೯ಯಾಗಿ ಶರತ್ ಬಚ್ಚೇಗೌಡ ಖಚಿತ

Thursday, 05 April 2018 Written by

ಕೈಲಾಗದವರಿಂದ ಪಕ್ಷಾಂತರ ತಂತ್ರ

ನಾವರ್ೆ ಸೋಮಶೆಖರ್ ವಿರುದ್ದ ಶಾಸಕ ಎಚ್.ಕೆ.ಕುಮಾರಸ್ವಾಮಿ ಆಕ್ರೋಶ

ಸಕಲೇಶಪುರ: ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರ ಅಧಿಕಾರ ಹಂಚಿಕೆ ವಿಚಾರದಲ್ಲಿ ಆಗಿರುವ ಸಹಜ ಗೊಂದಲಗಳನ್ನೇ ಬಂಡವಾಳ ಮಾಡಿಕೊಂಡ ಕೆಲವು ಬಿಜೆಪಿ ಮುಖಂಡರು ಹಾಗೂ ಅಭ್ಯಥರ್ಿ ಎಂದು ಹೇಳಿಕೊಂಡಿರುವ ಸೋಮಶೇಖರ್ ಒತ್ತಾಯಪೂರ್ವಕವಾಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಜೆಡಿಎಸ್ ಬೆಂಬಲಿತ ಕೆಲವು ಗ್ರಾಪಂ ಸದಸ್ಯರಿಗೆ ಆಮಿಷಗಳನ್ನು ಒಡ್ಡಿ ಪಕ್ಷಾಂತರ ಮಾಡಿಸಿಕೊಳ್ಳುತ್ತಿರುವ ಬಿಜೆಪಿಯ ಕೆಲವರು ನೇರವಾಗಿ ಎದುರಿಸಲು ಸಾಧ್ಯವಾಗದೆ ಕೈಲಾಗದವರು ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರುಗಳ ಹಣದ ಆಟ ಇಲ್ಲಿ ನಡೆಯಲಾರದು, ಅವರದು ಮೂರ್ಖತನದ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು.

ಉದೇವಾರ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಏಕೈಕ ಸದಸ್ಯರಿದ್ದು ಅವರನ್ನು ಹೊರತುಪಡಿಸಿ ಈಗ ಬಿಜೆಪಿ ಸೇರಿರುವ ಎಲ್ಲರೂ ಸಹ ಬಿಜೆಪಿ ಬೆಂಬಲಿತರೇ ಆಗಿದ್ದು ಅವರ ಪಕ್ಷದವರನ್ನು ಮತ್ತೆ ಅವರ ಪಕ್ಷಕ್ಕೇ ಸೇರಿಸಿಕೊಳ್ಳುವ ಹುಚ್ಚಾಟ ಪ್ರದಶಿಸುತ್ತಿದ್ದಾರೆ. ಇದು ಅನಾಗರಿಕರು ಮಾಡುವ ಕೆಲಸವಾಗಿದೆ, ಬಂಡವಾಳಶಾಹಿಗಳು ಹಣದಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬ ಭಾವನೆಯಿಂದ ಮುಜರಾಯಿ ದೇವಸ್ಥಾನಗಳಿಗೂ ಹಣ ಕೊಡುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜನರ ಬಡತನವನ್ನೇ ಬಂಡವಾಳಮಾಡಿಕೊಂಡು ಹಲವು ಆಮಿಷಗಳನ್ನು ಒಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿರುವ ನಾವರ್ೆ ಸೋಮಶೇಖರ್ ಹಾಗೂ ಅವರ ಸಹಚರರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಲಾಗುವುದು. ಇಷ್ಟು ವರ್ಷ ಶಾಂತಿಯುತ ಮತದಾನ ನಡೆದ ಕ್ಷೇತ್ರ ಈಗ ಸೂಕ್ಷ್ಮ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಆಮಿಷಗಳು ಒಡ್ಡುವವರು ಯಾರೇ ಆದರೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು ಹಾಗೂ ಬಣ್ಣದ ಮಾತುಗಳಿಗೆ ಬೆರಗಾಗದೆ ತಮ್ಮಿಷ್ಟದ ಅಭ್ಯಥರ್ಿಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ, ನಾವರ್ೆಯಲ್ಲಿ ಭೂಮಿಕೊಂಡಾಕ್ಷಣ ಬೆಂಗಳೂರಿನ ಸೋಮ ನಾವರ್ೆ ಸೋಮಶೆಖರ್ ಆಗಲು ಸಾಧ್ಯವಿಲ್ಲ. ಕ್ಷೇತ್ರದ ಬಗ್ಗೆ ಕಾಳಜಿಯೇ ಇಲ್ಲದೆ ಜನರ ಮೇಲೆ ಬಂಡವಾಳ ಹೂಡಿ ತಮ್ಮ ಪ್ರಾಭಲ್ಯ ವೃದ್ದಿಸಿಕೊಲ್ಳುವ ಪ್ರಯತ್ನ ಮಲೆನಾಡಿನಲ್ಲಿ ನಡೆಯದು. ಅವರ ಆಟಗಳಿಗೆ ಯಾರೂ ಸಹ ಹೆದರುವ ಅಗತ್ಯವಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶಾಂತಿಯುತ ಮತದಾನ ನಡೆಯಲು ಅವಕಾಶ ಮಾಡಿಕೊಡಬೇಕು. ದೂರುಗಳು ಬರುವ ವರೆಗೂ ಕಾಯದೆ ಸುಮೋಟೋ ಕಾಯಿದೆಯಡಿ ತಪ್ಪಿತಸ್ಥರ ವಿರುದ್ದ ಸ್ವಯಂ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಸೋಮಶೆಖರ್ ಮಾತನಾಡಿ, ಬೆದರಿಕೆ, ದಬ್ಬಾಳಿಕೆ, ಹಣದ ಆಟಗಳಿಗೆ ಜನರು ಹೆದರುವ ಅಗತ್ಯವಿಲ್ಲ. ಮತದಾರರ ರಕ್ಷಣೆಗೆ ಕಾನೂನಿದೆ. ಇಷ್ಟು ವರ್ಷ ನಡೆದಂತೆ ಶಾಂತಿಯುತ ಮತದಾನ ನಡೆಯಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಯಸಳೂರು ಗ್ರಾಪಂ ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷ ಯೋಗೇಶ್ ಇದ್ದರು.

 ಸಕಲೇಶಪುರದಲ್ಲಿ ಗುರುವಾರ ಶಾಸಕ ಎಚ್.ಕೆ.ಕುಮಾರಸ್ವಾಮಿ ಪತ್ರಿಕಾಗೊಷ್ಟಿ ನಡೆಸಿದರು.

Thursday, 05 April 2018 Written by

ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಸಮರ್ಥ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದಾರೆ

ಹಾಸನ: ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಸಮರ್ಥ ಕಾಂಗ್ರೆಸ್ ಅಭ್ಯಥರ್ಿಗಳು ಇದ್ದರೂ ಕೂಡ ಕೊರತೆ ಇದೆ ಎಂಬ ಅಪಾದನೆ ಮಾಡಿರುವುದು

Saturday, 31 March 2018 Written by

ಚುನಾವಣೆಗೆ ಜೋಶಿ ಸಾರಥಿ

ಮಂಡ್ಯ,ಜನವರಿ,21: ರಾಜ್ಯ ಬಿಜೆಪಿ ಸಾರಥ್ಯ ಬಿ.ಎಸ್.ಯಡಿಯೂರಪ್ಪ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ನೇತೃತ್ವದಲ್ಲೇ ನಡೆಯಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

Saturday, 23 January 2016 Written by

ಹೆಬ್ಬಾಳಕ್ಕೆ ಜಮೀರ್ ಮಾತು ಅಂತಿಮ

ಬೆಂಗಳೂರು, ಜನವರಿ 23 : ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Saturday, 23 January 2016 Written by

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: