Today: 18.Nov.2018

ಜೆಡಿಎಸ್ ಸಭೆ

60ವರ್ಷದ ಕಾಂಗ್ರೆಸ್ ದುರಾಡಳಿತವನ್ನು ಜನ ನೋಡಿ ಬೇಸತ್ತಿದ್ದಾರೆ ಅರಸೀಕೆರೆಯಲ್ಲಿ ರೇವಣ್ಣ ಗುಡುಗು

06 Apr 2018 0 comment
(0 votes)
 

ಅರಸೀಕೆರೆ: 2018ರ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಜಡಿಎಸ್ ಸಭೆ ನಡೆಸಿತು. ಸಭೆಯಲ್ಲಿ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮಾಜಿ ಸಚಿವ ರೇವಣ್ಣ ಕಾಂಗ್ರೆಸ್ ನಿಂದ ದೇವೇಗೌಡ್ರು ಕಲಿಯಬೇಕಾದ್ದು ಏನು ಇಲ್ಲ, ಇವರ 60ವರ್ಷದ ದುರಾಡಳಿತವನ್ನು ಜನ ನೋಡಿ ಬೇಸತ್ತಿದ್ದಾರೆ. ಪ್ರಧಾನ‌ಮಂತ್ರಿಯಾದಾಗ ಹತ್ತೂವರೆ ತಿಂಗಳ ಆಡಳಿತದಲ್ಲಿ ನಾವೇನು ಅಂತ ದೇವೇಗೌಡ್ರು ತೋರಿಸಿಕೊಟ್ಟಿದ್ದಾರೆ.  ರಾಷ್ಟ್ರೀಯ ನಾಯಕನನ್ನು ರಸ್ತೆಗೆ ಇಳಿಸುವಂತಹ ಪರಿಸ್ಥಿತಿ ಕಾಂಗ್ರೆಸ್ ನವರದ್ದು, ಒಂದೆಡೆ ಪಕೋಡ, ದಾವಣೆಗೆರೆನಲ್ಲಿ ಬೆಣ್ಣೆ ದೋಸೆ  ಮಂಗಳೂರಿನಲ್ಲಿ ಮೀನು ತಿನ್ನಿಸುತ್ತಾರೆ. ನಾಚಿಕೆ ಆಗಬೇಕು. ಅನ್ನಭಾಗ್ಯ ಯೋಜನೆಯ ಮೂಲ ದೇವೆಗೌಡ್ರು, ಅವರು ಮಾಡಿದ ಯೋಜನೆಯನ್ನು ಇಟ್ಟುಕೊಂಡು ಈಗ ಸಿದ್ದರಾಮಯ್ಯ  ಬೀಗುತ್ತಿದ್ದಾರೆ ಎಂದರು.

ಬಳಿಕ ಮಾತನಾಡಿದ ಕೆ.ಎಂ ಶಿವಲಿಂಗೇಗೌಡ ಅರಸೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ. ಅರಸೀಕೆರೆ ಹುಲಿ ಶಿವಲಿಂಗೇಗೌಡನನ್ನ ಎದುರಿಸಲು ಎಲ್ಲರೂ ಹೆದರುತ್ತಿದ್ದಾರೆ. ಅರಸೀಕೆರೆ ಜೆಡಿಎಸ್ ನ ಭದ್ರಕೋಟೆ, ಇಲ್ಲಿ ಜೆಡಿಎಸ್ ನ ಯಾರೇ ಒಬ್ಬ ನಿಂತರೂ ಶಾಸಕನನ್ನಾಗಿ ಮಾಡುವ ತಾಕತ್ತು ಇಲ್ಲಿನ ಕಾರ್ಯಕರ್ತರಿಗಿದೆ, ಜೆಡಿಎಸ್ ಎಂಬ ಆಲದಮರದ ಒಂದು ಸಣ್ಣ ಬೇರನ್ನೂ ಅಲಗಾಡಿಸಲು ಆಗುವುದಿಲ್ಲ ಎಂದು ಕಾಂಗ್ರೇಸ್ ವಿರುದ್ದ ಗುಡುಗಿದರು.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: