Today: 18.Nov.2018

ನೀತಿ ಸಂಹಿತೆ ಉಲ್ಲಂಘನೆ-ಪ್ರಕರಣ ದಾಖಲು Featured

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಪ್ರಕ್ರಿಯೆ ಚುರುಕು ಬಿರುಸಿನ ತಪಾಸಣೆ

06 Apr 2018 0 comment
(0 votes)
 

ಹಾಸನ, ಏಪ್ರಿಲ್ 6: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ಕಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿ ತಂಡಗಳು ಹೆಚ್ಚಿನ ನಿಗಾ ವಹಿಸಿದ್ದು ಎಲ್ಲೆಡೆ ತಪಾಸಣೆ ಚುರುಕುಗೊಳಿಸಲಾಗಿದೆ.

ಅಬಕಾರಿ ಇಲಾಖೆ ವಿವಿಧ ದಾಳಿಗಳ ಮೂಲಕ ಸುಮಾರು 55 ಪ್ರಕರಣಗಳನ್ನು ಈವರೆಗೆ ದಾಖಲಾಗಿವೆ. ಪೊಲೀಸ್ ಇಲಾಖೆ ಮಾರ್ಚ್ 27ರಿಂದ ಏಪ್ರಿಲ್ 5ರವರೆಗೆ 113 ಅಬಕಾರಿ ದಾಳಿಗಳನ್ನು ಪ್ರತ್ಯೇಕವಾಗಿ ಕೈಗೊಂಡಿದೆ,. ಇದರಲ್ಲಿ 304 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಅಲ್ಲದೆ ಭದ್ರತಾ ಕಾಯ್ದೆಯಡಿಯಲ್ಲಿ 513 ಪ್ರಕರಣ ದಾಖಲಿಸಿದೆ. ಇದೇ ರೀತಿ ಪೊಲೀಸ್ ಇಲಾಖೆ ವತಿಯಿಂದ 7 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ಮಾ.31ರಂದು ಮುಜಾವರ್ ಮೊಹಲ್ಲಾದಲ್ಲಿ ಎಂ.ಇ.ಪಿ. ಪಕ್ಷದ ಚುನಾವಣಾ ಪ್ರಚಾರ ಸಾಮಗ್ರಿಗಳ ಅಕ್ರಮ ದಾಸ್ತಾನು ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಸಯ್ಯದ್ ಸಾದತ್ ಅವರ ಮೇಲೆ ಪ್ರಕರಣ ದಾಖಲಿಸಿದೆ. ಇದೇ ದಿನ ಸಕಲೇಶಪುರ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಕೊಳವೆ ಬಾವಿ ಕೊರೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಅನ್ಸುಬಾಲ್ಗನ್, ಕಮಲ್, ಮಣಿ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿದೆ. ಜೊತೆಗೆ ಸಕಲೇಶಪುರ ತಾಲ್ಲುಕು ಎಡೆಹಳ್ಳಿ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಕೊಳವೆ ಬಾವಿ ಕೊರೆಯುತ್ತಿದ್ದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಸಂಥೀಲ್ ಮುರುಗನ್, ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದೆ.

ಇಷ್ಟೆಯಲ್ಲದೇ ಏ.1ರಂದು ಬೇಲೂರು ಕ್ಷೇತ್ರದ ಗಂಗೂರು ಮತ್ತು ಸಾಣೇನಹಳ್ಳಿ ಗ್ರಾಮ ಪಂಚಾಯಿತಿ ಜೆ.ಡಿ.ಎಸ್. ಕಾರ್ಯಕರ್ತರು ಪಕ್ಷದ ಸಭೆ ನಡೆಸಿ ಅನುಮತಿ ಇಲ್ಲದೆ ಆಹಾರ ವಿತರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ. ಹಾಗೂ ಅನುಮತಿ ಇಲ್ಲದೆ ವಾಹನಗಳನ್ನು ಬಳಸಿದ ಕಾರಣಕ್ಕಾಗಿ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಹಾಸನ ತಾಲ್ಲೂಕು ಜೆ.ಡಿ.ಎಸ್.ಅಧ್ಯಕ್ಷರು ಹಾಗೂ ಕೆ.ಎ.16 8736 ಖಾಸಗಿ ಬಸ್ ಮಾಲೀಕರು, ಇತರ 70 ಇತರೆ ವಾಹನಗಳ ಮಾಲೀಕರ ಮೇಲೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏ.3ರಂದು ಫ್ಲೈಯಿಂಗ್ ಸ್ಕ್ವಾಡ್ ಸದಸ್ಯರು ಸಾಲಗಾಮೆ ರಸ್ತೆಯಲ್ಲಿ ವಿಜ್ಞಾನ ಕಾಲೇಜಿನ ಮುಂಭಾಗ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಸಂದರ್ಭದಲ್ಲಿ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಕೆಲವು ವಾಹನಗಳಲ್ಲಿ ಅನುಮತಿ ಇಲ್ಲದೆ ಜೆ.ಡಿ.ಎಸ್.ಪಕ್ಷದ ಬಾವುಟ ಹಾಕಿದ್ದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಹಾಸನ ತಾಲ್ಲೂಕು ಬಡಾವಣೆ ಠಾಣೆಯಲ್ಲಿ ತಾಲ್ಲೂಕು ಜೆ.ಡಿ.ಎಸ್.ಪಕ್ಷದ ಅಧ್ಯಕ್ಷರಾದ ದ್ಯಾವೇಗೌಡರ ಹಾಗೂ ಇತರೆ 8 ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿದೆ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: