Today: 26.Apr.2018

ಅಕ್ರಮ ಹಣ ವಶ.

ದಾಖಲೆಯಿಲ್ಲದ ಸುಮಾರು 5ಲಕ್ಷಕ್ಕೂ ಹೆಚ್ಚು ಹಣ ವಶ

09 Apr 2018 0 comment
(1 Vote)
 

ತುರುವೇಕೆರೆ/ವಿಜಯಪುರ: ತಾಲ್ಲೂಕಿನ ಬಾಣಸಂದ್ರದ ಮುತ್ತಿನಮ್ಮ ದೇವಸ್ಥಾನದ ಮುಂಭಾಗದ ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಸುಮಾರು ರೂ. 77 ಸಾವಿರ ಒಡವೆ ಹಾಕುವ ಖಾಲಿ ಬಾಕ್ಸ್ ವಿತರಕರ ಬಳಿ ಎಸ್‌ಎಸ್‌ಟಿ ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.ಬೆಂಗಳೂರಿನ ಮಾಗಡಿ ರಸ್ತೆಯ ಒಡವೆ ಹಾಕುವ ಖಾಲಿ ಬಾಕ್ಸ್ ವಿತರಕರಾದ ನರೇಶ್‌ಕುಮಾರ್ (34) ಮತ್ತು ಲಲಿತ್ (25) ಎಂಬುವರು ತಮಗೆ ಒಡವೆ ಹಾಕುವ ಬಾಕ್ಸ್ ಆರ್ಡ‌ರ್ ನೀಡಿದ ಚಿನ್ನ ಬೆಳ್ಳಿ ಅಂಗಡಿಗಳಿಗೆ ಬಾಕ್ಸ್‌ಗಳನ್ನು ತಯಾರಿಸಿ ನೀಡುವ ಉದ್ದೇಶದಿಂದ ಬೆಂಗಳೂರಿನಿಂದ ಕಾರಿನಲ್ಲಿ ತೆರಳಿ ತುರುವೇಕೆರೆಯ ಅಂಗಡಿಗಳಿಗೆ ಬಾಕ್ಸ್ ನೀಡಿ ಮತ್ತೆ ತಿಪಟೂರಿಗೆ ತೆರಳಿದ್ದರು ಎನ್ನಲಾಗಿದೆ. ಹಣಕ್ಕೆ ಸೂಕ್ತ ದಾಖಲೆ ನೀಡಬೇಕು. ಇಲ್ಲವಾದರೆ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ದೇವರಾಜ್ ಅವರು ತಿಳಿಸಿದ್ದಾರೆ.

ಇದೇ ರೀತಿ ವಿಜಯಪುರದ ಚುನಾವಣಾ ವಿಚಕ್ಷಕ ದಳದ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.8 ಲಕ್ಷ ರೂಪಾಯಿ ವಶಕ್ಕೆಪಡೆಯಲಾಗಿದೆ. ವಿಜಯಪುರ ನಗರದ ಅಥಣಿ ನಾಕಾ ಬಳಿ ಹೂಡೈ ಕಾರಿನಲ್ಲಿ ಪತ್ತೆಯಾದ ಹಣ 4.8 ಲಕ್ಷ ರೂಪಾಯಿಗಳನ್ನ ಚುನಾವಣಾಧಿಕಾರಿ ಆನಂದ ದೇವರನಾವದಗಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ ಹಣ ವಶಕ್ಕೆ ಪಡೆದಿದ್ದಾರೆ. ವಿಜಯಪುರದಿಂದ ಅಥಣಿ ಮಾರ್ಗವಾಗಿ ತೆಗೆದುಕೊಂಡು ಹೊರಟಿದ್ದ ಹಣ ಯಾರಿಗೆ ಸೇರಿದ್ದು ಅನ್ನೋದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಸಿಕ್ಕಿಲ್ಲ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: