Today: 21.Feb.2018

ಜನ್ಮಾಭಿಷೇಕ

ಆದಿನಾಥ ತೀರ್ಥಂಕರರಿಗೆ ಜನ್ಮಕಲ್ಯಾಣ ಮಹೋತ್ಸವ:

Friday, 09 February 2018 Written by

ಪಂಚಕಲ್ಯಾಣದ ವೈಭವ

ಆದಿನಾಥನಿಗೆ ಇಂದಿನಿಂದ ಪಂಚಕಲ್ಯಾಣ ವೈಭವ:

Thursday, 08 February 2018 Written by

ಮಸ್ತಕಾಭಿಷೇಕ ಉದ್ಘಾಟನೆ

ಮಹಾಮಸ್ತಕಾಭಿಷೇಕಕ್ಕೆ ಅದ್ದೂರಿ ಚಾಲನೆ: ಹರಿದು ಬಂತು ಭಕ್ತ ಸಾಗರ.

Wednesday, 07 February 2018 Written by

ವಿವಿಧ ಭೋಜನ

ಮಹಾಮಸ್ತಕಾಭಿಷೇಕಕ್ಕೆ ಬರುವ ಭಕ್ತಾಧಿಗಳಿಗೆ ನಿತ್ಯ ವಿವಿಧ ಭೋಜನ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಭಕ್ತರಿಂದ ದವಸ ಧಾನ್ಯಗಳ ಮಹಾಪೂರವೇ ಹರಿದು ಬರುತ್ತಿದೆ. 12 ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲು ಅಪಾರ ಸಂಖ್ಯೆಯ ದಾನಿಗಳು ಮಠದ ಜತೆ ಕೈಜೋಡಿಸಿದ್ದಾರೆ.

ವಿವಿಧೆಡೆಯಿಂದ ಜೈನ ಸಮಾಜದವರು ಟನ್‌ಗಟ್ಟಲೇ ಆಹಾರ ಪದಾರ್ಥ ಕಳುಹಿಸಿಕೊಡುತ್ತಿದ್ದಾರೆ. ಸಕ್ಕರೆ, ಅಕ್ಕಿ, ಬೆಲ್ಲ, ಗೋಧಿ, ಗೋಧಿ ಹಿಟ್ಟು, ಎಣ್ಣೆ, ಉಪ್ಪು, ರವೆ, ತೊಗರಿಬೇಳೆ, ಉದ್ದಿನಬೇಳೆ, ಹೆಸರುಕಾಳು, ಕಡಲೆ ಬೀಜ, ಹೆಸರು ಬೇಳೆ, ಅವಲಕ್ಕಿ, ಮೆಣಸಿನಕಾಯಿ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಹುಣಸೆ ಹಣ್ಣು, ಉತ್ತತ್ತಿ, ತುಪ್ಪ, ರಾಗಿ, ಜೋಳವನ್ನು ಮಠಕ್ಕೆ ದಾನ ನೀಡಿದ್ದಾರೆ.

ಅಂದಾಜಿನ ಪ್ರಕಾರ ಈವರೆಗೂ 667 ಟನ್‌ ಆಹಾರ ಪದಾರ್ಥ ಸಂಗ್ರಹವಾಗಿದೆ. ಭಕ್ತರು, ಗಣ್ಯರು, ಪ್ರವಾಸಿಗರು, ತ್ಯಾಗಿಗಳು, ಯಾತ್ರಾರ್ಥಿಗಳು ಸೇರಿದಂತೆ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಉಪಾಹಾರ, ಮಧ್ಯಾಹ್ನ ಭೋಜನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಸಮಿತಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಇದಕ್ಕಾಗಿ ಆರು ಬೃಹತ್‌ ಅಡುಗೆ ತಯಾರಿಸುವ ಸ್ಥಳ ಹಾಗೂ 17 ಭೋಜನಾ ಶಾಲೆ ನಿರ್ಮಿಸಲಾಗಿದ್ದು, ಪ್ರತಿ ಅಡುಗೆ ಕೋಣೆಯಲ್ಲಿ 120 ಬಾಣಸಿಗರು ಕೆಲಸ ನಿರ್ವಹಿಸಲಿದ್ದಾರೆ. ಹಾಗೆಯೇ ಭೋಜನಾ ಶಾಲೆಯಲ್ಲಿ 10 ಸಾವಿರ ಜನರಿಗೆ ಆಹಾರ ವಿತರಿಸಲು ಕೆಲಸಗಾರರನ್ನು ನೇಮಕ ಮಾಡಲಾಗಿದೆ.

ಭಕ್ತರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದು, ಈಗಲೂ ಟನ್‌ಗಟ್ಟಲೇ ಆಹಾರ ಧಾನ್ಯಗಳನ್ನು ಲಾರಿಗಳಲ್ಲಿ ತಂದು ಕೊಡುತ್ತಿದ್ದಾರೆ. ಎಷ್ಟೇ ಜನರು ಬಂದರೂ ಆಹಾರ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೃಹತ್‌ ಅಡುಗೆ ಕೋಣೆ, ಊಟದ ಸಭಾಂಗಣ ಸಜ್ಜುಗೊಂಡಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಮಿತಿಯ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಇಪ್ಪತ್ತು ದಿನವೂ ದಕ್ಷಿಣ ಭಾರತದ ಆಹಾರ ನೀಡಲಾಗುವುದು ಎಂದು ಆಹಾರ ಸಮಿತಿ ಅಧ್ಯಕ್ಷ ಮೈಸೂರಿನ ವಿನೋದ್‌ಕುಮಾರ್‌ ಬಾಕ್ಲಿವಾಲ್‌ ‘ಪ್ರಜಾವಾಣಿಗೆ ತಿಳಿಸಿದರು. ‘ಪಂಚಕಲ್ಯಾಣ ಮತ್ತು ಆರಾಧನೆಗಳು ನಡೆಯುವ ಫೆ. 7ರಿಂದಲೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.

ಉಪಾಹಾರ: ದಕ್ಷಿಣ ಭಾರತದ ಪದ್ಧತಿಯಂತೆ 20 ದಿನವೂ ವಿವಿಧ ರೀತಿಯ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಉಪಾಹಾರ: ಕೇಸರಿಬಾತ್‌, ಉಪ್ಪಿಟ್ಟು, ಇಡ್ಲಿ, ದೋಸೆ, ಸೆಟ್‌ ದೋಸೆ, ಅವಲಕ್ಕಿ, ಪಲಾವ್‌, ಟೊಮೆಟೊ ಬಾತ್‌, ಪೊಂಗಲ್‌, ಪುಳಿಯೊಗರೆ, ಪಾಯಸ, ಪೂರಿ ಸಾಗು, ಚಪಾತಿ, ಕಾಫಿ/ಚಹಾ. ಮಧ್ಯಾಹ್ನ, ರಾತ್ರಿ ಊಟ: ಅನ್ನ ಸಾಂಬಾರು, ಶೇಂಗಾ ಚಟ್ನಿ, ತರಕಾರಿ, ಕಾಳಿನ ಪಲ್ಯ, ದಾಲ್‌, ತಿಳಿಸಾರು, ಹೋಳಿಗೆ, ರೊಟ್ಟಿ, ಚಪಾತಿ, ಪೂರಿ, ಹಪ್ಪಳ, ಸಿಹಿ ತಿಂಡಿ, ಉಪ್ಪಿನಕಾಯಿ ಹೀಗೆ ಹತ್ತು ಹಲವು ತರಹವೇರಿ ತಿನಿಸುಗಳಿವೆ.

ಕೊಂಡಿನ್ಯೂಸ್...ಹಾಸನ.

Tuesday, 06 February 2018 Written by

ಭಕ್ತರಿಗೆ ವಸ್ತ್ರ-ಧಾನ್ಯ ದಾನ

ಶ್ರವಣಬೆಳಗೊಳ: ಯಾವುದೇ ಶುಭ ಸಂದರ್ಭಕ್ಕೆ ಚಾಲನೆ ನೀಡುವ ಮೊದಲು ಜನಸಾಮಾನ್ಯರಿಗೆ ಹೊಸ ಬಟ್ಟೆ ಹಾಗೂ ಸಿಹಿ ಭೋಜನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಸಂಪ್ರದಾಯ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಪಟ್ಟಣದ ಚಾವುಂಡರಾಯ ಮಂಟಪದಲ್ಲಿ 'ಚತುರ್ವಿದ ದಾನ ಪ್ರವರ್ತನೆ ಸಮಾರಂಭ' ಮಾತನಾಡಿದ ಅವರು, ಕ್ಷೇತ್ರದ ಪೂರ್ವ ಪರಂಪರೆಯಂತೆ ಆಹಾರ, ಔಷಧ, ಶಾಸ್ತ್ರ ಹಾಗೂ ಅಭಯ ಎಂಬ ನಾಲ್ಕು ತರಹದ ದಾನ ನೀಡುವ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಬೆಳಗೊಳದಲ್ಲಿ ನಡೆಯುವ ಜಾತ್ರೆ, ಇತರೆ ಶುಭ, ಸಂದರ್ಭಗಳಲ್ಲಿ ದಾನಗಳನ್ನು ನೀಡುತ್ತಾ ಬಂದಿದ್ದೇವೆ. ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸುತ್ತಮುತ್ತಲಿನ ಬಸದಿಗಳಲ್ಲಿ ಪೂಜೆ ಸಲ್ಲಿಸುವ ಪುರೋಹಿತರಿಗೆ ಹಾಗೂ ಮಠದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಸುತ್ತಮುತ್ತಲ ಗ್ರಾಮ ಪಂಚಾಯಿತಿ ನೌಕರರಿಗೆ ಈ ಸಂದರ್ಭದಲ್ಲಿ ಅಕ್ಕಿ, ಬೆಲ್ಲ, ಗೋಧಿ, ಎಣ್ಣೆ, ಉಪ್ಪು, ಹುಣಸೆ ಹಣ್ಣು, ಸಾಂಬರ್‌ ಪದಾರ್ಥ, ಸೀರೆ, ಶಲ್ಯ ಹಾಗೂ ಪಂಚೆಗಳನ್ನು ದಾನವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿ ಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಸತೀಶ್ ಜೈನ್, ಎಸ್‌ಡಿಜೆಎಂಐಎಂಸಿ ಸದಸ್ಯರಾದ ಎಚ್‌.ಪಿ,ಅಶೋಕ್ ಕುಮಾರ್, ಎಸ್.ಪಿ.ಭಾನುಕುಮಾರ್ ಹಾಜರಿದ್ದರು.

Tuesday, 06 February 2018 Written by

ಪೆಟ್ ಬಾಟಲ್ ಘಟಕ

ಪೆಟ್ ಬಾಟಲ್ ಘಟಕ ಸ್ಥಾಪನೆ:ಹೆಚ್.ಡಿ.ರೇವಣ್ಣ

Monday, 05 February 2018 Written by

ಕೀ ಹಸ್ತಾಂತರ.

ಉಪನಗರಗಳ ಬೀಗದ ಕೀ ಹಸ್ತಂತರ: ಸಚಿವ ಮಂಜು.

Tuesday, 06 February 2018 Written by

ಸಿಬಿಐಗೆ ವಹಿಸಲಿ:ಎಚ್.ಡಿ.ರೇವಣ್ಣ

2006ರ ಮಸ್ತಕಾಭಿಷೇಕದ ಬಗ್ಗೆ ಸಿಬಿಐಗೆ ವಹಿಸಲಿ:ಎಚ್.ಡಿ.ರೇವಣ್ಣ

Sunday, 04 February 2018 Written by

ಜಾಲಂಧ್ರ

ಶ್ರವಣಬೆಳಗೊಳದ ಚಂದ್ರಗಿರಿಯ ಜಲಾಂಧ್ರಗಳು:

Sunday, 04 February 2018 Written by

ಮಹಾಮಸ್ತಕಾಭಿಷೇಕ ಸಿದ್ದತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚು ಕಾಳಜಿಯಿದೆ: ಹೆಚ್.ಸಿ.ಮಹದೇವಪ್ಪ 

Friday, 02 February 2018 Written by
Page 1 of 30

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters