Today: 22.Oct.2017

ಚೈತ್ರಾ ಎತ್ತಂಗಡಿ Featured

ಜಿಲ್ಲಾಧಿಕಾರಿ ವಿ.ಚೈತ್ರಾ ಎತ್ತಂಗಡಿ

ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ದಾಸರಿ.

13 Jul 2017 0 comment
(0 votes)
 

ಹಾಸನ, ಜು.೧೨: ಜಿಲ್ಲಾಧಿಕಾರಿಯಾಗಿ ಬಂದ ಒಂದು ವರ್ಷದಲ್ಲಿಯೇ ವಿ.ಚೈತ್ರಾರವರನ್ನ ಎತ್ತಂಗಡಿ ಮಾಡಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಉಮೇಶ ಕುಸುಗಲ್ ಎತ್ತಂಗಡಿ ಬಳಿಕ ವಿ.ಚೈತ್ರಾ ಜಿಲ್ಲಾಧಿಕಾರಿಯಾಗಿ ಬಂದಿದ್ದರು.

ವಿ.ಚೈತ್ರಾರವರು ಜಿಲ್ಲಾಧಿಕಾರಿಯಾಗಿ ಕೆಲ ತಿಂಗಳುಗಳಲ್ಲಿಯೇ ಜೆಡಿಎಸ್ ಶಾಸಕರ ವಿರೋಧ ಕಟ್ಟಿಕೊಂಡಿದ್ದರು. ಅದರಲ್ಲೂ ಜೆಡಿಎಸ್ ಶಾಸಕರಾದ ಎಚ್.ಡಿ.ರೇವಣ್ಣ ಮತ್ತು ಎಚ್.ಎಸ್.ಪ್ರಕಾಶ್‌ರವರು ವಿ.ಚೈತ್ರಾರವರ ಧೋರಣೆಯನ್ನ ತೀವ್ರವಾಗಿ ವಿರೋಧಿಸಿಕೊಂಡು ಬಂದಿದ್ದರು.

ಕಳೆದ ವರ್ಷ ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿ.ಚೈತ್ರಾರವರು ಶಾಸಕರುಗಳಿಗೆ ಮನ್ನಣೆ ನೀಡದೇ ಏಕಪಕ್ಷಿಯ ನಿಲುವು ತೆಗೆದುಕೊಂಡಿದ್ದರು. ಜಿಲ್ಲಾಧಿಕಾರಿಯವರ ನಿಲುವು ವಿರೋಧಿಸಿ ಎಚ್.ಡಿ.ರೇವಣ್ಣ ಮತ್ತು ಎಚ್.ಎಸ್.ಪ್ರಕಾಶ್ ಸಾಮಾನ್ಯ ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದಿದ್ದರು. ಅಲ್ಲಿಂದಲೂ ಶಾಸಕರ ವಿರೋಧವನ್ನು ಕಟ್ಟಿಕೊಂಡು ಬಂದಿದ್ದ ವಿ.ಚೈತ್ರಾರವರು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುರವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆಂಬ ಟೀಕೆಗೆ ಗುರಿಯಾಗಿದ್ದರು.

ಅಂತು ಈಗ ಚೈತ್ರಾವರು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ಹೊಸದಾಗಿ ಜಿಲ್ಲಾಧಿಕಾರಿಯಾಗಿ ಆಗಮಿಸುತ್ತಿರುವ ರೋಹಿಣಿ ಸಿಂಧೂರಿಯವರು ಮಂಡ್ಯ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಬೆಂಗಳೂರಿಗೆ ವಗಾವಣೆಗೊಂಡಿದ್ದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits