Today: 22.Jul.2018

ಗತಕಾಲದ್ದು ಸಿಂಧುವಾಗಲ್ಲ. Featured

ಕಾವೇರಿ ವಿವಾದ: ಗತಕಾಲದ ಒಪ್ಪಂದ ಸಿಂಧುವಾಗಲ್ಲ.

ಮಾಜಿ ಪ್ರಧಾನಿ ದೇವೇಗೌಡರ ಅಭಿಮತ.

13 Jul 2017 0 comment
(0 votes)
 

ಹಾಸನ, ಜು.12: ಕಾವೇರಿ ವಿವಾದದಲ್ಲಿ ಸ್ವಾತಂತ್ರ್ಯ ಪೂರ್ವದ ಒಪ್ಪಂದಗಳು ಸಿಂಧುವಾಗಲ್ಲ ಎಂಬುದು ನನ್ನ ಭಾವನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ನದಿ ನೀರು ಹಂಚಿಕೆಯ ಗತಕಾಲದ ಒಪ್ಪಂದವನ್ನ ಪರಿಗಣಿಸಬಾರದು ಎಂದು ನಿನ್ನೆ ಸರ್ವೊಚ್ಚ ನ್ಯಾಯಾಲಯದಲ್ಲಿ ರಾಜ್ಯಸರ್ಕಾರದ ಪರವಾಗಿ ನಾರಿಮನ್ ವಾದ ಮಂಡಿಸಿದ್ದು ಸಮರ್ಪಕವಾಗಿದೆ ಎಂದು ಸಮರ್ಥಿಸಿದರು.

1892 ಹಾಗೂ 1924ರ ಒಪ್ಪಂದಗಳು ಸಿಂಧುವಾಗಬಾರದು. ಸ್ವಾತಂತ್ರ್ಯ ಬಂದ ಮೇಲೆ ಬ್ರೀಟಿಷರು ತಮ್ಮ ಕಾಲದ ಅಸ್ಥಿತ್ವ ಕಳೆದುಹೋಗುತ್ತೆ. ಹಾಗಾಗಿ ಕಾವೇರಿ ವಿಚಾರದ ಬಗ್ಗೆ ಈಗಾಗಲೇ ನಾರಿಮನ್ ಜೊತೆ ನಾನು ಚರ್ಚಿಸಿದ್ದೇನೆ. ಸಾಧ್ಯವಾದಷ್ಟು ಹೋರಾಟವನ್ನ ಕೂಡಾ ಮಾಡಿದ್ಧೇನೆ. ಗತಕಾಲದ ಒಪ್ಪಂದ ಸಿಂಧುವಾಗಲ್ಲ ಎಂಬುದು ನನ್ನ ಭಾವನೆ. ವಾದ ವಿವಾದಗಳ ಬಗ್ಗೆ ಹೆಚ್ಚು ಮಾತನಾಡಲಾರೆ. ಕಾದು ನೋಡೋಣ ಎಂದರು.

ಪಾದಯಾತ್ರೆ ಮಾಡುತ್ತೇನೆ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜು.೧೫ರಂದು ಜೆಡಿಎಸ್ ಶಾಂತಿ ಪಾದಯಾತ್ರೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆ ಪಾದಯಾತ್ರೆಯಲ್ಲಿ ನಾನು ಕೂಡಾ ಖುದ್ದು ಪಾಲ್ಗೊಳ್ಳುತ್ತೇನೆ. ರಾಜ್ಯದ ಯಾವ ಮೂಲೆಯಲ್ಲಿಯೂ ಕೋಮುಗಲಭೆಗಳು ಆಗಬಾರದು. ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ೧೬ತಿಂಗಳು, ಪ್ರಧಾನಿಯಾಗಿದ್ದ ೧೧ ತಿಂಗಳಲ್ಲಿ ಎಲ್ಲಿಯೂ ಕೋಮುಗಲಭೆಗಳು ನಡೆಯದಂತೆ ಎಚ್ಚರಿಕೆಯಿಂದ ಆಡಳಿತ ನಡೆಸಿದ್ದೆ ಎಂದು ಉದಾಹರಣೆ ನೀಡಿದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: