Today: 22.Oct.2017

54 ಮಂದಿಗೆ ವರ್ಗಾವಣೆ ಭಾಗ್ಯ Featured

ಆಡಳಿತಕ್ಕೆಚುರುಕು ನೀಡಿದ ಡಿಸಿ ಮೇಡಂ-ಒಂದೇ ದಿನದಲ್ಲಿ 54 ಮಂದಿ ವರ್ಗಾವಣೆ ಭಾಗ್ಯ

19 Jul 2017 0 comment
(0 votes)
 

ಬಂಧಿಖಾನೆ ಡಿಐಜಿಯಾಗಿ ಅಧಿಕಾರ ವಹಿಸಿಕೊಂಡು 20 ದಿನ ಕಳೆಯುವಷ್ಟರಲ್ಲಿ ಜೈಲಿನ ಅಕ್ರಮಗಳನ್ನ ಬಯಲಿಗೆಳೆದ ಐಪಿಎಸ್ ಅಧಿಕಾರಿ ರೂಪರಿಗೆ ಟ್ರಾನ್ಸ್ಫರ್ ಭಾಗ್ಯ ಸಿಕ್ತು. ಆದ್ರೆ ಹಾಸನ ಡಿಸಿ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹತ್ತಾರು ವರ್ಷಗಳಿಂದ ಠಿಕಾಣಿ ಹೂಡಿದ್ದ ನೌಕರರಿಗೆ ಮಾತ್ರ ವರ್ಗಾವಣೆ ಅಂದ್ರೆ ಏನು ಅಂತಾ ಗೊತ್ತಿರ್ಲಿಲ್ಲ. ತಮಗೆ ಇಷ್ಟ ಬಂದ ಹಾಗೆಯೇ ಹಲವಾರು ವರ್ಷಗಳಿಂದ ಆಯಾ ಕಟ್ಟಿನ ಜಾಗದಲ್ಲಿ ಬೇರೂರಿದ್ದ ಸಿಬ್ಬಂದಿಗಳಿಗೆ ಕೊನೆಗೂ ಟ್ರಾನ್ಸ್ಫರ್ ಶಾಕ್ ಸಿಕ್ಕಿದೆ. ಅದು ಯಾರಿಂದ ಅಂತೀರಾ. ಇಲ್ಲಿದೆ ನೋಡಿ...

ಇತ್ತೀಚಿಗೆ ರಾಜ್ಯದಲ್ಲಿ ಅನ್ಯಾಯ, ಅಕ್ರಮಗಳ ವಿರುದ್ಧ ದನಿಯೆತ್ತುವ ನಿಷ್ಠಾವಂತ ಅಧಿಕಾರಿಗಳಿಗೆ ಟ್ರಾನ್ಸ್ಫರ್ ಭಾಗ್ಯ ಸಿಕ್ತಿರೋದು ಸಾಮಾನ್ಯವಾಗ್ಬಿಟ್ಟಿದೆ.. ಆದರೆ ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸರ್ಕಾರಿ ನೌಕರರಿಗೆ ಮಾತ್ರ ಟ್ರಾನ್ಸ್ಫರ್ ಅನ್ನೋ ಭಯವೇ ಇರಲಿಲ್ಲ. ಇದೀಗ ಹಾಸನ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದಿರುವ ದಕ್ಷ ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ದಿಟ್ಟ ಹೆಜ್ಜೆಯನ್ನ ಇಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಕಾರ್ಯ ಪ್ರವೃತ್ತರಾದ ರೋಹಿಣಿ ಸಿಂಧೂರಿ, ಬಹಳ ಸಮಯದಿಂದ ಆಯಾಕಟ್ಟಿನ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಎಫ್ಡಿಎ, ಎಸ್ಡಿಎ, ವಿಲೇಜ್ ಅಕೌಂಟೆಂಟ್ ಗಳು ಸೇರಿಸಿ ತಮ್ಮ ಆಪ್ತ ಸಹಾಯಕನನ್ನೂ ಒಳಗೊಂಡಂತೆ 54 ಮಂದಿಗೆ ವರ್ಗಾವಣೆ ಭಾಗ್ಯ ತೋರಿಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಆಡಳಿತಯಂತ್ರಯನ್ನ ಸ್ವಚ್ಛ ಹಾಗೂ ಸುಗಮಗೊಳಿಸಲು ಮುನ್ನುಡಿ ಬರೆದಿರುವ ಡಿಸಿ ರೋಹಿಣಿ ಸಿಂಧೂರಿಯವರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಶೇಕಡಾ 6 ರಷ್ಟು ಜಿಲ್ಲಾ ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲು ಅವಕಾಶ ಇರುವುದರಿಂದ ಅಷ್ಟನ್ನು ಮಾಡಿರುವ ಜಿಲ್ಲಾಧಿಕಾರಿ, ತಮ್ಮ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯ ಇತರೆ ಕಡೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ಸಿಬ್ಬಂದಿಗಳನ್ನ ಕೂಡ ವರ್ಗ ಮಾಡುವಂತೆ ಸರ್ಕಾರಕ್ಕೆ ವರದಿ ಕಳಿಸಿದ್ದಾರೆ. ಹಾಗಾಗೀ ಬಹಳ ಸಮಯದಿಂದ ಒಂದೇ ಕಡೆಯಲ್ಲಿ ಮೊಕ್ಕಾಂ ಹೂಡಿದ್ದ ಸರ್ಕಾರಿ ಸಿಬ್ಬಂದಿಗಳಿಗೂ ಇನ್ನೂ ಕೆಲವೇ ದಿನಗಳಲ್ಲಿ ಟ್ರಾನ್ಸಫರ್ ಭಾಗ್ಯ ಸಿಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಮುಖ್ಯವಾಗಿ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀಡುಬಿಟ್ಟಿದ್ದ ಹಲವರಿಗೆ ರಾಜಕೀಯ ಕೃಪಕಟಾಕ್ಷ ಇದ್ದ ಪರಿಣಾಮ ಈ ಹಿಂದಿನ ಜಿಲ್ಲಾಧಿಕಾರಿಗಳು, ವರ್ಗದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.. ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದ ನೂತನ ಡಿಸಿ ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಮೇಜರ್ ಸರ್ಜರಿ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನಡಿ ಬರೆದಿದ್ದಾರೆ.

ಒಟ್ಟಾರೆ, ಜಿಲ್ಲಾಡಳಿತಕ್ಕೆ ಸರ್ಜರಿ ಮಾಡಿರುವ ರೋಹಿಣಿ ಸಿಂಧೂರಿ ಕೇವಲ ಬಂದ 3 ದಿನದಲ್ಲಿಯೇ ಇಂಹತದೊಂದು ಮಹತ್ವದ ಹೆಚ್ಚೆಯನ್ನಿಟ್ಟಿರುವುದು ವರ್ಗಾವಣೆಗೊಂಡವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರೆ, ಜಿಲ್ಲಾಡಳಿತದ ಸಿಬ್ಬಂದಿಯಿಂದ ನೊಂದ ಜಿಲ್ಲೆಯ ಜನಕ್ಕೆ ಇವರನ್ನ ಎತ್ತಂಗಡಿ ಮಾಡಿರುವುದು ಮಾತ್ರ ಖುಷಿಯ ವಿಚಾರ. ಅದೇನೆ ಆಗಲಿ, ಆಡಳಿತ ಯಂತ್ರವನ್ನ ಸ್ವಚ್ಛಗೊಳಿಸಲು ಹೊರಟಿರುವ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲ್ಲಿ ಅನ್ನೋದು ನಮ್ಮ ಆಶಯ.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits