Today: 22.Jul.2018

ಜೀವನ ಚೈತ್ರಾ Featured

ಚೈತ್ರಾಳ ಬದುಕಿಗೆ ಬೇಕಿದೆ ಸಹಾಯ ಹಸ್ತ 
21 Jul 2017 0 comment
(0 votes)
 
ನ್ಯಾಯಾಧೀಶೆಯಾಗಬೇಕೆಂಬ ಕನಸನ್ನ ಹೊತ್ತಿದ್ದವಳು. ಅಷ್ಟರೊಳಗೆ ಮದುವೆಯಾಗೋಯ್ತು. ಗಂಡನ ಸಹಾಯದಿಂದ ಶಿಕ್ಷಣ ಮುಂದುವರೆಸಿ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಳು. ಆದ್ರೆ ವಿಧಿ ಈಕೆಯ ಜೀವನವನ್ನ ಕೊನೆ ಸ್ಥಾನಕ್ಕೆ ತಳ್ಳಿತು. ಹೊಸ ಚಿಗುರಿನ ಭರವಸೆಯ ಕನಸು ನನಸಾಗದೇ ಉಳಿಯಿತು. ಆದ್ರೂ ಆಕೆ ಧೃತಿಗೆಡದೇ ಹಸನ್ಮುಖಿಯಾಗಿದ್ದಾಳೆ. ಹಾಗಿದ್ರೆ ಯಾರು ಇವಳು ಈಕೆಗೇನಾಗಿದೆ ಅಂತೀರಾ ಈ ಸ್ಟೋರಿ ನೋಡಿ...
 
ಕಳೆದ ಒಂದುವರೆ ವರ್ಷದಿಂದ ಈಕೆ ಮಲಗಿದ್ದ ಸ್ಥಿತಿಯಲ್ಲಿಯೇ ಮಲಗಿದ್ದಾಳೆ. ಈಕೆಯ ನಿತ್ಯಕರ್ಮದ ಸೇವೆಯನ್ನ ತನ್ನತ್ತೆ ಮತ್ತು ಗಂಡನೇ ಮಾಡ್ತಿದ್ದಾರೆ. ಚಿಗುರೊಡೆಯುವ ವಸಂತ ಕಾಲದ ಹೆಸರನ್ನಿಟ್ಟುಕೊಂಡ ಈಕೆ ಬಾಳಿನಲ್ಲಿ ಮಾತ್ರ ಕಮರಿದ್ದಾಳೆ. ಕಣ್ತುಂಬ ಜಡ್ಜ್ ಆಗಬೇಕೆಂಬ ಕನಸು ಹೊತ್ತಿರೋ ಈಕೆ ಬಸವಳಿದಿದ್ದರೂ ಮುಖದಲ್ಲಿ ಮಾಸದ ನಗುವಿದೆ. ಬಹುಶಃ ಆಕೆಯನ್ನು ನೋಡಿ ವಿಧಿಗೂ ಹೊಟ್ಟೆಕಿಚ್ಚಾಗಿ ಸುಂದರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದ್ದಾನೆ. ತಾಯ್ತನದ ಮಧುರ ಅನುಭೂತಿ ಪಡೆಯುತ್ತಿದ್ದ ಗರ್ಭಿಣಿಯ ಹೊಟ್ಟೆಯ ಸಣ್ಣಕರುಳಿನಲ್ಲಿ ಗ್ಯಾಂಗ್ರೀನ್ ಎಂಬ ಭೂತ ಹೊಂಚುಹಾಕುತ್ತ ಕುಳಿತ್ತಿದ್ದೆ ಈಕೆ ತಿಳಿಯಲಿಲ್ಲ. ಭೂಮಿಗೆ ಬರುವ ಮೊದಲೇ ಭ್ರೂಣ ಅಸುನೀಗಿಬಿಟ್ಟಿತು. ಆದ್ರೆ ಈಕೆಯ ಕುಟುಂಬಕ್ಕೆ ಮಾತ್ರ ಇವಳನ್ನ ಉಳಿಸಿಕೊಳ್ಳುವ ಪಣತೊಟ್ಟಿದ್ದಾರೆ. ಗಟ್ಟಿ ಆಹಾರವನ್ನೇನನ್ನೂ ತಿನ್ನಲಾಗದ ಚೈತ್ರಾ, ದ್ರವಾಹಾರದಲ್ಲೇ ದಿನದೂಡುತ್ತಿದ್ದಾರೆ.
 
ನಾವು ಹೇಳುವುದಕ್ಕೆ ಹೊರಟಿರೊ ಸ್ಟೋರಿಯ ಸಾರಾಂಶವೆಂದ್ರೆ, ಇಲ್ಲಿ ಮಲಗಿದ್ದಾಳಲ್ಲ ಈಕೆಯ ಹೆಸರು ಚೈತ್ರಾ ಅಂತ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದವಳು. ಮದುವೆಯಾಗಿ ಕೇವಲ 5 ವರ್ಷ ಕಳೆದಿದೆ. ಓದಿ ಏನಾದ್ರು ಸಾಧಿಸಬೇಕೆಂಬ ಕನಸನ್ನ ಹೊತ್ತಿದ್ದ ಈಕೆಗೆ 18ನೇ ವಯಸ್ಸಿನಲ್ಲಯೇ ಮದುವೆ ಮಾಡಿಬಿಟ್ರು. ಗಂಡನ ಸಹಾಯದಿಂದ ಪದವಿ ಮಾಡುತ್ತಿರುವಾಗ ಕುಟುಂಬದ ಒತ್ತಾಯದ ಮೇರೆಗೆ ತಾಯ್ತನಕ್ಕೆ ಕಾಲಿಟ್ಟಳು. ಆದ್ರೆ ಇನ್ನೇನು ತಾಯ್ತನ ಕಾಣುವ ಸಂದರ್ಭದಲ್ಲಿ ಈಕೆಯ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. 
 
ಆಸ್ಪತ್ರೆಗೆ ಹೋದಾಗ ಮಗು ಹೊಟ್ಟೆಯಲ್ಲಿಯೇ ಕಮರಿತ್ತು. ಆಕೆಗೆ ಸಾಂತ್ವನ ಹೇಳುವುದಕ್ಕೆ ಮುನ್ನ ವೈದ್ಯರು ಮತ್ತೊಂದು ಶಾಕ್ ನೀಡಿದ್ರು. ಈಕೆಯ ಹೊಟ್ಟೆಯ ಸಣ್ಣಕರುಳನ್ನ ತೆಗೆಯದಿದ್ದರೇ ಈಕೆ ಉಳಿಯುವುದಿಲ್ಲ ಅಂತ. ಕುಟುಂಬದ ಒಪ್ಪಿಗೆ ಮೇರೆಗೆ ಈಕೆಯ ಸಣ್ಣಕರುಳನ್ನ ಕೂಡಾ ಹೊರತೆಗೆದು ಕುಟುಂಬದ ಕಣ್ಣೆದುರಲ್ಲಿಟ್ಟಾಗ ಮೂಕರಾದ್ರು. ನನ್ನ ಗಂಡನಿಂದ ಇಂದು ನಾನು ಉಸಿರಾಡುತ್ತಿದ್ದೇನೆ. ನಾನು ಜೀವನದಲ್ಲಿ ಬದುಕಿಬಂದರೇ ಜಡ್ಜ್ ಆಗುವ ಮೂಲಕ ನನ್ನ ಪತಿಗೆ ಉಡುಗೊರೆ ನೀಡುತ್ತೇನೆ ಎಂಬುದು ಚೈತ್ರಾಳ ಮನದಾಳದ ಮಾತು. 
 
ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಬಗ್ಗೆ ಬಂದಾಗ ಹಲವು ಸಂಘಟನೆಗಳ ಮುಖಂಡರು, ಹಾಗೂ ಚಾಮರಾಜನಗರದ ಟ್ರಸ್ಟ್ ವೊಂದು ಮಾನವೀಯತೆಯ ಸಂಚಲನ ಮೂಡಿಸಿದವಂತೆ. ಈ ಮಾತನ್ನ ಸುದ್ದಿಟಿವಿಯೊಂದಿಗೆ ಹಂಚಿಕೊಳ್ಳುವಾಗ ಚೈತ್ರಾಳ ಪತಿಯ ಕಂಬನಿ ತುಂಬಿಹೊಯ್ತು. ಆಪರೇಷನ್ ಸಮಯದಲ್ಲಿ ಚಾಮರಾಜನಗರದ ಚಂದ್ರಗುಪ್ತ ಟ್ರಸ್ಟ್ ನ ಲೋಕೇಶ್ ಎಂಬುವರು 1ಲಕ್ಷ ನೀಡಿದ್ರಿಂದ ಇಂದು ನನ್ನ ಪತ್ನಿ ಬದುಕಿದ್ದಾಳೆ. ಅವರಿಗೆ ನಾನು ಕೃತಜ್ಞನಾಗಿರುತ್ತೇನೆ. ಪ್ರತಿನಿತ್ಯ ಈಕೆಯ ಔಷಧಿಗಾಗಿ 4ಸಾವಿರ ಬೇಕಾಗಿದೆ. ಇದ್ದ ಸೈಟು, ಮದುವೆಯ ಸಂದರ್ಭದಲ್ಲಿ ತವರು ಮನೆಯಿಂದ ನೀಡಿದ ಒಡವೆಯನ್ನೆಲ್ಲಾ ಮಾರಿ ಈಕೆಗೆ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ ಈಗಾಗಲೇ 11ಲಕ್ಷ ಸಾಲವನ್ನ ಕೂಡಾ ಮಾಡಿದ್ದಾರೆ. ಆದ್ರೂ ಕೆಲವರು ಇವರ ಬಗ್ಗೆ ಕೀಳುಮಟ್ಟದ ಮಾತನಾಡುತ್ತಿದ್ದಾರಂತೆ. ದಯಮಾಡಿ ಅಂತಹ ಮಾತುಗಳನ್ನಾಡಿ ನೊಂದ ನಮ್ಮ ಮನಸ್ಸಿಗೆ ಮತ್ತಷ್ಟು ನೋವು ಕೊಡಬೇಡಿ. ಅನುಮಾನವಿದ್ದರೇ ಮನೆಗೆ ಬಂದು ವಾಸ್ತವಾಂಶ ನೋಡಿ ಸಹಾಯ ಹಸ್ತ ಮಾಡಿ ಎಂಬುದು ಇವರ ಪತಿಯ ಮನವಿ. 
 
ಈಕೆಯ ಕತೆ ಕೇಳಿದ್ರೆ ಎಂತವರ ಮನಸ್ಸು ಕೂಡಾ ಕರಗದೇ ಇರದು. ವಾಸ್ತವಾಂಶವನ್ನ ಹತ್ತಿರದಿಂದ ನೋಡಿದ್ರೆ ಕಣ್ಣಾಲಿಗಳು ತುಂಬದೇ ಇರದು. ಸದ್ಯ ಚಿಕಿತ್ಸೆಗೆ 30 ಲಕ್ಷ ರೂ. ಬೇಕಾಗಿದೆ. ನಾವು ಕಿಡ್ನಿ, ಹೃದಯ, ಬದಲಾಯಿಸುವುದನ್ನ ಕೇಳಿದ್ದೇವೆ. ನೋಡಿದ್ದೇವೆ. ಆದ್ರೆ ಕರುಳನ್ನ ಬದಲಾಯಿಸಬೇಕೆಂಬ ಸುದ್ದಿ ಕೇಳುತ್ತಿರುವುದು ಇದೇ ಮೊದಲು ಎಂದರೇ ಆಶ್ಚರ್ಯವಾಗದೇ ಇರುದು. ಮಧ್ಯಮ ಕುಟುಂಬ ಹಣಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಅತ್ತೆಯಂತೂ ತನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಹೆತ್ತವರೇ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಮಾತನಾಡಿ ಆಸ್ಪತ್ರೆಯಲ್ಲಯೆ ಆಕೆಯನ್ನ ಕೈಬಿಟ್ಟು ಹೋದರಂತೆ. ಆಕೆಯ ನಿತ್ಯಕಾರ್ಯವನ್ನ ಹೆತ್ತಮ್ಮನಿಗಿಂತ ಹೆಚ್ಚಾಗಿ ಮಾಡುತ್ತಿರೋ ಅತ್ತೆ ಗಂಗಮ್ಮನಿಗೆ ಒಂದು ಸೆಲ್ಯೂಟ್ ಹೇಳಲೇಬೇಕು. 
 
ಈಕೆ ಬದುಕಿದ್ದಾಳೆಂದ್ರೆ ಟೋಟಲ್ ಪೇರೆಟಲ್ ನ್ಯೂಟ್ರೀಷಿಯನ್ (Total parental Nutrion) ಎಂಬ ಇಂಜೆಕ್ಸನ್ ನಿಂದ. ಪ್ರತಿನಿತ್ಯ 12 ಗಂಟೆಗೊಮ್ಮೆ ಇದನ್ನ ನೀಡಬೇಕು. ಇದನ್ನ ನೀಡದಿದ್ದರೇ ಆಕೆ ಉಸಿರಾಟವೇ ನಿಂತುಹೋಗುವುದಂತೆ. ನಾವು ಪ್ರತಿನಿತ್ಯ ಸುಖಾ ಸುಮ್ಮನೆ ಬೇಕಿಲ್ಲದ ಕಾರಣಕ್ಕೆ ಸಾವಿರಾರು ರೂ.ಹಣವನ್ನ ವ್ಯವಿಸುತ್ತೇವೆ. ಬದಲು ಅದೇ ಹಣವನ್ನ  ಚೈತ್ರಾಳ ಬದುಕಿಗೆ ನೀಡಿದರೇ ಆಕೆಯ ಕುಟುಂಬದ ನಗು ಮರಳಬಹುದು. ಆಕೆಗೂ ಪ್ರತಿಕ್ಷಣ ಬದುಕುವ ಛಲ. ಯಾರೋ ಬಂದಾರು, ತನ್ನ ಬದುಕಿಸಿಯಾರು ಎಂಬ ದೃಢ ಭರವಸೆ. ಅದಕ್ಕೆಂದೇ ಮಿಣುಕುವ ಮೊಂಬತ್ತಿಯಂತಾಗಿರುವ ತನ್ನ ಜೀವವನ್ನೂ ಜೋಪಾನವಾಗಿ ಹಿಡಿದಿಟ್ಟುಕೊಂಡು ಕೂತಿದ್ದಾಳೆ. 
 
ಒಂದು ಕಾಲದಲ್ಲಿ ಮೈಕೈ ತುಂಬಿಕೊಂಡು, ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನಿಸುತ್ತಿದ್ದ ಚೈತ್ರಾ, ಸದ್ಯ ಒಣಕಲು ಕಡ್ಡಿಯಾಗಿದ್ದಾಳೆ. ತಾನು ಬದುಕಿಯೇ ಬದುಕುತ್ತೇನೆ ಎಂಬ ಆಕೆಯ ಭರವಸೆ ನಿಜವಾಗಲಿ. ಆಕೆಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಬದುಕಿದರೇ ನಾನು ಜಡ್ಜ್ ಆಗಿಯೇ ತೀರುತ್ತೇನೆ ಎನ್ನುವ ಕನಸು ನನಸಾಗಲು ಸಹಕರಿಸಿ ಎಂಬುದು ನಮ್ಮ ಆಶಯ. 
 
ಚೈತ್ರಾ ಅವರ ಬ್ಯಾಂಕ್ ಖಾತೆ ವಿವರ: 
ಚೈತ್ರಾ ಎಸ್. 
ಉಳಿತಾಯ ಖಾತೆ ಸಂಖ್ಯೆ: 64197559239, 
IFSC:- SBIN0040050 
ಶಾಖೆ: ಅರಕಲಗೂಡು. 
ಮೊಬೈಲ್ ನಂಬರ್ : +91 861 830 8030, 973 153 6616
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: