Today: 17.Aug.2017

ಪೂರ್ಣಗೊಂಡ ಮೆಟ್ಟಿಲು Featured

ಪೂರ್ಣಗೊಂಡ ಮಹಾಮಸ್ತಕಾಭಿಷೇಕದ ಮೊದಲ ಕಾಮಗಾರಿ

ಎರಡು ಬದಿ ನೂತನ ರೈಲಿಂಗ್ಸ್ ಜೊತೆಗೆ 489 ಮೆಟ್ಟಿಲು ನಿರ್ಮಾಣ:

23 Jul 2017 0 comment
(0 votes)
 

ಕಳೆದ 6 ತಿಂಗಳ ಹಿಂದೆ ಪ್ರಾರಂಭವಾಗಿದ್ದ ಮೆಟ್ಟಿಲು ಕೆತ್ತನೆ ಕಾಮಗಾರಿ ಇಂದು ಪೂರ್ಣಗೊಂಡಿತು. ಅಂದುಕೊಂಡ ದಿನದೊಳಗೆ ಕಾಮಗಾರಿ ಮುಕ್ತಾಯಗೊಂಡಿರುವುದಕ್ಕೆ ಪ್ರವಾಸಿಗರಿಗೂ ಖುಷಿಯಾಗಿದೆ. ಹಾಗಿದ್ರೆ ಯಾವ ಮೆಟ್ಟಿಲು ? ಏನ್ ಕಾಮಗಾರಿ ಅಂತೀರಾ ನೀವೇ ನೋಡಿ....

ವಿಶ್ವವಿಖ್ಯಾತ ವಿಂಧ್ಯಗಿರಿಯ ಮೇಲಿರುವ ಗೊಮ್ಮಟನಿಗೆ 2018ನೇ ಫೆ.7ರಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಈಗಾಗಲೇ ವಿಂದ್ಯಗಿರಿ ಬೆಟ್ಟಕ್ಕೆ ದ್ವಿಪಥದ ಮೆಟ್ಟಿಲುಗಳಿವೆ. ಜೊತೆಗೆ ಡೋಲಿಯ ಮೂಲಕ ಹೋಗಲು ಯಾವುದೇ ತೊಂದರೆಯಾಗದಂತೆ ಇದರ ಪಕ್ಕದಲ್ಲಿಯೇ ಮತ್ತೊಂದು ಮೆಟ್ಟಿಲು ಕೆತ್ತನೆಗೆ ಯೋಚಿಸಿದ್ರು. ಅದರಂತೆ ಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕಳೆದ 6 ತಿಂಗಳ ಹಿಂದೆ ವಿಂಧ್ಯಗಿರಿ ಬೆಟ್ಟದ ಮೆಟ್ಟಿಲು ನಿರ್ಮಾಣದ ಮೊದಲ ಕಾಮಗಾರಿಗೆ ಕಳೆದ ಫೆಬ್ರವರಿಯಲ್ಲಿ ಬೆಳ್ಳಿಸುತ್ತಿಗೆಯ ಮೂಲಕ ಚಿನ್ನದ ಉಳಿಯನ್ನ ಬಳಸಿ ಕಲ್ಲನ್ನ ಕೆತ್ತುವ ಮೂಲಕ ಚಾಲನೆ ನೀಡಿದ್ರು. 

ಹೌದು ಇದು 42ಲಕ್ಷ ರೂ.ಮೌಲ್ಯದ  ಕಾಮಗಾರಿಯಾಗಿದ್ದು, 489 ಹೊಸ ಮೆಟ್ಟಿಲುಗಳನ್ನ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಮೆಟ್ಟಿಲುಗಳನ್ನ ಡೋಲಿಯಲ್ಲಿ ಹೋಗುವವರಿಗೆಂದೆ  ನಿರ್ಮಾಣ ಮಾಡಲಾಗಿದೆ. ಡೋಲಿ ಎಂದ್ರೆ ಬೆಟ್ಟ ಹತ್ತಲು ಸಾಧ್ಯವಾಗದ ವಯೋವೃದ್ದರಿಗೆ, ಅಂಗವಿಕಲರಿಗೆ ಜೊತೆಗೆ ಡೊಲಿಯಲ್ಲಿಯೇ ಹೋಗುವಂತಹವರಿಗೆ ಈ ಮೆಟ್ಟಿಲುಗಳು ಅನುಕೂಲವಾಗಲಿದೆ. ಮೊದಲು 641 ಮೆಟ್ಟಿಲುಗಳಿದ್ದ ಮೆಟ್ಟಿಲುಗಳ ಎಡಭಾಗದಲ್ಲಿಯೆ ಡೋಲಿಯಲ್ಲಿ ಹೋಗುವವರಿಗೆ 489 ಮೆಟ್ಟಿಗಳ ನಿರ್ಮಾಣ ಮಾಡಲಾಗಿದ್ದು, ಗಟ್ಟಿ ಬಂಡೆಯನ್ನ ಕೆತ್ತಿ ಮೆಟ್ಟಿಲುಗಳನ್ನ ನಿರ್ಮಾಣ ಮಾಡಿರುವ ಜೊತೆಗೆಯಲ್ಲಿಯೇ ಎರಡು ಬದಿಯಲ್ಲಿಯೂ ರೈಲಿಂಗ್ಸ್ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ನಾಗರೀಕರಿಗೆ ತುಂಬಾ ಖುಷಿಯನ್ನ ತಂದಿದೆ.

ವಿಶ್ವದ ಅತ್ಯದ್ಭುತಗಳಲ್ಲಿ ಒಂದು ಜೈನಕಾಶಿ ಶ್ರವಣಬೆಳಗೊಳ. ಗೊಮ್ಮಟನನ್ನ ನೋಡೋದಿಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. ಜೊತೆಗೆ ಇನ್ನಾರು ತಿಂಗಳಲ್ಲಿ ಮಸ್ತಕಾಭಿಷೇಕ ಜರುಗಲಿದೆ. ಮಸ್ತಕಾಭಿಷೇಕಕ್ಕೆ ಈ ಬಾರಿ 30ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಬರುವ ನಿರೀಕ್ಷೆಯಿದೆ. 21ನೇ ಶತಮಾನದ ಮೊದಲ ಮಸ್ತಕಾಭಿಷೇಕದ ಸಂದರ್ಭದಲ್ಲಿ 1910ನೇ ಇಸವಿಯ ಆಸುಪಾಸಿನಲ್ಲಿ ಮೊಲದ ಮೆಟ್ಟಿಲು ಕೆತ್ತಿದ್ರೆ, 1967ರ ಮಸ್ತಕಾಭಿಷೇಕದಲ್ಲಿ ನಾಗಯ್ಯನಕೊಪ್ಪಲು ಗ್ರಾಮದ ವಿಂದ್ಯಗಿರಿ ಬೆಟ್ಟದ ಪಶ್ಚಿಮ ಭಾಗದಲ್ಲಿ ಕೆತ್ತಲಾಯ್ತು. ಇನ್ನು 1981ರ ಸಹಸ್ರಬ್ದಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಮೆಟ್ಟಿಲಿನ ಬಲಭಾಗದಲ್ಲಿ ಮತ್ತೊಂದು ಮೆಟ್ಟಿಲುಗಳನ್ನ ನಿರ್ಮಾಣ ಮಾಡಿದ್ರು. ಆದ್ರೆ ಡೋಲಿ ಹೊರವವರ ಅನುಕೂಲಕ್ಕಾಗಿ ಈಗ ಮತ್ತೆ ಪ್ರಮುಖ ಮೆಟ್ಟಿಲಿನ ಎಡಭಾಗದಲ್ಲಿ 489 ಮೆಟ್ಟಿಲುಗಳನ್ನ ನಿರ್ಮಾಣ ಮಾಡಲಾಗಿದೆ.

ಒಟ್ಟಾರೆ ಫೆ.2018ರಲ್ಲಿ ನಡೆಯಲಿರುವ 22ನೇ ಶತಮಾನದ ಮೊದಲ ಮಸ್ತಕಾಭಿಷೇಕದ ಮಹೋತ್ಸವದ ಮೊದಲ ಕಾಮಗಾರಿ ಸದ್ಯ ಪೂರ್ಣಗೊಂಡಿದೆ. 10ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದ ಕಾರ್ಮಿಕರು 8 ತಿಂಗಳೊಳಗೆ ಮುಗಿದಿರುವುದು ಯಾತ್ರಿಕರಲ್ಲಿ, ಸ್ಥಳೀಯ ನಾಗರೀಕರಲ್ಲಿ ತುಂಬಾ ಖುಷಿ ತಂದಿರುವುದು ಅಷ್ಟೆ ಸತ್ಯ.

ಪಾರು, ಶ್ರವಣಬೆಳಗೊಳ

Login to post comments

ಕ್ರೀಡಾ

ಆಕಾಶವಾಣಿ

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  install tracking codes