Today: 18.Oct.2017

ಡೇಂಘೀ Featured

ತಗ್ಗಿದ ಡೇಂಘೀ ಪ್ರಕರಣ: ಆದರೂ ಜನರಲ್ಲಿ ಭಯದ ವಾತಾವರಣ.

23 Jul 2017 0 comment
(0 votes)
 

ಕಳೆದ ಬಾರಿಗೆ ಹೋಲಿಸಿದ್ರೆ ಜಿಲ್ಲೆಯಲ್ಲಿ ಡೇಂಘೀ ಪ್ರಕರಣ ತಗ್ಗಿದೆ. ಈ ಬಾರಿ 95 ಪ್ರಕರಣಗಳು ದಾಖಲಾಗಿವೆ. ಆದ್ರೂ ಜನರಲ್ಲಿ ಏನೋ ಒಂದು ತರಹದ ಆತಂಕ. ಜ್ವರ ಬಂದ್ರೆ ಸಾಕು ಅದು ಡೇಂಘೀ ಜ್ವರ ಅಂತಾನೇ ಭಯಪಟ್ತಾರೆ. ಜಿಲ್ಲೆಯಲ್ಲಿ ನಿಜಕ್ಕೂ ಡೇಂಘೀ ಪ್ರಕರಣ ಎಷ್ಟಿವೆ ಬನ್ನಿ ನೋಡೋಣ.

ಡೇಂಘೀ ಎಂಬ ಪದ ಜಿಲ್ಲೆಯನ್ನಷ್ಟೆಯಲ್ಲದೇ ರಾಜ್ಯದ ಜನರನ್ನೇ ಭಯಗೊಳಿಸಿದೆ. ಮೈ ಸ್ವಲ್ಪ ಬಿಸಿಯಾದ್ರೆ ಅದನ್ನ ನಾವು ಜ್ವರ ಅಂತೀವಿ. ಆದ್ರೆ ಇತ್ತೀಚಿನ ದಿನದಲ್ಲಿ ಜ್ವರ ಬಂದ್ರೆ ಸಾಕು ತಮ್ಮಿಗೆ ತಾವೇ ಅದು ಡೇಂಘೀ ಎಂದು ತಿಳಿದುಕೊಂಡು ಮಾನಸಿಕವಾಗಿ ಕುಗ್ಗಿಬಿಡ್ತಾರೆ. ಹೀಗಾಗಿ ಜಿಲ್ಲೆಯ ಖಾಸಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರ ದಂಡು ಕಿಕ್ಕಿರಿಯುತ್ತಿದೆ. ಡಾಕ್ಟರ್ ನನಗೆ ಡೇಂಘೀ ಆಗಿದೆ. ದಯಮಾಡಿ ಒಳ್ಳೆಯ ಔಷಧಿ ಕೊಡಿ ಎಂದು ಕೇಳೋದು ಸರ್ವೆ ಸಾಮಾನ್ಯವಾಗಿದೆ.

ಜಿಲ್ಲೆಯಲ್ಲಿ ಪ್ರತಿನಿತ್ಯ ಸರ್ಕಾರಿ ಆಸ್ಪತ್ರೆಗೆ 100ಕ್ಕೂ ಹೆಚ್ಚು ರೋಗಿಗಳು ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಬಂದು ದಾಖಲಾಗುತ್ತಿದ್ದಾರೆ. ಅವರಿಗೆಲ್ಲಾ ಉತ್ತಮ ಚಿಕಿತ್ಸೆಯನ್ನ ನೀಡುತ್ತಿದ್ದೇವೆ. ಆದ್ರೆ ಬಂದು ದಾಖಲಾದವರೆಲ್ಲಾ ಡೇಂಘೀ ಜ್ವರಕ್ಕೆ ಸಿಲುಕಿದವರಲ್ಲ. ಸದ್ಯ 95 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿವೆ. ಆದ್ರೆ ಪ್ರಕರಣದ ಸಂಬಂಧ ಯಾರು ಸಾವಿಗೀಡಾಗಿಲ್ಲ. ಈಗಾಗಲೇ ಪ್ರತಿ ಮನೆಯಲ್ಲಿಯೂ ಲಾರ್ವ ಸರ್ವೆ ಮಾಡುವ ಕೆಲಸವನ್ನ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ

ಜಿಲ್ಲೆಯಲ್ಲಿ ಡೇಂಘೀ ಜಿಲ್ಲೆಯಲ್ಲಿ ನರ್ತನ ಮಾಡ್ತಿದೆ. ಈ ಬಗ್ಗೆ ಜಿಲ್ಲಾಢಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದ್ರು ಕೂಡಾ ಡೇಂಘೀ ಪ್ರಕರಣ ಹೆಚ್ಚಾಗುತ್ತಿದೆ. ನಾವು ಮೊದಲು ನಮ್ಮ ಮನೆಯ ಪರಿಸರವನ್ನ ಸ್ವಚ್ಚವಾಗಿಡಬೇಕು. ನೀರುನಿಲ್ಲದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಕೂಡಾ ಅರಿವು ಮೂಡಿಸಿಕೊಳ್ಳಬೇಕು. ನಗರದ ಹಲವು ರಕ್ತ ನಿಧಿ ಘಟಕದಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ರೋಗಿಗಳಿಗೆ ಬಿಳಿ ರಕ್ತ ಕಣದ ಅವಶ್ಯಕತೆಯಿದೆ. ಈ ತಿಂಗಳು 300ಕ್ಕೂ ಹೆಚ್ಚು ಮಂದಿ ಬಿಳಿರಕ್ತಕಣವನ್ನ ಖರೀದಿಸಿದ್ದಾರೆ. ಸಾಧ್ಯವಾದಷ್ಟು ರೋಗಿಗಳಿಗೆ ರಕ್ತವನ್ನ ನೀಡಲು ಇನ್ನಿಲ್ಲದ ಪ್ರಯತ್ನಿಸುತ್ತಿವೆ.

ಜಿಲ್ಲೆಯಲ್ಲಿ ಡೇಂಘೀ ಪ್ರಕರಣ ತಗ್ಗಿದ್ದರೂ, ಜನರಲ್ಲಿರುವ ಭೀತಿ ತಗ್ಗಿಲ್ಲ. ಜ್ವರ ಎಂಬ ಶಬ್ದ ಕೇಳುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಸಿಗುವ ಪಪ್ಪಾಯಿ, ಕಿವಿಹಣ್ಣು, ದಾಳಿಂಬೆಯಂತಹ ರೋಗನಿರೋಧಕ ಹಣ್ಣುಗಳನ್ನ ಮಾರಾಟ ಕೂಡಾ ಜೋರಾಗಿದೆ. ಮನೆಯ ಸ್ವಚ್ಚಂತೆಯಿಂದ ಹಿಡಿದು ನಗರದ ಸ್ವಚ್ಚತೆಯವರೆಗೂ ಜನರು ಜಾಗೃತರಾಗಬೇಕು. ಎಲ್ಲೆಂದರಲ್ಲಿ ಕಸ ಕಡ್ಡಿಗಳನ್ನ ಬಿಸಾಡಿ ಮಲೀನ ಮಾಡುವುದರಿಂದ ಡೇಂಘೀ ಪ್ರಕರಣ ಹೆಚ್ಚಾಗುತ್ತಿದೆ. ಅವನ್ನೆಲ್ಲಾ ತಡೆಗಟ್ಟಲು ನಾವು ಎಲ್ಲೆಡೆ ಸ್ವಚ್ಚತೆ ಕಾಪಾಡಿದಾಗ ಮಾತ್ರ ಸಾಧ್ಯ.  

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits