Today: 22.Jul.2018

ಮಳೆಕೊಯ್ಲಿಗೆ ಆದೇಶಿಸಿ Featured

ಮಳೆಕೊಯ್ಲು ಅಳವಡಿಕೆಯನ್ನ ಕಡ್ಡಾಯಗೊಳಿಸಿಸಲು ಹಸಿರು ಭೂಮಿ ಪ್ರತಿಷ್ಠಾನ ಒತ್ತಾಯ

ಜಲ ಮತ್ತು ಜನ ಜಾಗೃತಿಗಾಗಿ ನಡೆಯಿತು ಬೃಹತ್ ಜಾಥಾ.

30 Jul 2017 0 comment
(0 votes)
 

ಹಾಸನ, ಜು.28: ಜಿಲ್ಲೆಯಲ್ಲಿ ಬರ ಆವರಿಸಿ 2 ವರ್ಷಗಳೇ ಕಳೆದಿವೆ. ಮಳೆರಾಯನ ಕೋಪಕ್ಕೆ ಭೂಮಿ ಬಾಯ್ತೆರೆದಿದ್ದು, ಕರೆ ಕಟ್ಟೆ, ಜಲಾಶಯಗಳು ನೀರಿನ ಹಾಹಾಕಾರಕ್ಕೆ ತುತ್ತಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮಾಡಿರುವ ತಪ್ಪನ್ನ ತಿದ್ದಿಕೊಳ್ಳಲು ಜನರಿಗಾಗಿ ಜಲಜಾಗೃತಿ ಮೂಡಿಸುವ ಅನಿವಾರ್ಯತೆ ಬಂದಿದೆ. ಇಂತಹದೊಂದು ಕೆಲಸವನ್ನ ಜಿಲ್ಲೆಯ ಹಸಿರು ಭೂಮಿ ಪ್ರತಿಷ್ಠಾನ ಮಾಡ್ತಿದೆ. ಆ ಪ್ರತಿಷ್ಠಾನದ ಕಾಳಜಿಯಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ....

ಬರಗಾಲ ಪರಿಸರ ವ್ಯವಸ್ಥೆ ಮತ್ತು ರೈತರ ಕೃಷಿವ್ಯವಸ್ಥೆಗಳ ಮೇಲೆ ಗಣನೀಯ ಪ್ರಮಾಣದ ಪ್ರಭಾವ ಬೀರುತ್ತೆ. ಜೊತೆಗೆ ಸ್ಥಳೀಯ ಆರ್ಥಿಕತೆಯ ನಷ್ಟವನ್ನು ಕೂಡಾ ಉಂಟು ಮಾಡುತ್ತೆ. ಬೆಳೆಗಳ ಅಥವಾ ಫಸಲಿನ ಉತ್ಪಾದನೆಯಲ್ಲಿನ ಇಳಿಕೆ, ಜಾನುವಾರುಗಳ ನಿರ್ವಹಣಾ ಸಾಮರ್ಥ್ಯ ಕುಂದುವಿಕೆ. ಅಪೌಷ್ಟಿಕತೆ, ನಿರ್ಜಲೀಕರಣ, ವಿವಿಧ ಕಾಯಿಲೆಗಳು, ಹಾವುಗಳ ವಲಸೆ ಹಾಗೂ ಹಾವುಕಚ್ಚುವಿಕೆಯ ಪ್ರಕರಣಗಳಲ್ಲಿನ ಹೆಚ್ಚಳ, ನೀರು/ಜಲ ಮತ್ತು ಆಹಾರಗಳೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳಿಗಾಗಿ ಯುದ್ಧ ನಡೆಯುವಿಕೆ, ಹೀಗೇ ಆದ್ರೆ ಮುಂದೊಂದು ದಿನ ಭೀಕರ ಜಲಕ್ಷಾಮ ಎದುರಾಗುತ್ತದೆ ಎಂದು ಹಿರಿಯರು, ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದರು. ಅದೀಗ ನಿಜವಾಗಿದೆ. ಕರ್ನಾಟಕ ಕೇಳರಿಯದಂತಹ ಬರಗಾಲ ಎದುರಿಸುತ್ತಿದ್ದೇವೆ. ಇದಕ್ಕೆ ಹಾಸನ ಹೊರತೆನಲ್ಲಾ..

ಹಾಸನ ಬಡವರ ಊಟಿಯಂತಲೇ ಹೆಸರುವಾಸಿಯಾಗಿರುವ ಜಿಲ್ಲೆ. ಮಲೆನಾಡುಗಳಲ್ಲೇ ಭೀಕರ ಜಲಕ್ಷಾಮ ಎದುರಾಗಿದೆ. ಈ ಬಾರಿಯ ಬೇಸಿಗೆ ಬರದ ಅನುಭವವನ್ನು ತೆರೆದಿಟ್ಟಿದೆ. ಕೆರೆಗಳು ಒಣಗಿ ಬಿರುಕು ಬಿಟ್ಟಿವೆ. ಬಾವಿಗಳಲ್ಲಿ ನೀರು ತಳ ಸೇರಿದೆ. ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ನದಿಯಲ್ಲಿ ನೀರು ಹರಿಯುತ್ತಿಲ್ಲ. ಹೇಮಾವತಿ ಜಲಾಶಯ ಕೂಡಾ ಭಣಭಣ ಎನ್ನುತ್ತಿದೆ. ಆಧುನಿಕತೆಯ ಅಭಿವೃದ್ದಿಯ ಹೆಸರಿನ ಭರದಲ್ಲಿ ಮರಗಿಡಗಳನ್ನ ಕಡಿಯುವ ಮೂಲಕ ನಮಗೆ ನಾವೇ ವಂಚನೆ ಮಾಡಿಕೊಳ್ಳುತ್ತಿದ್ದೇವೆ. ಇಂದು ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅಂತರ್ಜಲ ಕುಸಿಸಿದ್ದು, ಮಳೆಯ ನೀರನ್ನ ಸಂಗ್ರಹಣ ಮಾಡಬೇಕೆಂಬ ಉದ್ದೇಶದಿಂದ ಹಸಿರುಭೂಮಿ ಪ್ರತಿಷ್ಠಾನ ಜಿಲ್ಲೆಯಲ್ಲಿ ಬೃಹತ್ ಜಾಥಾ ಮಾಡುವ ಮೂಲಕ ಮತ್ತೊಂದು ಹಸಿರ ಕ್ರಾಂತ್ರಿಗೆ ಅಡಿಗಲ್ಲಿಟ್ಟಿದೆ.

ಕಳೆದ 2 ತಿಂಗಳಿಂದ ಈ ಪ್ರತಿಷ್ಠಾನ ನೀರಿನ ಸಂಗ್ರಹಣೆ ಮಾಡುವ ಹಲವು ಕಾರ್ಯಕ್ರಮಗಳನ್ನ ಮಾಡ್ತಾ ಬಂದಿದೆ. ನೀರಿನ ತೀವ್ರ ಕೊರತೆ ಉಂಟಾಗಿದ್ದು,ಮುಂದಿನ ದಿನಗಳಲ್ಲಿ ಇದು ಇನ್ನೂ ತೀವ್ರವಾಗುವ ಮುನ್ಸೂಚನೆಯಿಂದ ನೀರಿನ ಕೊರತೆ ಬಾಧಿಸದಂತೆ ಜಾಗೃತಿ ವಹಿಸಲು ಮಳೆನೀರಿನ ಕೊಯ್ಲು ಪದ್ಧತಿಯನ್ನು ಜಿಲ್ಲಾಡಳಿತ ತಕ್ಷಣವೇ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಉದ್ದೇಶದಿಂದ ಬೃಹತ್ ಜಲ ಮತ್ತು ಜನ ಜಾಗೃತಿ ಜಾಥಾವನ್ನ ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯ ಮಾಡ್ತಿದೆ.

-ರೂಪಾ ಹಾಸನ್, ಸಾಹಿತಿ, ಹಾಸನ 

ಬಹುಶಃ ಇಂದು ನಡೆದ ಜಾಥಾದಲ್ಲಿ, ವಿವಿಧ ಕಾಲೇಜುಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು, ಗಾಂಧಿವೃತ್ತ, ಹಳೇ ಬಸ್ ನಿಲ್ದಾಣ, ಎನ್.ಆರ್.ವೃತ್ತದ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದ್ರು. ಇಷ್ಟೆಯಲ್ಲದೇ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜು, ಖಾಸಗಿ ಸಂಸ್ಥೆಗಳಿಗೆ ಹಲವು ತಂಡಗಳಾಗಿ ಭೇಟಿ ನೀಡಿ ಮನವಿ ಮಳೆಕೊಯ್ಲು ಅಳವಡಿಸಿಕೊಳ್ಳಲು ಮನವಿ ಸಲ್ಲಿಸಿದ್ರು.

ಈಗಾಗಲೇ ಹಸಿರು ಭೂಮಿ ಪ್ರತಿಷ್ಠಾನ ಕಳೆದ 2 ತಿಂಗಳಿಂದ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಕೆರೆಯ ಹೊಳೆತ್ತುವ, ಭಾವಿಗಳನ್ನ ಪುನಶ್ಚೇತನಗೊಳಿಸುವ, ಬೆಟ್ಟಗಳಲ್ಲಿ ಗಿಡ ನೆಡುವ ಕಾರ್ಯವನ್ನ ವಿವಿಧ ಸಂಘಸಂಸ್ಥೆಗಳ, ಕಾಲೇಜು ವಿದ್ಯಾರ್ಥಿಗಳ, ಸ್ಕೌಟ್ಸ್ ಮತ್ತು ವಿದ್ಯಾರ್ಥಿಗಳ ನೆರವಿನೊಂದಿಗೆ ಸಾಮಾಜ ಮುಖಿ ಕಾರ್ಯಗಳನ್ನ ಮಾಡ್ತಾ ಬಂದಿದೆ. ಆದ್ರೆ 50ಕ್ಕೂ ಹೆಚ್ಚು ಕಲ್ಯಾಣಿಗಳನ್ನ ಸ್ವಚ್ಚಗೊಳಿಸುವ ಕಾರ್ಯವನ್ನ ಮಾಡಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಈಗಾಗಲೆ ಸಾವಿರಕ್ಕೂ ಹೆಚ್ಚು ಗಿಡ ನೆಡುವ ಕಾರ್ಯವನ್ನ ಮಾಡಿದ್ದಾರೆ. ಈ ಕಾರ್ಯಕ್ಕೆ ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜು ಕೂಡಾ ಕೈಜೋಡಿಸಿದ್ದಾರೆ. ಈ ಒಂದು ಅಭಿಯಾನಕ್ಕೆ ಸುದ್ದಿ ಟಿವಿ ಕೂಡಾ ಕೈ ಜೋಡಿಸಿದೆ ಎಂದು ಹೇಳೊದಿಕ್ಕೆ ನಮ್ಮಗೂ ಹೆಮ್ಮೆಯಾಗುತ್ತೆ.

-ಅಶೋಕ್, ಪರಿಸರ ಪ್ರೇಮಿ. 

 ಒಟ್ಟಾರೆ ಜಿಲ್ಲೆಯಲ್ಲಿ ಆವರಿಸಿರುವ ಬರವನ್ನ ಮುಂದಿನ ದಿನದಲ್ಲಿ ಹೋಗಲಾಡಿಸಲು, ಅಂತರ್ಜಲವನ್ನ ವೃದ್ದಿಗೊಳಿಸಲು ಮಳೆಕೊಯ್ಲು ಪದ್ದತಿಯನ್ನ ಜಾರಿಗೆ ತರಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿರುವ ಜಾಥಾಕ್ಕೆ ಜಿಲ್ಲೆಯ ಜನ ಉತ್ತಮ ಪ್ರತಿಕ್ರಿಯೇ ತೋರಿದ್ದಾರೆ. ಆದ್ರೆ ಪ್ರತಿಭಟನೆಗಳ ಮೂಲಕ, ಜಾಥಾಗಳ ಮೂಲಕ ಸುಮ್ಮನಾಗದೇ ಅದನ್ನ ಅನುಷ್ಠಾನಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ನೀರಿನ ಕೊರತೆ ಭಾದಿಸದಂತೆ ಮಾಡಬೇಕಾಗಿರುವುದ ನಮ್ಮ ನಿಮ್ಮೇಲ್ಲರ ಕರ್ತವ್ಯ ಕೂಡಾ.

  • ಆನಂದ್ ಚನ್ನಹಳ್ಳಿ, ಹಾಸನ
Last modified on Sunday, 30 July 2017 11:30
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: