Today: 22.Jul.2018

ಅನ್ನದಾತನ ಕೈಹಿಡಿಯದ ಮುಂಗಾರು Featured

ಕೈಕೊಟ್ಟ ಮುಂಗಾರು ಮಳೆಯಿಂದ ಜನ-ಜಾನುವಾರು ತತ್ತರ

30 Jul 2017 0 comment
(0 votes)
 

ಹಾಸನ, ಜು.30: ಹಾಸನ ಈಗಾಗಲೇ ಬರಗಾಲದಿಂದ ಬಸವಳಿದೆ.ಹಿಂಗಾರು ಅಷ್ಟೆಯಲ್ಲದೇ ಮುಂಗಾರು ಮಳೆ ಕೈಕೊಟ್ಟಿದೆ. ಈಗಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ರೈತರ ಚಿತ್ತ ದಿನವಿಡಿ ವರುಣನತ್ತ ನೆಟ್ಟಿದೆ. ಮುಂಗಾರು ಮಳೆ ಬಿದ್ದೀತು ಭೂಮಿಗೆ ಬೀಜ ಬಿತ್ತಿ ಫಸಲು ತಕ್ಕೋಬಹುದು ಎಂಬ ಆಶಾ ಭಾವನೆ ಹೊಂದಿದ್ದ ರೈತನ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದ್ರ ಒಂದು ವರದಿ ಇಲ್ಲಿದೆ.

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೇ ಭೂಮಿಯ ಒಡಲು ಬರಿದಾಗಿದೆ. ಒಡಲಿನ ಒಂದೊಂದು ಕಣವು ಕೂಡಾ ಆಕಾಶದ ಕಡೆ ನೋಡುತ್ತಿದೆ. ಇಂದು ವರುಣ ಕೃಪೆ ತೋರುವನೆ ಎಂದು. ಜನ-ಜಾರುವಾರುಗಳಿಗೆ ಕುಡಿಯಲು ನೀರಿನ ಹಾಹಾಕಾರ ಉಂಟಾಗಿದೆ. ಬೆಳೆದ ಬೆಳೆಗಳಾದ ರಾಗಿ,ಜೋಳ, ಶುಂಠಿ, ಆಲೂಗೆಡ್ಡೆ, ದ್ವಿದಳ ಧಾನ್ಯಗಳು ಸೇರಿದಂತೆ ಮುಂಗಾರು ಮತ್ತು ಹಿಂಗಾರಿನ ಬೆಳೆಗಳು ಈಗಾಗಲೇ ನೆಲ ಕಚ್ಚುವ ಹಂತ ತಲುಪಿದೆ. ಕೆರೆ ಕಟ್ಟೆಗಳಲ್ಲಿಯೂ ನೀರು ಖಾಲಿಯಾಗಿದೆ. ಅಂತರ್ಜಲವೂ ಕುಸಿದಿದೆ. ಅರಕಲಗೂಡು ಚನ್ನರಾಯಪಟ್ಟಣ, ಅರಸೀಕೆರೆ ಭಾಗದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಟ್ಯಾಂಕರ್ ನ ಮೂಲಕ ನೀರು ನೀಡುತ್ತಿದ್ದರೂ ಸಾಕಾಗುತ್ತಿಲ್ಲ. ಇಷ್ಟೆಯಲ್ಲದೇ ಮಲೇನಾಡು ಭಾಗದಲ್ಲಿಯೂ ನೀರಿನ ಕೊರೆತೆ ಉಂಟಾಗಿದೆ. ಕುಡಿಯುವ ನೀರಿಗೂ ಜನರು ಪರಿತಪಿಸುತ್ತಿದ್ದಾರೆ. ನೀರು ಕೊಡಿ ಎಂದು ಈ ಭಾಗದ ಜನರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಮೌನ ಪ್ರತಿಭಟನೆ ಮಾಡಿ ಗಮನಸೆಳೆಯುತ್ತಿದ್ದಾರೆ. ಇತ್ತ ಜೆಡಿಎಸ್ ಪಕ್ಷದಿಂದಲೂ ಕೂಡಾ ಕಳೆದ ಮೂರು ದಿನಗಳಿಂದ ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಪ್ರತಿಭಟನೆ ಮಾಡ್ತಿದ್ದಾರೆ. ಕುಡಿಯುವ ಸಲುವಾಗಿ ಕಾಲುವೆಗಳ ಮೂಲಕ ನೀರು ಹರಿಸಬೇಕು. ರೈತರ, ಜನ-ಜಾನುವಾರುಗಳ ರಕ್ಷಣೆಗಾಗಿ ಅಲ್ಪಪ್ರಮಾಣದಲ್ಲಿಯಾದ್ರು ನೀರು ಬಿಡಿ ಎಂದು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ಮಾಡ್ತಿದ್ದಾರೆ. ನಾಳೆ ಪ್ರತಿಭಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡಾ ಭಾಗಿಯಾಗುವ ಸಾಧ್ಯತೆಯಿದೆ. ಒಟ್ಟಾರೆ ಈ ಎಲ್ಲಾ ಪ್ರತಿಭಟನೆಗೆ ಮುಖ್ಯ ಕಾರಣ ವರುಣಕ ಕೃಪೆ ಜಿಲ್ಲೆಯಲ್ಲಿ ಆಗದಿದರುವುದು. ಸದ್ಯ ಡ್ಯಾಂ ನಲ್ಲಿ 15 ಟಿಎಂಸಿ ನೀರು ಸಂಗ್ರಹವಾಗಿದೆ. ಕರೆ-ಕಟ್ಟೆಗಳಿಗೆ ನೀರು ಹರಿಸಿದ್ರೆ ಸ್ಪಲ್ಪ ಅನುಕೂಲವಾಗುತ್ತದೆ ಎಂಬುದು ಪ್ರತಿಭಟನಾಕಾರರ ಆಗ್ರಹ

ರಘು ಹೊಂಗೆರೆ, ಮಾಧ್ಯಮ ವಕ್ತಾರ, ಜಿಲ್ಲಾ ಜೆಡಿಎಸ್.

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯಿಲ್ಲದೇ ಭೂಮಿಯ ಒಡಲು ಬರಿದಾಗಿದೆ. ಒಡಲಿನ ಒಂದೊಂದು ಕಣವು ಕೂಡಾ ಆಕಾಶದ ಕಡೆ ನೋಡುತ್ತಿದೆ. ಇಂದು ವರುಣ ಕೃಪೆ ತೋರುವನೆ ಎಂದು ಜನ-ಜಾರುವಾರುಗಳಿಗೂ ಕೂಡಾ ಕುಡಿಯಲು ನೀರಿನ ಹಾಹಾಕಾರ ಉಂಟಾಗಿದೆ. ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರ ಮನದಲ್ಲಿ ಬೇಸರವಿತ್ತು. ಆದ್ರೆ ಜುಲೈ ತಿಂಗಳಲ್ಲಿ ಮುಂಗಾರು ಸ್ವಲ್ಪ ಚುರುಕುಗೊಂಡಿದ್ದರಿಂದ ಮಂದಾಹಾಸ ಮೂಡಿತ್ತು. ಇದೇ ಮಳೆ ಹೀಗೆ ಮುಂದುವರೆಯುತ್ತೆ ಎಂಬ ನಿರೀಕ್ಷೆ ಸಹ ಇತ್ತು. ಆದರೆ, ಈ ನಿರೀಕ್ಷೆ ಇದೀಗ ಹುಸಿಯಾಗಿದ್ದು ಈ ಬಾರಿ ಮತ್ತೆ ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಬೆಳೆದಿರುವ ಫಸಲು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅರಸೀಕೆರೆಯಲ್ಲಿ ಸುಮಾರು 16 ಲಕ್ಷ ತೆಂಗಿನಮರಗಳು ಈಗಾಗಲೇ ನೆಲಕಚ್ಚಿವೆ. ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿದ್ರಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

- ಕೆ.ಎಂ.ಶಿವಲಿಂಗೇಗೌಡ, ಶಾಸಕ, ಅರಸೀಕೆರೆ.

ಜಿಲ್ಲೆಯ ಸಾಕಷ್ಟು ರೈತರು ಮಳೆಯ ನಿರೀಕ್ಷೆಯಂತೆ ಪೂರ್ವ ಮುಂಗಾರಿನಲ್ಲಿ ಅತೀ ಹೆಚ್ಚು ಬಿತ್ತನೆ ಮಾಡಿದ್ದರು. 71 ಸಾವಿರ ಹೆಕ್ಟೇರ್ಗುರಿ ಹೊಂದಿದ್ದ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಅಂದ್ರೆ ಶೇ.86ರಷ್ಟು ಭೂಮಿಯಲ್ಲಿ ಉದ್ದು, ಹೆಸರು, ಹತ್ತಿ, ಜೋಳ, ಅಲಸಂದೆ, ಅವರೆ, ಸೂರ್ಯಕಾಂತಿ ಬಿತ್ತನೆ ಮಾಡಲಾಯ್ತು. ಆದ್ರೆ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಕಾಯಿ ಕಚ್ಚುವ ಹಂತದಲ್ಲಿ ಬೆಳೆ ಒಣಗಲಾಂಭಿಸಿದೆ. ಪ್ರತಿವರ್ಷ ಹಾಸನ ಜಿಲ್ಲೆಯಲ್ಲಿ 121 ಮಿ.ಮೀ. ಮಳೆಯಾಗಬೇಕಿತ್ತು. ಆದ್ರೆ ಅದ್ಯಾಕೊ ಗೊತ್ತಿಲ್ಲ. ಮಳೆರಾಯ ಮುನಿಸಿಕೊಂಡ ಹಿನ್ನಲೆಯಲ್ಲಿ ಕೇಲವ 95.12ಮಿ.ಮೀ.ಮಳೆಯಾಗಿದೆ ಹೀಗಾಗಿ ಶೇ. 16ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಸೋನೆಯ ಹನಿ ಬಿಟ್ಟರೇ, ಇಲ್ಲಿಯತನಕ ಜಿಲ್ಲೆಯಲ್ಲಿ ಹದ ಮಳೆಯಾಗಿಲ್ಲ ಮುಂಗಾರು ಕೈಕೊಟ್ಟಿದ್ದರಿಂದಾಗಿ ರೈತ ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿದ್ದು ಬಿತ್ತನೆಗಾಗಿ ಮಾಡಿರುವ ಖರ್ಚನ್ನು ಸಹ ವಾಪಸ್ ಪಡೆಯಲಾಗದ ಪರಿಸ್ಥಿತಿಗೆ ತಲುಪಿದ್ದಾನೆ. ಈಗಾಗಲೇ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಗೊರೂರಿನ ಹೇಮಾವತಿಯಲ್ಲಿ ಕಳೆದ ಮೂರು ದಿನಗಳಿಂದ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಚನ್ನರಾಯಪಟ್ಟಣದಲ್ಲಿಯೂ ಕೂಡಾ ಅರಸೀಕೆರೆ ತಾಲ್ಲೂಕಿನ ಪರಿಸ್ಥಿತಿಯಿದೆ. ತೆಂಗಿನ ಮರಗಳು ನೆಲ ಕಚ್ಚಿದ್ದು, ಬಾಗೂರು ಸುರಂಗ ಸಂತ್ರಸ್ಥರ ಪರಿಸ್ಥಿತಿ ಇಂದಿಗೂ ಕೂಡಾ ಚಿಂತಾಜನಕವಾಗಿದೆ. ಅವರಿಗೆ ಶಾಸ್ವತ ಪರಿಹಾರ ಸಿಕ್ಕಿಲ್ಲ. ರೈತರ ಬೆಳೆ ಪರಿಹಾರ, ಸಾಲ ಮನ್ನ ಮಾಡುವ ವಿಚಾರದಲ್ಲಿ ಎರಡು ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ ಮಾಡೋ ಮೂಲಕ ಕಾಲ ಕಾಳೆಯುತ್ತಿದ್ದಾರೆ. ನಾಲೆಗೆ ನೀರು ಹರಿಸಬೇಕು. ಇಲ್ಲವಾದ್ರೆ ಮುಂದಿನ ದಿನದಲ್ಲಿ ರೈತರ ಬದುಕು ಕಷ್ಟಸಾಧ್ಯವಾಗುತ್ತದೆ. ಇದ್ರ ಜೊತೆಗೆ ಡ್ಯಾಂ ನಿಂದ ಸುಪ್ರಿಂ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಟ್ಟರೇ ರೈತರು ನೇಣುಹಾಕಿಕೊಳ್ಳುವ ಪರಿಸ್ಥಿತಿ ಬರಬಹುದು. ಸದ್ಯ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ ಫೆ.6ರಂದು ಮಸ್ತಕಾಭಿಷೇಕ ಸಮೀಪಿಸುತ್ತಿದೆ. ಕೋಟ್ಯಾಂತರ ಜನರು ಬರುವ ನಿರೀಕ್ಷೆಯಿದೆ. ಮಳೆ ಕೈಕೊಟ್ಟರೇ ತುಂಬಾ ಸಮಸ್ಯೆಯಾಗಬಹುದು.

- ಬಾಲಕೃಷ್ಣ, ಶಾಸಕ, ಶ್ರವಣಬೆಳಗೊಳ ಕ್ಷೇತ್ರ.

ಮುಂಗಾರಿನ ಅರ್ಧ ಭಾಗ ಮುಗಿದೆ. ಆಶಾ ಭಾವನೆ ಕಡಿಮೆಯಿದ್ದು, ಹಿಂದಿನ ಕಡತಗಳನ್ನ ನೋಡಿದ್ರೆ ಆಗಸ್ಟ್ ನವರೆ ನೋಡಬಹುದು. ಮಲೆನಾಡು ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಜನರು ಪರಿತಪಿಸುತ್ತಿದ್ದಾರೆ. ಪ್ರತಿವರ್ಷ 70-80 ಇಂಚು ಮಳೆಯಾಗಬೇಕಿತ್ತು. ಆದ್ರೆ ಶೇ.40ರಷ್ಟು ಮಳೆಯ ಕೊರತೆ ಉಂಟಾಗಿದೆ. ಜನರು ಈಗಾಗಲೇ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ಬಾರಿಯ ಮಾನ್ಸೂನ್ ವಾತಾವರಣ ಮಲೆನಾಡ ಭಾಗಕ್ಕೆ ಖುಷಿ ತಂದಿಲ್ಲ.

 ಹೆಚ್.ಕೆ.ಕುಮಾರಸ್ವಾಮಿ, ಶಾಸಕ, ಸಕಲೇಶಪುರ.

ಒಟ್ಟಾರೆ ಮುಂಗಾರು ಮಳೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಈ ಮಳೆಯನ್ನ ನಂಬಿ ಬದುಕು ಕಟ್ಟಿಕೊಳ್ಳುವ ನಮ್ಮ ರೈತರಿಗೆ ಇತ್ತೀಚೆಗೆ ಬರೀ ಮೋಸವೇ ಹೊರತು, ಫಲಾಪೇಕ್ಷೆಯಂತೂ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಉಳಿದರ್ದ ಮುಂಗಾರು ಮಳೆಯಾದ್ರು ನಮ್ಮ ಅನ್ನದಾತನ ಕೈ ಹಿಡಿಯುತ್ತೋ, ನಡುನೀರಿನಲ್ಲಿ ಕೈ ಬಿಡುತ್ತೋ ಎಂಬುದನ್ನು ಕಾದು ನೋಡಬೇಕಿದೆ. 

  • ನ್ಯೂಸ್ ಡೆಸ್ಕ್, ಕೊಂಡಿ ನ್ಯೂಸ್, ಹಾಸನ.
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: