Today: 22.Jul.2018

ಬಿಬಿ ಶಿವಪ್ಪ ವಿಧಿವಶ Featured

ಹಿರಿಯ ಮುತ್ಸದ್ದಿ ಬಿಜೆಪಿಯ ಹಿರಿಯ ರಾಜಕಾರಣಿ ಬಿ.ಬಿ.ಶಿವಪ್ಪ ವಿಧಿವಶ. (1929-2017)

ನಾಳೆ ಸಕಲೇಶಪುರದ ಕೂಂಬ್ರಳ್ಳಿಯಲ್ಲಿ ಅಂತ್ಯಕ್ರಿಯೆ 

31 Jul 2017 0 comment
(0 votes)
 

ಹಾಸನ, 31.07.2017: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಹಿರಿಯ ನಾಯಕ ಬಿಬಿ ಶಿವಪ್ಪ (89) ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಶಿವಪ್ಪ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1929, ಸೆಪ್ಟಂಬರ್ 27ರಂದು ಕೊಡಗು ಜಿಲ್ಲೆಯ ಬೇಳೂರು ಗ್ರಾಮದಲ್ಲಿ ಜನಿಸಿದ್ದರು. ಬಳಿಕ ಕುಟುಂಬ ಸಕಲೇಶಪುರ ಕೂಂಬ್ರಳ್ಳಿಯಲ್ಲಿ ಎಸ್ಟೇಟ್ ಖರೀದಿಸಿ ಇಲ್ಲಿಯೇ ವಾಸವಾಗಿದ್ರು.  ಬಹುಶಃ ನಾಳೆ ಸಕಲೇಶಪುರದ ಕುಮ್ರಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಕಲೇಶಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶಿವಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಕಾರ್ಯವೈಖರಿಯನ್ನು ವಿರೋಧಿಸಿದ್ದರು. ಅಷ್ಟೇಯಲ್ಲದೇ, ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ್ದ ತನ್ನನ್ನು ಬಿಎಸ್ ಯಡಿಯೂರಪ್ಪ ಮೂಲೆಗುಂಪು ಮಾಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಬಿಜೆಪಿಯಿಂದ ಅವರನ್ನ ಉಚ್ಛಾಟಿಸಲಾಗಿತ್ತು. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮೊದಲು ಬಿ ಫಾರಂ ಕೊಟ್ಟವರೇ ಬಿ.ಬಿ.ಶಿವಪ್ಪ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವ ಸಂದರ್ಭದಲ್ಲಿ ಪತ್ನಿಯೊಡಗೂಡಿ ಸಂಘಟನೆ ಮಾಡಿದ್ರು. ಅಟಲ್‍ಜೀ, ಅಡ್ವಾಣಿಯಿಂದ ಹಿಡಿದು ಜಗನ್ನಾಥರಾಯರಿಗೆ ಅಚ್ಚುಮೆಚ್ಚಾಗಿದ್ದ ಬಿಜೆಪಿ ಮಾಜಿ ರಾಜಾಧ್ಯಕ್ಷ ಬಿಬಿ ಶಿವಪ್ಪ ಇದೀಗ ಅನಾರೋಗ್ಯ ಪೀಡಿತರಾಗಿದ್ದಾಗ, ಪಕ್ಷದ ಮುಖಂಡರು ಆರೋಗ್ಯ ವಿಚಾರಿಸಲು ಬರಲಿಲ್ಲ ಎಂಬ ಬೇಸರವನ್ನ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿಯವರೊಂದಿಗೆ ಹಂಚಿಕೊಂಡಿದ್ರಂತೆ.

ಬಿಜೆಪಿಯಲ್ಲಿಯೇ ಮೂಲೆಗುಂಪಾದ ಹಿರಿಯ ರಾಜಕಾರಣಿ ಬಿಬಿ ಶಿವಪ್ಪ ಮೂಲತಃ ಸಕಲೇಶಪುರದ ಕೂಬ್ರಳ್ಳಿಯಯವರು.  ಕಾಫಿ ಬೆಳೆಗಾರರು ಕೂಡಾ.  1983 ರಿಮದ 1989ರ ತನಕ 6 ವರ್ಷಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಕೂಡಾ.  20 ವರ್ಷಗಳ ಕಾಲ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಶಾಸಕರಾಗಿ ಕಾರ್ಯ ನಿರ್ವಹಿಸಿದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರಕ್ಕೆ 18 ಶಾಸಕರ ಬಾಹ್ಯ ಬೆಂಬಲಿ ನೀಡಿದ್ದರಿಂದ ಪಕ್ಷದಿಂದ ಶಿವಪ್ಪ ಅವರು ಅಮಾನತ್ತಾಗಿದ್ದರು. ಅಮನಾತ್ತಾದ ಶಿವಪ್ಪರನ್ನು ಕಾಂಗ್ರೆಸ್ ಸೆಳೆದಿತ್ತು. ಕಾಂಗ್ರೆಸ್‍ಗೆ ಹೋಗದೇ ಮತ್ತೆ ಪಕ್ಷದಲ್ಲೇ ಉಳಿದುಕೊಂಡಿದ್ದರು

ರಾಜಕೀಯ ಜೀವನದ ಚರಿತ್ರೆ ನೋಡೋದಾದ್ರೆ...

  • 1981ರಲ್ಲಿ ಬಿಜೆಪಿ ಸೇರ್ಪಡೆ
  • 1983-1988 ರಲ್ಲಿ ರಾಜ್ಯಾದ್ಯಕ್ಷರಾಗಿ ಸೇವೆ.
  • 1984ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.
  • 1994 ಸಕಲೇಶಪುರದ ಶಾಸಕರಾಗಿ ಆಯ್ಕೆ.
  • 1999ರಲ್ಲೀ 2ನೇ ಬಾರಿಗೆ ಶಾಸಕರಾಗಿ ಆಯ್ಕೆ.
  • 2007-2008ರವರೆಗೆ ಸುಮಾರು ಒಂದುವರೆ ವರ್ಷಗಳ ಕಾಲ ಮತ್ತೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ರು.
  • 2004ರಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ ಸೋಲನ್ನನುಭವಿಸಿದ್ರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಶಿವಪ್ಪನವರಿಗೆ ಪಕ್ಷ ಕಾರೊಂದನ್ನ ನೀಡಿತ್ತು. ಆದ್ರೆ ಚಾಲಕನಿಗೆ ನೀಡುತ್ತಿದ್ದ ಸುಮಾರು 4 ಸಾವಿರ ರೂ.ಗಳನ್ನ ಪಕ್ಷಕ್ಕೆ ಉಳಿಸುವ ಸಲುವಾಗಿ ತಾವೇ ಕಾರು ಚಲಾನೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿದ ರಾಜಕರಾಣಿ ಎಂಬ ಹೆಗ್ಗಳಿಕೆ ಕೂಡಾ ಇವರಿಗಿದೆ. ಪಕ್ಷದ ರಾಜ್ಯಾಧ್ಯಕ್ಷರಾದರೂ ಕಾರ್ ಡ್ರೈವ್ ಮಾಡಿಕೊಂಡು ವಾಜಪೇಯಿ, ಅಡ್ವಾಣಿ ಅವರನ್ನ ಪ್ರಚಾರಕ್ಕೆ ಕರೆದೊಯ್ಯುತ್ತಿದ್ದರು. ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಡಿವಿಎಸ್, ಯಡಿಯೂರಪ್ಪನವರಿಗೆ ಮೊದಲು ಬಿ ಫಾರಂ ಕೊಟ್ಟಿದ ರಾಜಕಾರಣಿ ಬಿ.ಬಿ ಶಿವಪ್ಪ. ಅಂದು ಬಿಜೆಪಿ ಪಕ್ಷ ಕಟ್ಟಲು ತಮ್ಮದೇ ಶ್ರಮ ಹಾಕಿದ್ದ ಶಿವಪ್ಪ ಕಾರ್ಯವನ್ನ ಬಿಜೆಪಿ ಮರೆತಿದೆ. ನಾವು ಹಿರಿಯರ ವೇದಿಕೆ ಮಾಡಿದಾಗ ಈಶ್ವರಪ್ಪ ಅವರು ನನಗೆ ನೋಟಿಸ್ ನೀಡಿದ್ದರು. ಇಂದು ಅವರೇ ರಾಯಣ್ಣ ಬ್ರಿಗೇಡ್ ಮಾಡಲು ಹೊರಟಿರೋದು ಸರಿಯಾ ಅಂತಾ ಶಿವಪ್ಪ ಪ್ರಶ್ನಿಸಿದರು.

ಹಿಂದೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನ್ನು ಎಚ್ ಕೆ ಹನುಮೇಗೌಡರಿಗೆ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವರಿಷ್ಠರ ಕ್ರಮಕ್ಕೆ ಅಸಮಾಧಾನಗೊಂಡಿದ್ರು. ಹನುಮೇಗೌಡರು ಅಧಿಕೃತ ಅಭ್ಯರ್ಥಿಯಾದರೆ ನಾವು ಬಿಜೆಪಿಗೆ ಮತ ಹಾಕುತ್ತೇನೆ ಹೊರತು ಮತಯಾಚನೆಗೆ ಹೋಗುವುದಿಲ್ಲ ಎಂದಿದ್ದರು. ನಾನು ಲಿಂಗಾಯಿತ. ದೇವೇಗೌಡರ ವಿರುದ್ಧ ಸೂಕ್ತ ಅಭ್ಯರ್ಥಿ ಅಲ್ಲ ಎನ್ನುವುದಾದರೆ, ಅದೇ ಜನಾಂಗದಲ್ಲಿ ಸಮರ್ಥವಾಗಿರುವ ಬೇರೆ ನಾಯಕನಿಗೆ ಟಿಕೆಟ್ ಕೊಟ್ಟರೂ ಸರಿ. ಆದರೆ, ಹನುಮೇಗೌಡ ಸ್ಪರ್ಧಿಸುವುದು ಬೇಡವೆಂದು  ಖಡಕ್ ಮಾತನಾಡಿದ್ದ  ಶಿವಪ್ಪನವರು ಸಾಯುವ ಮುನ್ನ ನಾನು ಹುಟ್ಟೂರಿನಲ್ಲಯೇ ಪ್ರಾಣ ಬಿಡಬೇಕೆಂಬ ಬಯಕೆಯನ್ನ ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದರಂತೆ. ಕೊನೆಯ ಆಸೆ ಕೊನೆಗೂ ಈಡೇರಲಿಲ್ಲವಂತೆ. ಆದ್ರೆ ನೇತ್ರಾದಾನ ಮಾಡುವ ಇತರ ರಾಜಕಾರಣಿಗಳಿಗೂ ಮಾದರಿಯಾಗಿದ್ದಂತೂ ಸತ್ಯ.

ನೇರ, ನಿಷ್ಠುರ ರಾಜಕಾರಣಿಯಾಗಿದ್ದ ಬಿ.ಬಿ.ಶಿವಪ್ಪ ಇಂದು ವಿಧಿವಶರಾಗಿದ್ದು, ತುಂಬಲಾರದ ನೋವುಂಟಾಗಿದೆ ಹಲವು ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ. ಸದ್ಯ ಬೆಂಗಳೂರಿನಿಂದ ತುರ್ತುವಾಹನದಲ್ಲಿ ಮೃತದೇಹ ಸಕಲೇಶಪುರಕ್ಕೆ ಆಗಮಿಸುತ್ತಿದ್ದು, ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ನಾಳೆ ಸಕಲೇಶಪುರದ ಕೂಂಬ್ರಳ್ಳಿಯಲ್ಲಿ ಸುಮಾರು 5.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 

  • ಬ್ಯೂರೋ ನ್ಯೂಸ್ ಕೊಂಡಿ ನ್ಯೂಸ್.
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: