Today: 15.Dec.2017

ದ್ವೇಷದ ರಾಜಕೀಯ Featured

ಎ.ಟಿ.ರಾಮಸ್ವಾಮಿ ರಾಜಕೀಯದ ದ್ವೇಷ ಸಾಧಿಸುತ್ತಿದ್ದಾರೆ: ಎ.ಮಂಜು ಆರೋಪ.

10 Oct 2017 0 comment
(0 votes)
 

ಅರಕಲಗೂಡು: ಮೂರು ಬಾರಿ ಶಾಸಕರಾಗಿ ಅಭಿವೃದ್ಧಿ ಮಾಡಲಾಗದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಚುನಾವಣೆ ಸಮಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಎ. ಮಂಜು ಕೆಂಡಕಾರಿದರು. 

ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಮೂಢನಂಬಿಕೆಗಳು ಮತ್ತು ಶೋಷಣೆ ಕುರಿತ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಶು ಭಾಗ್ಯಯೋಜನೆ ದಲಿತ ವರ್ಗದವರು ಹಾಗೂ ಬಡವರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಸುಮಾರು 800 ಮಂದಿಗೆ ಈ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇರದಲ್ಲಿ ರಾಜಕೀಯ ನಡೆದಿಲ್ಲ, ಹೀಗಿರುವಾಗ ಇವರೆಲ್ಲಾ ದಲ್ಳಾಳಿಗಳೆ ಎಂದು ಪ್ರಶ್ನಿಸಿದರು.

ಉದ್ಯೋಗಖಾತ್ರಿ ಯೋಜನೆ ತಾಲೂಕಿನಲ್ಲಿ ಹಾಳಾಗಲು ರಾಮಸ್ವಾಮಿ ಕಾರಣ ಎಂಬುದು ಜಗಜ್ಜಾಹೀರಾಗಿದೆ. ಅಧಿಕಾರಿಗಳ ವಿರುದ್ದ ಮೊಕದ್ದಮೆ ದಾಖಲಿಸಲು ಮಾಜಿ ಶಾಶಕ ಎ.ಟಿ.ರಾಮಸ್ವಾಮಿಯವರೆ ನೇರಕಾರಣ ಇದು ತಾಲೂಕಿನ ಜನತೆಗೆ ಗೊತ್ತಿರುವ ಸತ್ಯ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬದಲ್ಲಿ ಇಬ್ಬರು ಸಚಿವರು, ಇಬ್ಬರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಂತಹ ಹುದ್ದೆಯಲ್ಲಿದ್ದು ಮಾಡಲಾಗದ ಅಭಿವೃದ್ದಿ ಕಾರ್ಯಗಳನ್ನು ಇದೀಗ ಅಭಿವೃದ್ಧಿ ಪಡಿಸಲಾಗಿದೆ. ಮಾಜಿ ಶಾಸಕರು ಭೂ ಕಬಳಿಕೆ ವರದಿಯಲ್ಲಿರುವ ಹೆಸರನ್ನು ಬಹಿರಂಗಪಡಿಸಲಿ ಎಂದು ಸವಾಲೆಸದರು.

ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಟಿವಿ ವಾಹಿನಿಗಳು ಮೂಢನಂಬಿಕೆ ಪೋಷಣೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ದಲಿತ ವರ್ಗಗಗಳಲ್ಲಿ ಮಾತ್ರ ಮೂಢನಂಬಿಕೆ ಇದೆ ಎಂಬುದು ತಪ್ಪು. ಇದು ಎಲ್ಲ ವರ್ಗಗಳಲ್ಲೂ ಇದೆ. ಇದರಿಂದ ಹೊರಬಂದು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಆಗತ್ಯ ಎಂದರು.

ಜಿಪಂ ಸದಸ್ಯರಾದ ಎಸ್.ಪಿ. ರೇವಣ್ಣ, ಬಿ.ಎಂ. ರವಿ, ತಾಪಂಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ವೀರಾಜ್, ಮೀನಾಕ್ಷಿ, ಧನಲಕ್ಷ್ಮಿ, ಪಪಂ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ನಂದಕುಮಾರ್, ಶಶಿಕುಮಾರ್, ಗೌರಮ್ಮ, ದಲಿತ ಸಂಘಟನೆಗಳ ಮುಖಂಡರಾದ ಗಣೇಶ್‌ವೇಲಾಪುರಿ, ಎಂ.ಸಿ.ರಾಜೆಂದ್ರ, ಅಬ್ದುಲ್ ಸಮದ್, ಹರೀಶ್, ಕಿರಣ್, ಚಲುವರಾಜ್, ಕಾಂತರಾಜ್ ಮುಂತಾದವರು ಉಪಸ್ಥಿತರಿದ್ದರು

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: