Today: 23.Sep.2018

ಪೇಯ್ಟಿಂಗ್ Featured

 ಯೂರೋಪ್ ನಲ್ಲಿ  ಚಪ್ಪಾಳೆ ಗಿಟ್ಟಿಸಿಕೊಂಡ ಹಾಸನದ ಕಲಾವಿದ 

10 Oct 2017 0 comment
(0 votes)
 

ಹಾಸನ: ಹಾಸನ ಕಲಾವಿದ ನಾಗೇಶ್ ಅವರ ಕುಂಚದಲ್ಲಿ ಅರಳಿರುವ ಚಿತ್ರಕಲೆ ಯೂರೋಪ್ ರಾಷ್ಟ್ರದಲ್ಲಿ ಆಯೋಜಿಸಿರುವ ಅಂತರಾಷ್ಟ್ರಿಯಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಾ ಕಲಾಸ್ತಕರನ್ನು ತನ್ನತ್ತ ಸೆಳೆಯುತ್ತಿದೆ.

ಯೂರೋಪ್‌ನ ಹಂಗೇರಿಯಾದ ಬುದಫೇಸ್ಟ್‌ ನಗರದಲ್ಲಿರುವ ಗ್ಯಾಲರಿಯಲ್ಲಿ ದುನಾಬೆ ಗಂಗೇ ಶೀರ್ಷಿಕೆಯಡಿಯಲ್ಲಿ ಸೆಪ್ಟಂಬರ್ 9ರಿಂದ ಅಕ್ಟೋಬರ್ ಅಂತ್ಯದವರೆಗೆ ನಡೆಯುವ ಚಿತ್ರ ಪ್ರದರ್ಶನದಲ್ಲಿ ಹಲವಾರು ದೇಶದ ಕಲಾವಿದರ ಕೃತಿಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ. ಅದರಲ್ಲಿ ಭಾರತ ದೇಶದಿಂದ ಹಾಸನ ಜಿಲ್ಲೆಯ ಕಲಾವಿದ ನಾಗೇಶ್ ಅವರ ಕುಂಚದಲ್ಲಿ ಮೂಡಿರುವ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎರಡು ಕಲಾಕೃತಿಗಳು ಈ ಅಂತರಾಷ್ಟ್ರೀಯ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಪ್ರದರ್ಶನಗೊಂಡು ಜನ ಮೆಚ್ಚುಗೆ ಪಡೆದಿದೆ.

ಹೊಯ್ಸಳ ಕಾಲದ ಶಿಲಾಬಾಲಕಿಯ ಚಿತ್ರ ಹಾಗು ಡ್ಯಾನ್ಸಿಂಗ್‌ ಗಣೇಶ್ ಎಂಬ ಕಲಾಕೃತಿಗಳು ಕಲಾಸಕ್ತರನ್ನು ತನ್ನತ್ತ ಸೆಳೆದಿವೆ .ಭಾರತದ ಪ್ರತಿನಿಧಿಯಾಗಿ ನಿರ್ವಾಣ ಆಟ್ಸ್ ಫೌಂಡೇಷನ್‌ ಸಂಸ್ಥಾಪಕರು ಹಾಗೂ ಅಂತರಾಷ್ಟ್ರೀಯ ಕಲಾವಿದರಾದ ರಮೇಶ್ ತೆರೆದಾಳ್ ಕೊಂಡೊಯ್ದಿದ್ದಾರೆ. ಕ್ಯುರೇಟ್‌ಗಳಾದ ರಾಝಲೀಯ ಗಾಂಗ್‌ಜೀ, (Rozalia gamczy) ಮತ್ತು ಇಷ್ಟವನ್‌ವರ್ಗ (Istvanvarga) ಇವರ ನೇತೃತ್ವದಲ್ಲಿ ಕಲಾ ಪ್ರದರ್ಶನ ನಡೆಯುತ್ತಿದೆ. ವಿಭಿನ್ನ ವಿಶೇಷ ಕಲಾಕೃತಿ ಪ್ರದರ್ಶನಗೊಳ್ಳುತ್ತಿವೆ ಎಂದು ತಿಳಿದು ಬಂದಿದೆ. ರಮೇಶ್ ತೆರೆದಾಳ್ ನೀಡಿರುವ ಮಾಹಿತಿ ಪ್ರಕಾರ ಕಲಾ ಪ್ರದರ್ಶನದಲ್ಲಿ ಸಾಕಷ್ಟು ಚಿತ್ರಕಲಾಕೃತಿಗಳಿದ್ದು, ಭಾರತೀಯ ಪೈಕಿ ಎನ್.ನಾಗೇಶ್ ಅವರ ಕಲಾಕೃತಿ ನೋಡುಗರ ಮನಸೆಳೆಯುತ್ತಿವೆ. ವಿದೇಶಗರು ಈ ಕಲಾಕೃತಿಗಳನ್ನು ಹೆಚ್ಚು ಇಷ್ಟುಪಡುತ್ತಿದ್ದಾರೆ.

ಸುಮಾರು ತಿಂಗಳುಗಳ ಕಾಲ ನಡೆಯುವ ಈ ಕಲಾವಸ್ತು ಪ್ರದರ್ಶನವನ್ನು, ನಿತ್ಯ ಸಾವಿರಾರು ಮಂದಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಮೂಲತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಾಗರ ನವಿಲೆ ಗ್ರಾಮದವರಾದ ಎನ್.ನಾಗೇಶ್ A.M.G.D.M.V.A ವಿದ್ಯಾಭ್ಯಾಸ ಮಾಡಿ ಹಾಸನದ ನಿರ್ಮಲಾ ಫೈನ್ ಆರ್ಟ್ ಕಾಲೇಜಿನಲ್ಲಿ ಸುಮಾರು 30 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿಭಿನ್ನ, ಅರ್ಥಪೂರ್ಣ ಕಲೆಗಳನ್ನು ತಮ್ಮ ಕೈಯಿಂದ ಮೂಡಿಸಿದ್ದು, ಜಿಲ್ಲೆ, ರಾಜ್ಯ, ಹೊರರಾಜ್ಯ ಮತ್ತು ಹೊರ ದೇಶಗಳಲ್ಲಿ ನಡೆದಿರುವ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಚಿತ್ರ ಕಲೆಗಳು ಪ್ರದರ್ಶನಗೊಂಡು ಜನಮೆಚ್ಚುಗೆ ಪಾತ್ರವಾಗಿವೆ.

ಇವರ ಚಿತ್ರ ಸೃಜಶೀಲತೆಯಿಂದ ಕೂಡಿರುತ್ತಾರೆ. ಜಲವರ್ಣ, ತೈಲವರ್ಣ, ಆಕ್ರಲಿಕ್‌ವರ್ಣಗಳಲ್ಲಿ ಇವರ ಚಿತ್ರ ಕಲೆ ವಿಭಿನ್ನವಾಗಿರುತ್ತವೆ. ಇವರಿಗೆ ಮಂಡ್ಯದಲ್ಲಿ ಹಿಂದೆ ನಡೆದ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಫೋಕ್‌ಡ್ಯಾನ್ಸ್ ಕಲಾಕೃತಿಯು ಮೊದಲ ಬಹುಮಾನ ತನ್ನದಾಗಿಕೊಂಡಿದೆ. ಮೂಡಬಿದರೆಯಲ್ಲಿ ನಡೆದ ಬೃಹತ್ ಕ್ಯಾನ್ವಸ್ ಮೇಲೆ ನೂರಾರು ಕಲಾವಿದರೂ ಸೇರಿ ರಚಿಸಿರುವ ಕಲಾಕೃತಿಗಳಲ್ಲಿ ಇವರ ಸಹ ಭಾಗವಹಿಸಿದ್ದಾರೆ. ಗುಂಪು ಕಲಾ ಪ್ರದರ್ಶನಗಳಲ್ಲೂ ಕೂಡ ಇವರ ಭಾಗವಹಿಸಿ ಮೆಚ್ಚಗೆಗಳಿಸಿದ್ದಾರೆ.ಹೀಗೆ ಇವರು ಕ್ರೀಯಾಶೀಲತೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸುತ್ತಾ ಚಿತ್ರಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಇವರ ಕಲಾಸಕ್ತಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ದೊರೆಯಲಿ ಎಂಬುದು ಆಶಯ.

  • ಕೊಂಡಿನ್ಯೂಸ್, ಹಾಸನ.
Last modified on Tuesday, 10 October 2017 15:30
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: