Today: 15.Dec.2017

ಚೆಕ್ ವಿತರಣೆ Featured

ಗಂಗನಾಳು ಫಲಾನುಭವಿಗಳಿಗೆ ಚೆಕ್ ವಿತರಣೆ: ಎ.ಮಂಜು

11 Oct 2017 0 comment
(0 votes)
 

ಅರಕಲಗೂಡು: ತಾಲೂಕಿನ ಮಹತ್ವದ ಯೋಜನೆಗಳಲ್ಲಿ ಒಂದಾದ ಗಂಗನಾಳು ಏತನೀರಾವರಿ ಯೋಜನೆಯಿಂದ ಭೂಮಿ ಕಳೆದುಕೊಂಡವರಿಗೆ ಹಂತ-ಹಂತವಾಗಿ ಪರಿಹಾರ ನೀಡುವ ಯೋಜನೆಯಲ್ಲಿ 21 ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಚೆಕ್ಕುಗಳನ್ನು ವಿತರಿಸಿದರು.

ಇಲ್ಲಿನ ತಾಲೂಕು ಕಛೇರಿಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಚೆಕ್ಕುಗಳ ವಿತರಣೆ ಮಾಡಿದ ಅವರು ಯೋಜನೆಯಲ್ಲಿ ಒಟ್ಟು 131 ಜನರು ಭೂಮಿ ಕಳೆದುಕೊಂಡವರು, ಈ ಪೈಕಿ ಕೇವಲ 30 ಜನರು ಮಾತ್ರ ದಾಖಲು ಮಾಡಿಕೊಂಡಿದ್ದು, ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಐವರಿಗೆ ಚೆಕ್ ವಿತರಣೆ ಮಾಡಿದುದನ್ನು ನೆನಪಿಸಿ, ನಾಲ್ಕು ಜನರದ್ದು ಮೂರು ದಿನಗಳಲ್ಲಿ ದಾಖಲು ಮಾಡಲಾಗುತ್ತದೆ 20 ಜನರದ್ದು ನಕ್ಷೆ ಹಂತದಲ್ಲಿದ್ದು, ಅತಿ ಶೀಘ್ರದಲ್ಲಿ ಇತರರಿಗೂ ಪರಿಹಾರದ ಚೆಕ್ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರತಿ ಕುಂಟೆಗೆ 61 ಸಾವಿರ ರೂಗಳಂತೆ ಸರ್ಕಾರದಿಂದ ಪರಿಹಾರ ಹಣ ನೀಡಲಾಗುತ್ತಿದೆ ಎಂದರು.

21 ಜನ ಫಲಾನುಭವಿಗಳಿಗೆ ಸುಮಾರು 43.98 ಲಕ್ಷ ರೂಗಳ ಚೆಕ್ ವಿತರಿಸಿದ ಅವರು ಈ ಯೋಜನೆಯು ಅರಕಲಗೂಡು ಕಸಬಾ ಹೋಬಳಿಯ ರೈತಾಪಿ ವರ್ಗಕ್ಕೆ ಹೆಚ್ಚು ಉಪಯುಕ್ತವಾಗಲಿದೆ ಎಂದು ನುಡಿದು, ಈ ಏತನೀರಾವರಿ ಯೋಜನೆಯಿಂದ ಎರಡು ಹಂತಗಳಲ್ಲಿ 88 ಕೆರೆಗಳಿಗೆ ನೀರುಣಿಸಲಾಗುವುದು. ಇದರಿಂದ ಕುಸಿಯುತ್ತಿರುವ ಅಂತರ್ಜಲ ವೃದ್ದಿಗೆ ಸಹಕಾರಿಯಾಗಲಿದೆ ಎಂದು ಅವರು ನುಡಿದರು.

 - ಕೊಂಡಿನ್ಯೂಸ್, ಅರಕಲಗೂಡು

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: