Today: 23.Sep.2018

ಹಾಸನಾಂಭೆ Featured

ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ: ಜಿಲ್ಲಾಡಳಿತದಿಂದ ಸಕಲ ಸಿದ್ದತೆ.

11 Oct 2017 0 comment
(0 votes)
 

ಕೊಣನೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಬಳಿಕ ಹಾಸನಾಂಬೆ ಸಮಸ್ತ ಭಕ್ತಾಧಿಕಗಳಿಗೆ ನಾಳೆಯಿಂದ ದರ್ಶನ ನೀಡಲಿದ್ದಾಳೆ. ನಾಳೆಯಿಂದ ನಡೆಯುವ 10 ದಿನಗಳ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಅದ್ರ ಒಂದು ವರದಿ ಇಲ್ಲಿದೆ ನೋಡಿ...

 ವರ್ಷಕ್ಕೊಮ್ಮೆಯಷ್ಟೇ ದರ್ಶನಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವ ನಾಳೆಯಿಂದ ಪ್ರಾರಂಭವಾಗಲಿದೆ. ನಾಳೆ 12.31ಕ್ಕೆ ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನಗಳಿಂದ ಬಾಗಿಲು ತೆರೆಯಲಾಗುವುದು. ಆಶ್ವಿಜಾ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರವಾದ ಇಂದು ಬಾಗಿಲು ತೆರೆಯಲಾಗುವುದು. ಬಾಗಿಲನ್ನ ತೆರೆಯುವ ಮುನ್ನ ಅರಸು ಮನೆತನದ ನರಸಿಂಹರಾಜೇಅರಸು ಬಾಳೇಕಂದು ಕಡಿಯುವ ಮೂಲಕ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಈ ಬಾರಿ 10 ದಿನ ದರ್ಶನ ನೀಡೋ ದೇವಿ ಸಾರ್ವಜನಿಕರಿಗೆ ಮಾತ್ರ 8 ದಿನ ಮಾತ್ರ ದರ್ಶನ ಭಾಗ್ಯ ಕರುಣಿಸುತ್ತಾಳೆ. ಉಳಿದಂತೆ ಮೊದಲ ಮತ್ತು ಕೊನೆಯ ದಿನ ದೇವಿಯ ಅಲಂಕಾರಕ್ಕೆ ಸೀಮಿತವಾಗಿರುತ್ತದೆ.

ಹಾಸನಾಂಬೆ ಮತ್ತು ಸಿದ್ದೇಶ್ವರ ದೇವಾಲಯಗಳ ಪ್ರತಿವರ್ಷ ಹಾಸನಾಂಬೆ ಬಾಗಿಲು ಮುಚ್ಚುವ ಮುನ್ನ ದೇವಿಯ ಎದುರು ಹಚ್ಚಿದ ಮಹಾದೀಪ ಸತತ ಒಂದು ವರ್ಷಗಳ ಕಾಲ ಉರಿಯುತ್ತಲೇ ಇರುತ್ತದೆ. ಇದು ಈ ತಾಯಿಯ ಒಂದು ಪವಾಡ ಎಂತಲೇ ಹೇಳಬಹುದು. ತಾಯಿ ತಲೆಯ ಮೇಲೆಟ್ಟ ಹೂ ಕೂಡಾ ಬಾಡಿರುವುದಿಲ್ಲ. ನಾವು ಕೂಡಾ ಪ್ರತಿವರ್ಷ ಬರುತ್ತಿದ್ದೋ, ಆದ್ರೆ ಈ ವರ್ಷ ಜಿಲ್ಲಾಡಳಿತದಿಂದ ವ್ಯವಸ್ಥಿತವಾಗಿ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ದೇವಿಯ ದರ್ಶನವಡೆದ ಹಲವು ಸಾರ್ವಜನಿಕರು ದೀಪ ನೋಡಿದ ಬಳಿಕ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ್ರು.

ಇದಕ್ಕೆ ದೇವಿಯ ಮಹಿಮೆಯೇ ಕಾರಣ ಎಂದು ನಂಬಲಾಗಿರುವುದರಿಂದ ಪ್ರತಿ ವರ್ಷವೂ ದೇವಿಯ ದರ್ಶನಕ್ಕೆ ಜಿಲ್ಲೆಯಿಂದಷ್ಟೆಯಲ್ಲದೇ ಹೊರ ರಾಜ್ಯಗಳಿಂದಲೂ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಆದ್ರೆ ಕಳೆದ ಬಾರಿ ಜಿಲ್ಲಾಡಳಿತ ಸಕಲ ಸಿದ್ದತೆಯನ್ನ ಮಾಡಿಕೊಂಡಿದ್ರು ಕೂಡಾ ಕೆಲವು ಲೋಪದೋಷಗಳು ಕಂಡು ಬಂದವು. ಕ್ಯೂನಲ್ಲಿ ನಿಂತಿದ್ದ ಭಕ್ತಾಧಿಗಳು ಮತ್ತು ಹೊರಗಿನಿಂದ ಬಂದ ಪ್ರವಾಸಿಗರು ಸೇರಿದಂತೆ ಹಲವು ಭಕ್ತರು ಜಿಲ್ಲಾಡಳಿತಕ್ಕೆ ಇಡಿ ಶಾಪ ಹಾಕಿದ್ರು. ಜೊತೆಗೆ ಈ ಬಾರಿ ಗಣ್ಯಾತಿಗಣ್ಯರಿಗೂ ಕೂಡಾ ಜಿಲ್ಲಾಡಳಿತ ದರ್ಶನಕ್ಕೆ ನಿರ್ಬಂದ ಹೇರಿದೆ. ಅವರಿಗೆ ಪಾಸುಗಳನ್ನ ವಿತರಿಸದೇ ದರ್ಶನ ಮಾಡಲಿಚ್ಚಿಸುವ ಜನಪ್ರತಿನಿಧಿಗಳಿಗೂ ಇಂತಹ ದಿನವೇ ಬರಬೇಕೆಂದು ದಿನಾಂಕ ನಿಗದಿ ಪಡಿಸಿರುವುದು ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ದರ್ಶನ ವೇಳೆ ನೂಕುನುಗ್ಗಲು ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಡಿವೈಎಸ್ಪಿ, 7 ಮಂದಿ ಸಿಪಿಐ, 19 ಪಿಎಸ್.ಐ. 34 ಎಎಸ್‌ಐ ಸೇರಿದಂತೆ 250ಮಂದಿ ಪೊಲೀಸ್ ಪೇದೆಗಳ ಜೊತೆಗೆ 150 ಮಂದಿ ಹೋಂಗಾರ್ಡ್‌ಗಳನ್ನನಿಯೋಜಿಸಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಹೊರ ಜಿಲ್ಲೆಗಳ ಪೊಲೀಸ್ರನ್ನ ಉಪಯೋಗಸಿಕೊಂಡಿದ್ದಾರೆ.

ಈ ಬಾರಿ ಸಾರ್ವಜನಿಕರಿಗೆ 8 ದಿನಗಳು ಮಾತ್ರ ದೇವಿಯ ದರ್ಶನ ಭಾಗ್ಯವಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುವ ನಿರೀಕ್ಷೆ ಇದೆ. ಬಲಿಪಾಡ್ಯಮಿ ರಾತ್ರಿ ಸಿದ್ದೇಶ್ವರಸ್ವಾಮಿಯ ರಥೋತ್ಸವ ನಡೆಯಲಿದ್ದು, ಮಾರನೇ ದಿನ ಅಕ್ಟೋಬರ್ 21ರಂದು ಮಧ್ಯಾಹ್ನ 1 ಗಂಟೆಯ ದೇವಿಯ ಬಾಗಿಲು ಮುಚ್ಚಲಿದೆ. ಒಟ್ಟಾರೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನ ನಾಳೆಯಿಂದ ಪ್ರಾರಂಭವಾಗಿದ್ದು, ದರ್ಶನ ಪಡೆಯುವ ಭಕ್ತರಿಗೆ ಆದೇವಿ ಸಕಲೈಶ್ವರ‍್ಯ ನೀಡಲಿ ಎಂಬುದು ನಮ್ಮ ಪ್ರಾರ್ಥನೆ.

- ನೇತ್ರಾ ಆನಂದ್, ಹಾಸನ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: