Today: 16.Oct.2018

ಅಟ್ಟಣಿಗೆ ಚಾಲನೆ Featured

ಮಹಾಮಸ್ತಕಾಭಿಷೇಕ ಅಟ್ಟಣಿಗೆ ಕಾಮಗಾರಿಗೆ ಚಾಲನೆ

11 Oct 2017 0 comment
(0 votes)
 

ಹಾಸನ, ಅ.11: 2018ರಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಅಟ್ಟಣಿಗೆ ಕಾಮಗಾರಿಯನ್ನು ಮಹೋತ್ಸವ ವಿಶೇಷಾಧಿಕಾರಿ ವರಪ್ರಸಾದ ರೆಡ್ಡಿ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಬುಧವಾರ ಬೆಳಗ್ಗೆ ವಿಂಧ್ಯಗಿರಿ ಬೆಟ್ಟದ ಮೇಲೆ ಜೈನ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿ-ವಿಧಾನ, ಪೂಜೆ ನೆರವೇರಿಸಿ ಅಟ್ಟಣಿಗೆ ಕಾಮಗಾರಿ ಆರಂಭಿಸಲಾಯಿತು. ಈ ಕಾಮಗಾರಿಯನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಉದ್ಘಾಟಿಸಿದ್ದರು.

12.5 ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಹಾಗೂ ಅತ್ಯಂತ ಪ್ರಮುಖವಾದ ಅಟ್ಟಣಿಗೆ ಕಮಗಾರಿ ಯೋಜನೆಯನ್ನು ಪಿ.ಡಬ್ಲ್ಯೂ.ಡಿ. ಇಲಾಖೆಯು ನಿರ್ವಹಿಸುತ್ತಿದೆ. ಜರ್ಮನ್ ತಂತ್ರಜ್ಞಾನದ ಆರ್ಟ್ ರಿಂಗ್ ಅಂಡ್ ಲಾಕ್ ಪದ್ದತಿಯ ಈ ಅಟ್ಟಣಿಗೆಯನ್ನು ಜರ್ಮನ್ ಮೂಲದ ಲೇಹರ್ ಕಂಪೆನಿ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದೆ. ಡಿಸೆಂಬರ್ 31 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೇಹರ್ ಸಂಸ್ಥೆಯ ತಾಂತ್ರಿಕ ವಿಭಾಗದ ಸಹಾಯಕ ವ್ಯವಸ್ಥಾಪಕ ಕಾಥಿರೇಸನ್ ತೇವರ್ ತಿಳಿಸಿದರು.

ಈ ವೇಳೆ ಪಿಡಬ್ಲ್ಯೂಡಿ ಎಂಜಿನಿಯರ್‌ಗಳಾದ ಜೀವನ್ ಪಟೇಲ್, ಮಂಜೇಶ್, ಕಂದಾಯ ನಿರೀಕ್ಷಕ ಮೋಹನ್ ಕುಮಾರ್, ಲೇಹರ್ ಸಂಸ್ಥೆಯ ಕಾಮಗಾರಿ ವಿಭಾಗದ ಸಹಾಯಕ ವ್ಯವಸ್ಥಾಪಕ ಮಹೇಶ್ ಕುಮಾರ್, ಜೈನ ಮಠದ ಎಂಜಿನಿಯರ್ ದರ್ಶನ್ ಜೈನ್ ಮುಂತಾದವರಿದ್ದರು.

- KONDI NEWS, SHRAVANABELAGOALA

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: