Today: 23.Sep.2018

ಹಾಸನಾಂಭೆ ಪ್ರಾರಂಭ Featured

8 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಭೆ ದರ್ಶನ

12 Oct 2017 0 comment
(0 votes)
 

 ಹಾಸನ ಅ.12 : ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಆಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ಇಂದು ಮಧ್ಯಾಹ್ನ 12.32 ಕ್ಕೆ ಸಕಲ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದೇವಾಲಯದ ಬಾಗಿಲನ್ನು ತೆರೆಯಲಾಯಿತು.

ಆಶ್ಚಿಜಾ ಮಾಸದ ಗುರವಾರವಾದ ಇಂದು ಹಾಸನಾಂಭೆಯ ದೇವಾಲಯದ ಬಾಗಿಲು ಅಪರಾಹ್ನ 12.31ಕ್ಕೆ ತೆರೆಯಲಾಯಿತು. ರಾಜ ಮನೆಮನೆತನದ ನಂಜರಾಜ ಅರಸೇ ಗರ್ಭಗುಡಿಯ ಮುಂಭಾಗದಲ್ಲಿರುವ ಬಾಳೆಕಂದು ಕಡಿಯುವ ಮೂಲಕ ದೇವಿ ದರ್ಶನಕ್ಕೆ ಅನುವು ಮಾಡಿಕಟ್ಟರು. ಕಳೆದ ಬಾರಿ ಉರಿಯುತ್ತಿದ್ದ ದೀಪ ಇಂದು ಹಾಗೇಯೇ ಉರಿಯುತ್ತಿತ್ತು. ದೇವಾಲಯದ ಬಾಗಿಲು ತೆರೆಯುತ್ತಿದಂತೆಯೇ ನೆರೆದಿದ್ದ ಜನರು ಅಮ್ಮನವರಿಗೆ ಜಯಘೋಷ ಹಾಕುತ್ತ  ಧನ್ಯತಾ ಭಾವ ವ್ಯಕ್ತಪಡಿಸಿದರಲ್ಲದೆ, ದೇವರ ದರ್ಶನ ಪಡೆದು ಪುನೀತರಾದೆವು ಎಂಬ ಮನೋಬಾವದೊಂದಿಗೆ ತೆರೆಳುತ್ತಿದ್ದ ದೃಶ್ಯ ಕಂಡು ಬಂತು. ಮೊದಲ ದಿನ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ  ಅವಕಾಶವಿಲ್ಲದಿದ್ದರು  ಸಹ ಜನಸಾಗರವೇ ಹರಿದು ಬಂದಿತು. ಉರಿಯುತ್ತಿದ್ದ ದೀಪವನ್ನ ಕಂಡ ಜಿಲ್ಲಾ ಉಸ್ತುವಾರಿ ಸಚಿವ ಕಣ್ತುಂಬಿಕೊಂಡರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದ್ರು ಕೂಡಾ ಸಚಿವರ ದೇವಾಲಯದ ಒಳ ಪ್ರವೇಶ ಮಾಡುತ್ತಿದ್ದಂತೆ ಭಕ್ತ ಸಮೂಹ ಅವರ ಹಿಂದೆ ಬಂದಿದ್ದರಿಂದ ಪೊಲೀಸ್ರ ಹಾಗೂ ಭಕ್ತ ಸಮೂಹದ ನಡುವೆ ಜಟಾಪಟಿ ನಡೆಯಿತು. ಆದ್ರೆ ದೇವಾಲಯದ ಗರ್ಭಗುಡಿ ತೆರೆಯುತ್ತಿದ್ದಂತೆ ಮೊದಲ ಬಾರಿಗೆ ದೀಪವನ್ನ ನೋಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿಯು ಭಕ್ತಿ ಪರವಾಶವಾಗಿ ದೇವಿಗೆ ನಮಿಸಿದ್ರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎ. ಮಂಜು, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ, ಜಿಲ್ಲಾ ಪಂಚಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣಕುಮಾರ್, ನಗರ ಸಭೆಯ ಅಧ್ಯಕ್ಷರಾದ ಡಾ:ಹೆಚ್.ಎಸ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‌ವಾಡ್, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಉಪ ವಿಭಾಗಾಧಿಕಾರಿ  ಡಾ:ಹೆಚ್.ಎಲ್ ನಾಗರಾಜ್ ಮತ್ತಿತರರು ಹಾಜರಿದ್ದರು.

-ನೇತ್ರಾ ಆನಂದ್, ಕೊಂಡಿ್ನ್ಯೂಸ್, ಹಾಸನ.

Last modified on Thursday, 12 October 2017 18:08
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: