Today: 15.Dec.2017

ಭಾವಪರವಶ Featured

ಭಕ್ತ ಸಮೂಹಕ್ಕೆ ದರ್ಶನ ಕರುಣಿಸಿದ ಹಾಸನಾಂಭೆ

12 Oct 2017 0 comment
(0 votes)
 

ಹಾಸನ: ಅ.12: ವರ್ಷಕೊಮ್ಮೆ ದರ್ಶನಕೊಡುವ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯ ಇಂದು ಮಧ್ಯಾಹ್ನ 12.31 ಗಂಟೆ ಸರಿಯಾಗಿ ತೆರೆಯಲಾಯ್ತು. ಕಳೆದ ಬಾರಿ ಹಚ್ಚಿಟ್ಟ ದೀಪ ಇಂದಿಗೂ ಆರದೆ ಉರಿಯುತ್ತಿರುತ್ತೆ. ಜೊತೆಗೆ ಕಳೆದ ವರ್ಷ ಹಾಸನಾಂಬ ದೇವರ ಹುತ್ತದ ಮೇಲೆ ಹಾಕಿದ್ದ ಮಲ್ಲಿಗೆ ಹೂವು ಕೂಡಾ ಬಾಡಿರಲಿಲ್ಲ. ಈ ಪವಾಡಕ್ಕೆ ಸಾಕ್ಷಿಭೂತರಾಗಿ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಎಸ್ಪಿ ಹಾಜರಿರುತ್ತಾರೆ. ಇದನ್ನ ನೋಡಿದ ಬಳಿಕ ಭಾವುಕರಾಗುವುದಂತೂ ಅಷ್ಟೆ ಸತ್ಯ. 
 
ಅರಸು ಮನೆತನದ ನರಸಿಂಹರಾಜೇ ಅರಸ್ ಗರ್ಭಗುಡಿಯ ಮುಂಭಾಗದಲ್ಲಿ ಬಾಳೆಕಂದು ಕಡಿಯುವ ಮೂಲಕ ದೇವಾಲಯದ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಆಶ್ವಿಜಾ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರವಾದ ಇಂದು ಅರ್ಜಕರು ಜಿಲ್ಲಾಡಳಿತ ಸಮ್ಮುಖದಲ್ಲಿ ಬಾಗಿಲನ್ನು ತೆರೆಯಲಾಯ್ತು. ಬಾಗಿಲು ತೆರೆಯುವ ವೇಳೆಗೆ ಜಿಲ್ಲಾ ಉಸ್ತುವಾರಿ ಎ.ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ದಾಸರಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಮತ್ತು ಇತರೇ ಜಿಲ್ಲಾಡಳಿತದ ಹಲವು ಅಧಿಕಾರಿಗಳು ದೀಪವನ್ನ ನೋಡಿ ಕಣ್ತುಂಬಿಕೊಂಡರು.

  • ಎ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ.

ದೀಪಾವಳಿಯ ಸಂದರ್ಭದಲ್ಲಿ ದರ್ಶನ ನೀಡೋ ಹಾಸನಾಂಬೆ ಬಲಿಪಾಡ್ಯಮಿಯ ಮಾರನೇ ದಿನ ಶಾಸ್ತ್ರೋಕವಾಗಿ ಮುಚ್ಚಲಾಗುತ್ತದೆ. ಈ ಬಾರಿ ಸಾರ್ವಜನಿಕರಿಗೆ 8 ದಿನಗಳ ಕಾಲ ದರ್ಶನ ನೀಡುವ ಹಾಸನಾಂಬೆಯನ್ನ ನೋಡಿ ಜಿಲ್ಲಾಧಿಕಾರಿಗಳು ಕೂಡಾ ಆಶ್ಚರ್ಯ ಚಕಿತರಾಗಿದ್ದಾರೆ. ನಾನು ಕಾಶ್ಮೀರದ ವೈಷ್ಣೋದೇವಿಯನ್ನ ಕಂಡಿದ್ದೆ ತದನಂತ್ರ ಇಂದದೊಂದು ದೇವಾಲಯವನ್ನ ಹಾಸನದಲ್ಲಿಯೇ ನೋಡುತ್ತಿರುವುದು ಎಂದ್ರು.

  • ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾಧಿಕಾರಿ, ಹಾಸನ.

ಕಳೆದ ವರ್ಷ ಆದ ಕೆಲವು ಪ್ರಮಾದಗಳು ಈ ವರ್ಷ ಜರುಗದಿರಲೇಂದು ಸಾಕಷ್ಟು ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ವರ್ಷ ಸುಮಾರು 24 ಕಡೆ ಸಿಸಿಟಿವಿ ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಸುಮಾರು 500ಕ್ಕೂ ಮಿಗಿಲಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರುಕತೆ ವಹಿಸ್ರು ಪೊಲೀಸ್ರು ಇಂದು ಜಿಲ್ಲಾ ಉಸ್ತುವಾರಿ ಸಚಿವ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ, ಸಚಿವರ ಅನುಯಾಯಿಗಳು ಏಕಾ ಏಕಿ ಅವರಿಂದ ಬರಲು ಪ್ರಾರಂಭಿಸಿದ್ರು. ಜೊತೆಗೆ ಪಕ್ಕದಲ್ಲಿದ್ದ ಕೆಲವು ಭಕ್ತವೃಂದ ಇದೇ ವೇಳೆ ಒಳ ಪ್ರವೇಶ ಮಾಡಲು ಮುಂದಾದಾಗ ನೂಕು ನುಗ್ಗಲು ಆಗಿ ಕೆಲ ಭಕ್ತರು ಕಾಲ್ತುಳಿತಕ್ಕೆ ಒಳಗಾದ್ರು.

  • ರಾಹುಲ್ ಕುಮಾರ್ ಶಹಪುರವಾಡ್, ಎಸ್ಪಿ, ಹಾಸನ

ಮೊದಲ ದಿನವಾದ ಇಂದು ದೇವಾಲಯಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲದಿದ್ದರೂ ಕೂಡಾ ಅಪಾರ ಪ್ರಮಾಣದಲ್ಲಿ ಭಕ್ತ ಸಮೂಹ ಆಗಮಿಸಿತ್ತು. ದೇವಿಯ ದರ್ಶನ ಪಡೆದ ಭಕ್ತರು ನಿಜಕ್ಕೂ ಭಾವಪರವಶರಾದ್ರು. ನಾನು ದೇವಾಲಯಕ್ಕೆ ಬಂದಿರುವುದು 2ನೇ ಬಾರಿ. ಆದ್ರೆ ಈ ಬಾರಿ ಗರ್ಭಗುಡಿಯ ತನಕ ಹೋಗಿ ನೋಡಿದೆ. ದೀಪ ಉರಿಯುತ್ತಿತ್ತು. ತುಂಬಾ ಖುಷಿಯಾಯ್ತು. ನಾನು ಮತ್ತು ನನ್ನ ಕುಟುಂಬ ಬಂದು ದೇವಿಗೆ ನಮಿಸಿದ್ದೇವೆ.

  • ಶ್ರೀವಿದ್ಯಾ ರಾಹುಲ್ ಕುಮಾರ್, ಭಕ್ತೆ. ಮಹಾರಾಷ್ಟ್ರ.

ಈ ಬಾರಿ ಸಾರ್ವಜನಿಕರಿಗೆ 8 ದಿನಗಳು ಮಾತ್ರ ದೇವಿಯ ದರ್ಶನ ಭಾಗ್ಯವಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುವ ನಿರೀಕ್ಷೆ ಇದೆ. ಬಲಿಪಾಡ್ಯಮಿ ರಾತ್ರಿ ಸಿದ್ದೇಶ್ವರಸ್ವಾಮಿಯ ರಥೋತ್ಸವ ನಡೆಯಲಿದ್ದು, ಮಾರನೇ ದಿನ ಅಕ್ಟೋಬರ್ 21ರಂದು ಮಧ್ಯಾಹ್ನ 1 ಗಂಟೆಯ ದೇವಿಯ ಬಾಗಿಲು ಮುಚ್ಚಲಿದೆ. ಒಟ್ಟಾರೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನ ನಾಳೆಯಿಂದ ಪ್ರಾರಂಭವಾಗಿದ್ದು, ದರ್ಶನ ಪಡೆಯುವ ಭಕ್ತರಿಗೆ ಆದೇವಿ ಸಕಲೈಶ್ವರ್ಯೆ ನೀಡಲಿ ಎಂಬುದು ನಮ್ಮ ಪ್ರಾರ್ಥನೆ.

Last modified on Thursday, 12 October 2017 18:11
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: