Today: 24.Nov.2017

ಪ್ರತಿಭೆಗೊಂದು ವೇದಿದೆ. Featured

ತಂತ್ರಜ್ಞಾನದ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ: ಬಸವರಾಜು

17 Oct 2017 0 comment
(0 votes)
 

ಹಾಸನ ಅ.17:  ಜಿಲ್ಲಾಡಳಿತ, ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇದರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಹೇಮಾವತಿ ಸಭಾಂಗಣದಲ್ಲಿ ಬೆಂಗಳೂರು ಟೆಕ್ ಸಮಿಟ್ ಮತ್ತು ಮೆಕರ್ ಫೇರ್ ಬೆಂಗಳೂರು ಇವರ ವತಿಯಿಂದ ಕಲ್ಪಿಸಿ, ನವೀಕರಿಸಿ, ಸಂಶೋಧಿಸಿ ಸಿದ್ದಾಂತವನೊಳಗೊಂಡ ಬೆಂಗಳೂರು ತಂತ್ರಜ್ಞಾನ ಸಮ್ಮೇಳನ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಕುರಿತು ಸುದ್ದಿಗೋಷ್ಠಿ ನಡೆಯಿತು.

ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಕಾರ್ಯದರ್ಶಿ ಬಸವರಾಜು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಗಾರದ ಉದ್ದೇಶ ಹೊಸ ಹೊಸ ಆವಿಷ್ಕಾರ ಮಾಡಿರುವ ಯಾವುದೇ ವಯಸ್ಸಿನ ಜನರಿಗೆ ತಮ್ಮ ಪ್ರತಿಭೆಯನ್ನು, ಆಲೋಚನೆಗಳನ್ನು ಪ್ರಪಂಚಕ್ಕೆ ಪರಿಚಯಿಸಲು, ಪ್ರದರ್ಶಿಸಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಅಂತಾರಾಷ್ಟ್ರೀಯ ಪರಿಣಿತರರಿಂದ ಕಲಿಯುವುದಕ್ಕೆ ಅವಕಾಶ ಮಾಡಿಕೊಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಸಣ್ಣ ಉಪಕರಣ, ಆಟಿಕೆ, ಭೋಧನ ಉಪಕರಣ ಇತ್ಯಾದಿಗಳನ್ನು ಸಣ್ಣ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುತ್ತಿರುವವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದ್ದು. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವರ್ಕ್ ಬೆಂಚ್ ಪ್ರಾಜೆಕ್ಟ್ ಮತ್ತು ಯುವ ಚಿಂತನ ಮ್ಯಾನೇಜರ್ ಕಾರ್ತಿಕ್ ಮಾತನಾಡಿ ತೆರೆ ಮರೆಯಲ್ಲಿ ಇರುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಈ ಮೇಕರ್ ಫೇರ್ ಬೆಂಗಳೂರು ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಈಗಾಗಲೇ ನೊಂದಾಣಿ ಚಟುವಟಿಕೆ ಆರಂಭವಾಗಿದೆ ನೊಂದಾಣಿಗಾರರ ಆವಿಷ್ಕಾರಗಳನ್ನು ಪರಿಶೀಲಿಸಿ ಅದನ್ನು ನ.16 ಮತ್ತು ನ.18 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರರ್ದಶನಕ್ಕೆ ಇಡಲಾಗುವುದು.

ಪ್ರದರ್ಶನದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಪಾಲ್ಗೊಳಲಿದ್ದು ಆವಿಷ್ಕಾರಕರು ತಯಾರಿಸಿರುವ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳು ಇಷ್ಟಾವದ್ದಲ್ಲಿ ಅದನ್ನು ಕೊಂಡುಕೊಳ್ಳುವ ಅವಕಾಶಗಳು ಇರುತ್ತದೆ ಎಂದ ಅವರು ಸರ್ಕಾರದಿಂದ ಕೂಡ ಸಹಾಯಧನ ಕೊಡಲಾಗುತ್ತದೆ ಎಂದು ತಿಳಿಸಿದರು. ಬೆಂಗಳೂರು ತಂತ್ರಜ್ಞಾನ ಸಮ್ಮೇಳನವು ಸುಮಾರು 300 ಪ್ರದರ್ಶಕರನ್ನು ಆಕರ್ಷಿಸಲಿದ್ದು, 10 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು www.bengaluru.makerfair.com, http://www.bengaluru.makerfair.com ಅಂರ್ತಜಾಲವನ್ನು ನೋಡಬಹುದು ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ವಿ.ಎಸ್.ಹೆಗಡೆ, ಐಎಲ್‌ಎಬಿ ಹಬ್, ಸ್ಟಾರ್ಟ್‌ಅಪ್ ಇನ್‌ಕ್ಯೂಬೇಟರ್ ಗುರುಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: