Today: 24.Nov.2017

ಜಾತಿ ಸಂಘರ್ಷ Featured

 ಅಧಿಕಾರಕ್ಕಾಗಿ ಕಾಂಗ್ರೇಸ್ ಜಾತಿಗಳ ನಡುವೆ ಸಂಘರ್ಷವನ್ನ ತಂದೊಡ್ಡುತ್ತಿದೆ: ಈಶ್ವರಪ್ಪ ಆರೋಪ.

17 Oct 2017 0 comment
(0 votes)
 

ಹಾಸನ: ಚುನಾವಣಾ ಸಂದರ್ಭದಲ್ಲಿ ಜಾತಿಗಳ ಮಧ್ಯೆ ಕಲಹ ತಂದು ಅಧಿಕಾರವನ್ನ ಹಿಡಿಯಲು ಹುನ್ನಾರ ಮಾಡ್ತಿರೋದು ಕಾಂಗ್ರೇಸ್ ಪಕ್ಷ. ಸಿಎಂ ಸಿದ್ದರಾಮಯ್ಯ ಶೇ.70ರಷ್ಟು ಮೀಸಲಾತಿ ನೀಡುತ್ತೇವೆ ಎನ್ನುವವರು ಕಳೆದ ನಾಲ್ಕು ವರ್ಷದಿಂದ ಯಾಕೆ ಮಾಡಲಿಲ್ಲ. ಜಾತಿಯನ್ನ ಹೊಡೆಯುವುದರಲ್ಲಿ ಮೊದಲ ನೋಬೆಲ್ ಸ್ಥಾನವನ್ನ ಸಿಎಂ ಸಿದ್ದರಾಮಯ್ಯನವರಿಗೆ ಕೊಡಬೇಕು. ವಿಶ್ವನಾಥನನ್ನ ಮೂಲೆಗುಂಪು ಮಾಡಿದ್ದು ಇದೇ ಸಿದ್ದರಾಮಯ್ಯ, ದಲಿತರನ್ನ ಹಿಂದುಳಿದ ವರ್ಗದವರನ್ನ ಉದ್ದಾರ ಮಾಡುವುದಿರಲಿ. ಪಕ್ಷದಲ್ಲಿರುವವರನ್ನ ಉಳಿಸಿಕೊಂಡರೇ ಸಾಕು. ರಾಜ್ಯದಲ್ಲಿ ಸಾಕಷ್ಟು ದಲಿತ ಕಗ್ಗೊಲೆಗಳಾಗಿವೆ. ಅಂತಹ ಸಂದರ್ಭದಲ್ಲಿ ಸಿಎಂ ಕಣ್ಣು ಮುಚ್ಚಿಕೊಂಡಿದ್ದು ಯಾಕೆ ಎಂದು ಪ್ರಶ್ನ ಮಾಡಿದ್ರು. ಗೌರಿ ಕೊಲೆಯನ್ನ ಆರ್.ಎಸ್.ಎಸ್. ಮತ್ತು ಬಿಜೆಪಿ ಮಾಡಿದ್ದು ಎಂದು ಕೂಗಾಡಿದ್ರು. ಆದ್ರೆ ಗೌರಿ ಲಂಕೇಶ್ ಕೊಂದವರನ್ನ ಬಂದಿಸಲು ಮುಂದಾಗದೇ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: