Today: 23.Sep.2018

ಕಾವೇರಿ ತುಲಾ ಸಂಕ್ರಮಣ Featured

ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವವಿದೆ: ಎ.ಮಂಜು

19 Oct 2017 0 comment
(0 votes)
 

ಕೊಣನೂರಿನ ಕಾವೇರಿ ತಟದಲ್ಲಿ ಕಾವೇರಿ ತುಲಾ ಸಂಕ್ರಮಣದ ವಿಶೇಷ ಪೂಜೆ

ಕೊಣನೂರು: ಕೊಡಗಿನತಲ ಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವಕಾವೇರಿ ಮಾತೆಗೆ ವಿಶೇಷ ಮಹತ್ವವಿದೆಎಂದು ಪಶು ಸಂಗೋಪನಾ ಮತ್ತುರೇಷ್ಮೆಖಾತೆ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎ. ಮಂಜು ತಿಳಿಸಿದರು.

ಕೊಣನೂರಿನಕಾವೇರಿತಟದಲ್ಲಿಕಾವೇರಿತುಲಾ ಸಂಕ್ರಮಣದವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದಅವರು, ಕೊಡಗಿನವರಷ್ಟೆ ಅಲ್ಲದೇ ನಾಡಿನ ಹಾಗೂ ದೇಶದ ನಾನಾ ಭಾಗಗಳಲ್ಲಿನ ಜನರೆಲ್ಲಾ ಈ ಪೂಜೆಯಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿ ಪುನೀತರಾಗುತ್ತಾರೆ. ನಾಡಿನ ಸಮಸ್ತ ಜನರಿಗೆಲ್ಲಾ ಒಳಿತಾಗಲಿ ಎಂದು ತಿಳಿಸಿದರು.

ವಿಶೇಷ ಪೂಜೆಯ ಸಾನಿಧ್ಯ ವಹಿಸಿದ್ದ ಹೈದರಾಬಾದ್‌ಗುರುಪೀಠಂನಆಚಾರ್ಯ ಶ್ರೀ ಗುರುಪ್ರಕಾಶ್‌ಗೂರೂಜಿಅವರು,ಕಾವೇರಿ ಸಂಕ್ರಮಣದ ಪೂಜೆಗೆ ಪೌರಾಣಿಕ ಹಿನ್ನೆಲೆಯಿದ್ದುಕಾವೇರಿತಲಕಾವೇರಿಯಲ್ಲಿ ಹುಟ್ಟಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಪ್ರಕೃತಿಯತಾಣದಲ್ಲಿತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನು ಪುನೀತಗೊಳಿಸುತ್ತಿದ್ದಾಳೆ. ತೀರ್ಥೋದ್ಭವದ ಸಂದರ್ಭದಲ್ಲಿ ಹಿರಿಯರಿಗೆ ಪಿಂಡ ಪ್ರಧಾನ ಮಾಡುವಕಾರ್ಯವೂ ನಡೆಯುತ್ತದೆ. ತುಲಾ ಸಂಕ್ರಮಣದಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ. ಕಾವೇರಿತೀರ್ಥೋದ್ಭವದತುಲಾ ಸಂಕ್ರಮಣ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ ಎಂದು ಆಶೀರ್ವಚನ ನೀಡಿದರು.

ಗ್ರಾಮದ ಹಿರಿಯ ಮುಖಂಡ ಶ್ರೀನಿವಾಸ್ ಮೂರ್ತಿ, ನಿವೃತ್ತ ಉಪನ್ಯಾಸಕ ಕೆ.ಎಸ್.ವಾಸುದೇವ್, ಕಾವೇರಿ ಸ್ವಚ್ಛತಾ ಆಂದೋಲನದ ತಾಲ್ಲೂಕು ಘಟಕದ ಉಪಾಧ್ಯಕ್ಷ ಬಿ.ಪಿ.ಗಂಗೇಶ್, ಕೊಣನೂರು ಹೋಬಳಿ ಘಟಕದಅಧ್ಯಕ್ಷ ಕೆ.ವಿ.ಸತೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜ಼ಮೀರ್‌ಅಹಮದ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾವೇರಿ ಸ್ವಚ್ಛತಾ ಆಂದೋಲನದ ಹೋಬಳಿ ಘಟಕದ ಉಪಾಧ್ಯಕ್ಷ ಸೂರಜ್ ಬಾಗಲ್, ಕಾರ್ಯದರ್ಶಿ ಶ್ರೀನಿವಾಸ್, ವಿದ್ಯಾರ್ಥಿ ನಿಲಯಪಾಲಕಕೃಷ್ಣಕುಮಾರ್, ಶಿಕ್ಷಕ ರವಿಕುಮಾರ್, ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ಶಾಬಾಜ಼್, ಸ್ಥಳೀಯರಾದ ಶ್ರೀಧರ್, ಆನಂದ್, ಮಂಜು, ಪ್ರತಾಪ್ ಮೊದಲಾದವರು ಉಪಸ್ಥಿತರಿದ್ದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: