Today: 17.Jan.2018

ಮಕ್ಕಳ ಸಾಹಿತ್ಯ ಸಮ್ಮೇಳನ Featured

ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಕಣ್ಮನ ಸೆಳೆದ ಮಕ್ಕಳ ಕಲಾತಂಡ.

06 Dec 2017 0 comment
(1 Vote)
 

ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಪ್ರಭಾವದಿಂದ ಮಕ್ಕಳ ಮನಸ್ಸು ಕ್ಷೀಣಗೊಳ್ಳುತ್ತಿವೆ: ಸಾಹಿತಿ ಸಿದ್ದಲಿಂಗಯ್ಯ ವಿಷಾಧ.

ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮಕ್ಕಳ ಕಲರವ ಶುರುವಾಗಿದೆ. ಅಂದ್ರೆ ಮಕ್ಕಳ ಸಾಹಿತ್ಯ ಪರಿಷತ್ ನ ತರರೂರಾದ ಗೊಮ್ಮಟನ ತಪ್ಪಲಿನ ಚನ್ನರಾಯಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೂತೋಟದಲ್ಲಿ ಸಾವಿರಾರು ಹೂಗಳಿರುವ ಹಾಗೇ ಮಕ್ಕಳೆಲ್ಲಾ ಒಂದೇಡೆ ಸೇರಿದ್ದು ಒಂದು ಅವಿಸ್ಮರಣೀಯ. ಅಂತಹದೊಂದು ಸಮ್ಮೇಳನದಲ್ಲಿ ಮಕ್ಕಳ ಕಲರವ ಹೇಗಿತ್ತು ನೋಡಿ ಬರೋಣ ಬನ್ನಿ.....

ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಹಿನ್ನಲೆಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಪ್ರಾರಂಭವಾದ ಕಾರ್ಯಕ್ರಮ ನಂತ್ರ ಪಟ್ಟಣದ ಎಪಿಎಂಸಿ ಬಳಿಯಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಜನಸ್ತೋಮದ ಜೊತಗೆ ಮಕ್ಕಳ ಸಾಲು ಹನುಮಂತನ ಬಾಲಕ್ಕಿಂತಲೂ ಹೆಚ್ಚಾಗಿತ್ತು ಅಂದ್ರೆ ತಪ್ಪಾಗಲ್ಲ. ಜೊತೆಗೆ ಪಟ್ಟಣದ ಪೂರ್ಣಚಂದ್ರ ಶಾಲೆಯ ಮಕ್ಕಳಿಂದ ನಿರ್ಮಾಣವಾದ ಸುಮಾರು 350 ಮೀಟರ್ ಉದ್ದದ ಕನ್ನಡ ಧ್ವಜದ ಪ್ರದರ್ಶನ ನೋಡುಗರ ಆಕರ್ಷಣಾ ಕೇಂದ್ರ ಬಿಂದುವಾಗಿತ್ತು. ಇಷ್ಟೆಯಲ್ಲದೇ 15ಕ್ಕೂ ಹೆಚ್ಚು ಕಲಾತಂಡಗಳು ಮತ್ತು 20 ಕ್ಕೂ ಹೆಚ್ಚು ಟ್ಯಾಬ್ಲೋಗಳ ಮೂಲಕ ಸಮ್ಮೆಳನಾಧ್ಯಕ್ಷರ ಮೆರವಣಿಗೆ ಯಾವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಕಡಿಮೆಯಿರಲಿಲ್ಲ ಎಂಬ ಮಾತನ್ನ ಸಾರಿ ಸಾರಿ ಹೇಳುವಂತಿತ್ತು. ಇನ್ನು ಈ ಟ್ಯಾಬ್ಲೋದಲ್ಲಿ ಪ್ರಮುಖ ಆಕರ್ಷಕವಾಗಿದ್ದು 2018ರಲ್ಲಿ ಜರುಗುವ ಮಹಾಮಸ್ತಕಾಭಿಷೇಕದ ಬಾಹುಬಲಿ ಮೂರ್ತಿಯ ಪ್ರದರ್ಶನವೂ ಜನರನ್ನ ಆಕರ್ಷಣೆ ಮಾಡಿತ್ತು. ಬಳಿಕ ವೇದಿಕೆ ಕಾರ್ಯಕ್ರಮವವನ್ನ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಮತ್ತು ಶಾಸಕ ಸಿ.ಎನ್.ಬಾಲಕೃಷ್ಣ, ಸಮ್ಮೇಳನಾಧ್ಯಕ್ಷೆ ಚಂದನ ಸೇರಿದಂತೆ ವೇದಿಕೆ ಗಣ್ಯರಿಂದ ದೀಪ ಬೆಳಗುವ ಮೂಲಕ ಚಾಲನೆ ಸಿಕ್ಕಿತು.

ಮಕ್ಕಳು ಪುಟ್ಟ ಪುಟ್ಟ ಗಿಣಿ ಮರಿಗಳಿದ್ದಂತೆ ಅವರುಗಳ ಕಲರವದಿಂದ ಎಂತಹವರುಗಳ ಮನಸ್ಸನ್ನು ಸಂತೋಷಪಡಿಸದೇ ಇರಲಾರದು. ಹೀಗಾಗಿ ನಾನು ಇಂದು ತುಂಬ ಖುಷಿಯಾಗಿದ್ದೇನೆ. ಆದ್ರೆ ದೇಶದಲ್ಲಿ ಮಕ್ಕಳ ಕೆಲವು ಬೆಳವಣಿಗೆಯನ್ನ ನೋಡ್ತಿದ್ರೆ ಮನಸ್ಸಿಗೆ ಆಘಾತವಾಗುತ್ತದೆ. ಇಂದು ಇಂದು ದೇಶದಲ್ಲಿ ಕೋಟ್ಯಾಂತರ ಮಕ್ಕಳು ಶಿಕ್ಷಣದಿಂದ ವಂಚಿತವಾದ್ರೆ, ಕೋಟ್ಯಾಂತರ ಮಕ್ಕಳ ಬಾಲಕಾರ್ಮಿಕರಾಗಿದ್ದಾರೆ. ಇನ್ನು ಶೇ. 50ಕ್ಕೂ ಹೆಚ್ಚು ಮಕ್ಕಳು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರೇ, ಶೇ.59ರಷ್ಟು ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಇಷ್ಟೆಯಲ್ಲದೇ ಹಸಿವಿನಿಂದ ಪ್ರತಿನಿತ್ಯ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿರುವುದರ ವರದಿಗಳನ್ನ ನೋಡುತ್ತಿದ್ದರೇ ಮನಸ್ಸಿಗೆ ನೋವಾಗುತ್ತದೆ. ಜೊತೆಗೆ ಕೆಲ ಸಾಮಾಜಿಕ ಜಾಲತಾಣಗಳ ಮಾಧ್ಯಮ ಮತ್ತು ಮಾಧ್ಯಮಗಳ ಪ್ರಭಾವದಿಂದಲೂ ಮಕ್ಕಳ ಮನಸ್ಸು ಗಾಸಿಗೊಳ್ಳುತ್ತಿದೆ ಎಂಬುದಕ್ಕೆ ಖಾಸಗಿ ವಾಹಿನಿಯ ಧಾರಾವಾಹಿಯ ಪ್ರಭಾವಕ್ಕೊಳಗಾಗಿ ಸಾವನ್ನಪ್ಪಿದ ಪುಟ್ಟ ಕಂದಮ್ಮ ಸಾಕ್ಷಿಯಾಗಿದ್ದಾಳೆ. ಹೀಗಾಗಿ ಮುಂದಿನ ದಿನದಲ್ಲಾದ್ರು ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕೆಂದ್ರು.

-ಡಾ.ಸಿದ್ದಲಿಂಗಯ್ಯ, ದಲಿತ ಸಾಹಿತಿ. 

ಹಾಸನ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಅಂದ್ರೆ ತಪ್ಪಾಗಲ್ಲ. ಮಕ್ಕಳ ಸಾಹಿತ್ಯ ತವರೂರು ಚನ್ನರಾಯಟಪ್ಟಣ ನನ್ನ ಕ್ಷೇತ್ರದಲ್ಲಿದೆ ಎನ್ನುವುದುಕ್ಕೆ ನನಗೆ ಹೆಮ್ಮೆಯಾಗುತ್ತದೆ. ಇಂತಹದೊಂದು ಸಮ್ಮೇಳನ ನಡೆಯೋದಕ್ಕೆ ತಾಲ್ಲೂಕಿನ ಸಾವರ್ವಜನಿಕರು ನೀಡಿದ ಸಹಕಾರ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ಕರೆಗೆ ಓಗೊಟ್ಟು ಡಾ.ಸಿದ್ದಲಿಂಗಯ್ಯ ಆಗಮಿಸಿದ್ದು ನಮ್ಮ ಸೌಭಾಗ್ಯ. ಸಹಕಾರಪ್ರಮುಖ ಪಾತ್ರವೇ ಹೆಚ್ಚು. ಪ್ರಾಪಂಚಿಕ ಸತ್ಯಾಸತ್ಯೆಗಳನ್ನ ಎತ್ತಿಹಿಡಿದ ನಾಡು ನಮ್ಮದು. ಕನ್ನಡ ರಾಜ್ಯೋತ್ಸವ ಬಂದಾಗ ಮಾತ್ರ ಸರ್ಕಾರ ಕಣ್ಮೆರೆಯದೇ ಪ್ರತಿದಿನವೂ ಕನ್ನಡ ನಾಡು ನುಡುಗೆ ಹೆಚ್ಚು ಒತ್ತುನೀಡಬೇಕು. ಮಕ್ಕಳ ಸಾಹಿತ್ಯ ಪರಿಷತ್ ಗೆ ಕೂಡಾ ಮುಂದಿನ ಬಜೆಟ್ ನಲ್ಲಿ ಶಾಶ್ವತ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಕ್ಕೆ ಮನವಿ ಮಾಡಿದ್ರು.

-ಸಿ.ಎನ್.ಬಾಲಕೃಷ್ಣ, ಶಾಸಕ.

ಇನ್ನು ಸಮ್ಮೇಳನಾಧ್ಯಕ್ಷೆ ಚಂದನಾ ಮಾತನಾಡುತ್ತಾ,ಕನ್ನಡ ನಾಡು ಕಾವೇರಿಯಿಂದ ಗೋದಾವರಿಗೂ ಪಸರಿಸಿದ್ದು, ಹಲವು ರಾಜಮನೆತನಗಳು ಆಳ್ವಿಕೆ ನಡೆಸಿದ್ದು, ತಮ್ಮದೇ ಆದ ಸಾಂಸ್ಕೃತಿಕ ಕೊಡುಗೆ ನೀಡಿದ್ದಾರೆ.ಹಳೆಗನ್ನಡ, ಹೊಸಗನ್ನಡದ ಕವಿಗಳನ್ನ ಕಂಡ ನಾಡು ನಮ್ಮದು. ಹೀಗಾಗಿಯೇ ನಮ್ಮ ನಾಡಿಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿದೆ. ಕನ್ನಡದಷ್ಟು ಸುಂದರ ಭಾಷೆ ಬೇರ್ಯಾವುದು ಇಲ್ಲ. ಆಂಗ್ಲಭಾಷೆ ಮತ್ತು ಬೇರೆ ಭಾಷೆ ಕಲಿಯಬಾರದು ಎಂಬುದು ನಮ್ಮ ಉದ್ಧೇಶವಲ್ಲ. ಸೃಜನಾತ್ಮಕ ಬರವಣಿಗೆಗೆ ಕನ್ನಡದಷ್ಟು ಉತ್ತಮವಾದ ಭಾಷೆ ಮತ್ತೊಂದಿಲ್ಲ. ಸಮ್ಮೇಳನಗಳು ಕನ್ನಡ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಕಂಬಳವನ್ನ ಕೆಲವು ಪ್ರಾಣಿಕಾಳಿಯ ಮಖವಾಡವನ್ನಾಕಿ ಹಾಳು ಮಾಡಲು ಪ್ರಯತ್ನಿಸಿದ್ರು. ಆದ್ರೆ ಅದು ಗ್ರಾಮೀಣ ಕ್ರೀಡೆ ಮುಂದಿನ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ಯುವ ಜನತೆ ಒಂದಾಗಬೇಕಿದೆ. ಕನ್ನಡ ಸಾಹಿತ್ಯದ ಕಂಪು ಕೇಳುಗರಿಗೆ, ಹಿತನೀಡುವಂತೆ ಓದುಗರಿಗೆ ಉಲ್ಲಾಸವಾಗುವಂತೆ ಬರೆಯುವ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗ ಜವಾಬ್ದಾರಿ ನಮ್ಮ ಮೇಲಿದೆ. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವಾಗಿದ್ರು ಅದರ ಅನುಷ್ಠಾನ ಅರ್ಧದಷ್ಟು ಆಗದಿರುವುದು ವಿಷಾಧನೀಯ. ಜೊತೆಗೆ ಐಎಎಸ್, ಐಪಿಎಸ್ ನಂತರ ದೊಡ್ಡ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಕೂಡಾ ಕನ್ನಡದಲ್ಲಿ ಮುದ್ರಣವಾಗಬೇಕೆಂದು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ರು.

-ಚಂದನ, ಸಮ್ಮೇಳನಾಧ್ಯಕ್ಷೆ, ಹಾಸನ

ಒಟ್ಟಾರೆ ಇಂದು ನಡೆದ ಸಾಹಿತ್ಯ ಸಮ್ಮೇಳನದಲ್ಲಿ 10ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಮಕ್ಕಳ ಕಲರವವನ್ನೇ ಸೃಷ್ಠಿಗೈದದ್ದು ಚನ್ನರಾಯಟಪ್ಟಣದ ಬೃಹತ್ ಮೈಲುಗಲ್ಲು ಎಂದ್ರೆ ತಪ್ಪಾಗಲ್ಲ. ಸಮ್ಮೇಳನಕ್ಕೆ ಬಂದ ಸಾಹಿತ್ಯಾಸಕ್ತರರಿಗೆ ಕೇವಲ ಮನಸ್ಸಿಗೆ ತಪ್ಪೆರಷ್ಟೆಯಲ್ಲದೇ ಮಧ್ಯಾಹ್ನದ ಸವಿಭೋಜನ ಬಾಯಿಚಪ್ಪರಿಸುವಂತೆ ಮಾಡಿದ್ದು ಮತ್ತೊಂದು ವಿಶೇಷ. ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನಕ್ಕೆ ಇಂದು ಚಾಲನೆ ಸಿಕ್ಕಿದ್ದು, ನಾಳೆ ಕವಿಗೋಷ್ಠಿ, ವಿಚಾರಗೋಷ್ಟಿಗಳ ಮೂಲಕ ತೆರೆಕಾಣಲಿದೆ.

  • - ಕೊಂಡಿ ನ್ಯೂಸ್...ಹಾಸನ.
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters