Today: 17.Jan.2018

ಮಕ್ಕಳ ಕವಿಗೋಷ್ಠಿ Featured

ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ತೆರೆ: ಕವಿಗೋಷ್ಠಿಯಲ್ಲಿ ಅರಳಿದ ಮಕ್ಕಳ ಸೂಪ್ತ ಪ್ರತಿಭೆ.

07 Dec 2017 0 comment
(1 Vote)
 

ಚನ್ನರಾಯಪಟ್ಟಣ: ಡಿ.6ರಿಂದ ಪ್ರಾರಂಭವಾಗಿರುವ ಮಕ್ಕಳ ಸಮ್ಮೇಳನ ಇಂದು ವಿದ್ಯುಕ್ತವಾಗಿ ತೆರೆಕಂಡಿತು. ರಾಜ್ಯದ ಮಕ್ಕಳ ಸಾಹಿತ್ಯ ಸಮ್ಮೇಳನದ ತವರೂರಾದ ಚನ್ನರಾಯಪಟ್ಟಣ ಎರಡು ದಿನಗಳಿಂದ ಮದುವಣಗಿತ್ತಿಯಂತೆ ಶೃಂಗಾರಗೊಂಡು ಮಕ್ಕಳನ್ನ ರಂಚಿಸಿತು. ಇಂದು ಕೂಡಾ ಪುಟಾಣಿ ಮಕ್ಕಳು ನಡೆಸಿಕೊಟ್ಟ ಗೋಷ್ಠಿಗೂ, ನುಡಿದ ಕವಿತೆಯ ಸಾಲುಗಳು ನೆರದಿದ್ದವರನ್ನ ಮಂತ್ರ ಮುಗ್ದರನ್ನಾಗಿಸಿತು. ಅದ್ರ ಒಂದು ವರದಿ ಇಲ್ಲಿದೆ ನೋಡಿ....

ಚಟ್ ಪಟ್ ಅಂತ ಮಾತಾಡೋ, ಹರಳು ಹುರಿದಂತೆ ಚುರ್ಕಾಗಿರೋ ಮಕ್ಳುಗಳನ್ನ ನೋಡಿದ್ವಿ. ಹಾದ್ರೆ ದೊಡ್ಡ ದೊಡ್ಡ ಸಾಹಿತಿಗಳಿಗೂ, ಕವಿಗಳಿಗೂ, ವಿಚಾರವಂತರಿಗೂ ನಾವೇನು ಕಮ್ಮಿಯಿಲ್ಲ ಎನ್ನುವುದನ್ನ ತೋರಿಸಿಕೊಟ್ಟಿದ್ದು ಇಂದು ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಎಂದರೆ ಹಿರಿಯರು, ಪ್ರಬುದ್ಧರ ಆಸ್ತಿ ಎನ್ನುವ ಭಾವನೆ ಬಲವಾಗಿ ಬೇರೂರಿತ್ತು. ಆದ್ರೆ ಮಕ್ಕಳ ಸಾಹಿತ್ಯವನ್ನೂ ದೊಡ್ಡವರೇ ಬರೆದು ಮುಂದಿಡುವಷ್ಟು ಅದು ಈಗ ಗಟ್ಟಿಯಾಗಿದೆ. ಮಕ್ಕಳಿಂದಲೇ ಮಕ್ಕಳ ಸಾಹಿತ್ಯ ಆಗಬೇಕು, ಅವರಲ್ಲಿನ ಬರವಣಿಗೆ ಶಕ್ತಿಯನ್ನು ಪ್ರೇರೇಪಿಸುವ ಹೊಸ ಪ್ರಯತ್ನಕ್ಕೆ ಸಾಹಿತ್ಯಾಸಕ್ತರ ತಂಡ ಹಾಸನದ ಚನ್ನರಾಯಪಟ್ಟಣದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿದ್ದು, ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾದ ತಂಡಗಳನ್ನು ಹೊಂದಿರುವ ಚನ್ನರಾಯಪಟ್ಟಣ, 5 ವರ್ಷಗಳ ಹಿಂದೆ ಮಕ್ಕಳ ಸಾಹಿತ್ಯ ಪರಿಷತ್ ಎಂಬುದನ್ನ ಸ್ಥಾಪಿಸಿತು. ಕನ್ನಡ ಭಾಷೆ, ಸಾಹಿತ್ಯದ ಪರಿಚಯವೇ ಇಲ್ಲದಂತಿರುವ ಮಕ್ಕಳನ್ನೊಳಗೊಂಡ, ಓದಿನ ಒತ್ತಡದಲ್ಲಿ ಸಿಲುಕಿ ಸೂಕ್ತ ವೇದಿಕೆ ದೊರೆಯದೆ ಕಮರುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ರೂಪುಗೊಂಡಿತು. ಪ್ರಸ್ತುತ ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವ ರೀತಿಯಿಂದಲೂ ಕಡಿಮೆಯಿಲ್ಲದಂತೆ, ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವಂತಹ ಸಾಹಸಕ್ಕೆ ಕೈ ಹಾಕಿದೆ ಈ ತಂಡ. ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನಾ. ಅಶೋಕ್ ತಂಡದ ಪರಿಕಲ್ಪನೆಯೇ ಸಮ್ಮೇಳನದ ಹಿಂದಿನ ಬೃಹತ್ ಶಕ್ತಿ ಎಂದ್ರೆ ತಪ್ಪಾಗಲ್ಲ. 2015ರಲ್ಲಿ ತಾಲ್ಲೂಕು ಮಟ್ಟದ ಸಮ್ಮೇಳನ ಮಾಡಿ ಗಮನ ಸೆಳೆದಿದ್ದ ಚನ್ನರಾಯಪಟ್ಟಣ ಇಂದು ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ಎರಡನೇ ದಿನವಾದ ಇಂದು ಕೂಡಾ ಮಕ್ಕಳು ಸಮ್ಮೇಳನದಲ್ಲಿ ಜೇನಿನನೊಣಗಳಂತೆ ಒಂದೆಡೆ ಸೇರಿ ಕವನ, ಹನಿಗವನ ಎಂಬ ಕವನದ ಮೂಲಕ ಸಿಹಿಯನ್ನ ನೆರೆದಿದ್ದ ಸಾಹಿತ್ಯಾಸಕ್ತರಿಗೆ ನೀಡಿದ್ರು ಎಂದ್ರೆ ತಪ್ಪಾಗಲ್ಲ. ಜಿಲ್ಲೆಯ ವಿವಿಧ ಶಾಲೆಯಗಳಿಂದ ಆಗಮಿಸಿದ್ದ. 150ಕ್ಕೂ ಹೆಚ್ಚು ಮಕ್ಕಳು ಇಂದು ನಡೆದ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ನಿಲುವುಗಳನ್ನ ಮಾತಿನ ಮೂಲಕ, ಕವನದ ಮೂಲಕ ಪ್ರತಿಪಾದಿಸಿದ್ರು. ಮೊದಲ ವಿಚಾರಗೋಷ್ಠಿಯಲ್ಲಿ ಭವ್ಯಭಾರತದ ನಿರ್ಮಾಣ, ಭೌಧಿಕ ವಿಕಸನದಲ್ಲಿ ಮಾತೃಭಾಷಾ ಶಿಕ್ಷಣ ಮಾಧ್ಯಮದ ಮಹತ್ವ, ಜಿಲ್ಲೆಯ ಸಾಂಸ್ಕೃತಿಕ, ಕಲೆ, ಸಾಹಿತ್ಯದ ಕೊಡುಗೆ, ದೈಹಿಕ ವಿಕಸನದಲ್ಲಿ ಗ್ರಾಮೀಣ ಕ್ರೀಡೆಗಳ ಮಹತ್ವ, ಮನ್ನಡ ನೆಲ, ಜಲ, ಸಂಸ್ಕೃತಿಯ ರಕ್ಷಣೆಯಲ್ಲಿ ಮಕ್ಕಳ, ಯುವಜನತೆಯ ಪಾತ್ರ ಎಂಬ ವಿಷಯಗಳಿಗನ್ನಿಟ್ಟುಕೊಂಡು ಮಾತನಾಡಿದ್ದ ಶಾಲಾ ಮಕ್ಕಳುಗಳ ಪ್ರತಿಭೆ ವೇದಿಕೆಯ ಮೂಲಕ ಅನಾವರಣಗೊಂಡಿತು. ನಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನ ತೋರಿಸಿಕೊಟ್ಟರು.

ಇಂದು ನಡೆದ ಕವಿಗೋಷ್ಠಿ, ವಿಚಾರಗೋಷ್ಠಿಯಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚು ಭಾಗವಹಿಸಿದ್ದು ವಿಶೇಷವಾಗಿತ್ತು. ಇಷ್ಟೆಯಲ್ಲದೇ ಇಂದು ಸಾಹಿತ್ಯದ ರಸದೌತಣದ ಜೊತೆಗೆ ಮಧ್ಯಾಹ್ನದ ಬೂರಿಭೋಜನವನ್ನ ಸವಿಯುವ ಮೂಲಕ ಮಕ್ಕಳು ಸಕತ್ ಎಂಜಾಯ್ ಮಾಡಿದ್ರು. ಇಂದು ಕೂಡಾ 5ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ಮೂಲಕ ಮಕ್ಕಳ ನುಡಿಜಾತ್ರೆಗೆ ಇಂಬುಕೊಡುವಂತಿತ್ತು. ಎರಡು ದಿನಗಳ ಕಾಲ ನಡೆದ ಸಮ್ಮೇಳನಕ್ಕೆ ಇಂದು ತೆರೆಬೀಳಲಿದ್ದು, ಸಂಜೆ ಸಮಾರೋಪ ಸಮಾರಂಭ ಜರುಗಲಿದೆ. ಬಳಿಕ ನಡುರಾತ್ರಿಯ ತನಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಲಿದ್ದು, ಹಾಸನ ಜಿಲ್ಲೆಯ ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ತೆರೆಬೀಳಲಿದೆ. ಮುಂದಿನ ಮಕ್ಕಳ ಸಾಹಿತ್ಯ ಸಮ್ಮೇಳನವನ್ನ ಮಂಡ್ಯ ಜಿಲ್ಲೆಯಲ್ಲಿ ನಡೆಸಲು ಕೂಡಾ ತೀರ್ಮಾನಿಸಲಾಗಿದೆ.

ಒಟ್ಟಾರೆ ಮಸ್ತಕಾಭಿಷೇಕ ತಯಾರಿ ನಡೆಯುತ್ತಿರುವಾಗಲೇ, ಮಕ್ಕಳ ಸುಪ್ತಪ್ರತಿಭೆಗೊಂದು ವೇದಿಕೆಯನ್ನ ನಿರ್ಮಾಣ ಮಾಡಿ ಅವರುಗಳ ಪ್ರತಿಭೆಯನ್ನ ಹೊರಹಾಕಲು ಮತ್ತು ಬದಲಾಗಿರುವ ಸಂಕೀರ್ಣ ಬದುಕಿನ ಸನ್ನಿವೇಶಗಳಿಗೆ ಹಲವು ಅರ್ಥಗಳಿರುತ್ತವೆ ಎಂಬುದನ್ನ ಮಕ್ಕಳಿಗೆ ಎಳೆಯೆ ವಯಸ್ಸಿನಿಂದಲೇ ಪರಿಚಯ ಮಾಡಿಸುವುದು ಸಮ್ಮೆಳನದ ಉದ್ದೇಶವಾಗಿದ್ದು, ಅದನ್ನ ಚನ್ನರಾಯಪಟ್ಟಣದ ಸಾಹಿತ್ಯ ಲೋಕ ನಾಡಿಗೆ ತೋರ್ಪಡಿಸಿದೆ ಎಂದರೇ ಅತಿಷಯೋಕ್ತಿಯಲ್ಲ.

  • Kondi News, Hassan.
Last modified on Thursday, 07 December 2017 12:23
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters