Today: 17.Jan.2018

ಪುಂಡಾನೆ ಸೆರೆ Featured

ಕೊನೆಗೂ ಸೆರೆಯಾದ ಪುಂಡಾನೆ: ರೈತರ ಮೊಗದಲ್ಲಿ ಕೊಂಚ ಹರ್ಷ

09 Dec 2017 0 comment
(0 votes)
 

ಅರಿವಳಿಕೆ ಚುಚ್ಚುಮದ್ದಿನ ಕೊರತೆಯಿಂದ ಸ್ಥಗಿತಗೊಳಿಸಿದ್ದ ಪುಂಡಾನೆ ಸೆರೆ ಕಾರ್ಯಾಚರಣೆಯನ್ನು ಕೊನೆಗೂ ಅರಣ್ಯ ಇಲಾಖೆ ಕೈಗೆತ್ತಿಗೊಂಡಿದ್ದು, ಬೆಳಗ್ಗೆಯಿಂದಲೇ ಸಕಲೇಶಪುರ ತಾಲ್ಲೂಕು ಹಾಲೇ ಬೇಲೂರು ಬಳಿಯಿಂದ ಆನೆ ಆಪರೇಷನ್ ಮಾಡಿದ್ದು, ತಾಲ್ಲೂಕಿನ ಬಾಳ್ಳು, ಹೊಂಕರವಳ್ಳಿ ಭಾಗದಲ್ಲಿ ನಿರಂತರವಾಗಿ ಪ್ರಾಣಹಾನಿ ಮಾಡುತ್ತಿದ್ದ, ಕಾಡಾನೆಗಳಲ್ಲಿ ಒಂದನ್ನು ಶನಿವಾರ ಬಾಳ್ಳು ಸಮೀಪದ ರಾಜೇಂದ್ರಪುರದಲ್ಲಿ ಸೆರೆ ಹಿಡಿಯಲಾಯಿತು.

ಕಾರ್ಯಾಚರಣೆಗೆ 5 ಪಳಗಿದ ಆನೆ, ಅವುಗಳ 10 ಮಂದಿ ಸಿಬ್ಬಂದಿ ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳಲಾಗಿದ್ದು, ಕುಶಾಲನಗರದ ದುಬಾರೆ ಆನೆ ಶಿಬಿರದಿಂದ ಪಳಗಿದ ಆನೆಗಳನ್ನು ಕರೆತರಲಾಗಿತ್ತು. ಆನೆ ಸೆರೆಗೆ ತುರ್ತಾಗಿ ಬೇಕಿರುವ ಡ್ರಗ್ಸ್ ಅನ್ನು ಬೇರೆ ಕಡೆಯಿಂದ ತರಿಸಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು. ಇಂದು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಹೆಚ್ಚಾಗುತ್ತಿರುವ ಬೆಳೆ ನಷ್ಟ ಮತ್ತು ಅಮಾಯಕರ ಸಾವಿನ ನಂತರ ಈ ನಿರ್ಧಾರ ಕೈಗೊಂಡಿದ್ದು, ಸದ್ಯ ಎರಡು ಪುಂಡಾನೆ ಸೆರೆ ಹಿಡಿಯಲು ಅನುಮತಿ ಸಿಕ್ಕಿತ್ತು.

ದಾಳಿ ನಡೆಸಿದ ಆನೆಯನ್ನು ಗೊತ್ತು ಮಾಡಲಾಗಿದ್ದು, ಅದರ ಚಲನವಲನವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲಿಸುತ್ತಿದ್ರು. ಎರಡು ದಿನಗಳ ಹಿಂದೆ ಬಂಡಿಹಳ್ಳಿ ಬಳಿಯ ಕಾಫಿ ತೋಟದ ರೈಟರ್ ಯೋಗೇಶ್ ಎಂಬುವರು ಕಾಡಾನೆ ದಾಳಿಗೆ ಬಲಿಯಾದ ನಂತರ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಆನೆಗಳನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದು, ರಸ್ತೆಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಿಡಿಯುವ ಭರವಸೆ ನೀಡಿದ್ದರು. ಮೃತನ ಕುಟುಂಬಕ್ಕೆ ಈಗಾಗಲೇ ₹ 2 ಲಕ್ಷ ಪರಿಹಾರ ನೀಡಲಾಗಿದ್ದು, ಉಳಿದ ₹ 3 ಲಕ್ಷ ಹಣವನ್ನು ಮೃತರ ಪತ್ನಿ ಖಾತೆಗೆ ಜಮಾ ಮಾಡಲಾಗುತ್ತದೆ.

ದುಬಾರೆ ಆನೆ ಶಿಬಿರದಿಂದ ಹರ್ಷ, ವಿಕ್ರಮ, ಗೋಣಿಕೊಪ್ಪ ಮತ್ತಿಗೋಡು ಶಿಬಿರದಿಂದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ ಆನೆಗಳನ್ನು ಕರೆತರಲಾಗಿದೆ. ವನ್ಯಜೀವಿ ವಿಭಾಗದ ಎಪಿಸಿಸಿಎಫ್‌ಜಯರಾಂ, ಎಪಿಸಿಸಿಎಫ್‌ಮನೋಜ್‌ಕುಮಾರ್, ಸಿಸಿಎಫ್‌ಎ.ಕೆ.ಸಿಂಹ, ಎಸಿಎಫ್‌ ಮಂಜುನಾಥ್‌ನೇತೃತ್ವ ವಹಿಸಿದ್ದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters