Today: 17.Jan.2018

ಪ್ರತಿಪಕ್ಷದಲ್ಲಿ ಕೂರುತ್ತೇವೆ

ಜನರ ಆಶೀರ್ವದಿಸದಿದ್ದರೇ ಪ್ರತಿಪಕ್ಷದಲ್ಲಿ ಕೂರುತ್ತೇವೆ: ಎಚ್.ಡಿ.ರೇವಣ್ಣ.

01 Jan 2018 0 comment
(0 votes)
 

ಹಾಸನ: ಸಿಎಂ ಸಿದ್ದರಾಮಯ್ಯ ಜನವರಿ 4 ರಂದು ಹಾಸನ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಅಷ್ಟರೊಳಗೆ ಜಿಲ್ಲೆಯಲ್ಲಿ ಬಿಗಡಾಯಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ನೀಡುವಂತೆ ಕೋರಿ, ಈವರೆಗೆ ಸರಕಾರಕ್ಕೆ 14 ಪತ್ರ ಬರೆಯಲಾಗಿದೆ. ಆದರೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಭಿಕ್ಷೆ ಬೇಡೋ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಲಕ್ಷ್ಯ ಹೀಗೇ ಮುಂದುವರಿದರೆ, ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಮುಂದಿನ ಚುನಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ರೇವಣ್ಣ, ಸ್ವಂತ ಬಲದಿಂದ ಸರಕಾರ ರಚನೆ ಮಾಡೋ ಅವಕಾಶ ಸಿಗದೇ ಹೋದ್ರೆ ಪ್ರತಿಪಕ್ಷದಲ್ಲಿ ಕೂರುತ್ತೇವೆ ಅಂತ ಈಗಾಗಲೇ ದೇವೇಗೌಡರು, ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ ಎಂದರು. ಜಾತ್ಯಾತೀತ ಪಕ್ಷ ಎನ್ನುವ ಕಾಂಗ್ರೆಸ್ ಸಣ್ಣ ಸಣ್ಣ ಜಾತ್ಯಾತೀತ ಪಕ್ಷಗಳನ್ನು ಒಡೆಯುವ ಸ್ಥಿತಿಗೆ ಬಂದಿರುವುದು ದುರದೃಷ್ಟಕರ. ಪರಿಸ್ಥಿತಿ ಹೀಗೇ ಮುಂದುವರಿದೆ, ಕಾಂಗ್ರೆಸ್ ಗೆ ಕೇಂದ್ರದಲ್ಲಿ ಆದ ಸ್ಥಿತಿ ರಾಜ್ಯದಲ್ಲೂ ಮರುಕಳಿಸಲಿದೆ ಎಂದರು.

Former Minister HD Deveanna has urged CM Siddaramaiah to visit the Hassan district on January 4 and thereafter resolve the problem of drinking water in the district. Speaking at Hassan, he has written a letter to the government so far, seeking grant of drinking water supply. Neapolis has not yet been released. A beggar's condition has been created for drinking water in rural areas. If negligence persists, he warned that the protest would be made. "We do not alliance with anyone in the next election," he said, adding that Godrej, who has been in the Opposition in the Lok Sabha, is not allowed to form government by his own strength. It is unfortunate that the Congress, the secular party, has come to break down the smaller secular parties. The situation will continue, "he said.

पूर्व मंत्री एचडी देवेन्ना ने 4 जनवरी को हसन जिले के दौरे के लिए मुख्यमंत्री सिद्दारमिया से आग्रह किया था और उसके बाद जिले में पीने के पानी की समस्या का समाधान किया था। हसन पर बोलते हुए, उन्होंने सरकार को अब तक एक पत्र लिखा है, ताकि पेयजल आपूर्ति की अनुमति मिल सके। नेपालिस अभी तक जारी नहीं किया गया है ग्रामीण क्षेत्रों में पीने के पानी के लिए भिखारी की स्थिति तैयार की गई है। अगर लापरवाही बनी रहती है, तो उन्होंने चेतावनी दी कि विरोध किया जाएगा| उन्होंने कहा, "हम अगले चुनाव में किसी के साथ गठबंधन नहीं करते।" उन्होंने कहा कि गोदरेज, जो लोकसभा में विपक्ष में रहे हैं, को अपनी ताकत से सरकार बनाने की अनुमति नहीं है। यह दुर्भाग्यपूर्ण है कि कांग्रेस, धर्मनिरपेक्ष पार्टी, छोटे धर्मनिरपेक्ष दलों को तोड़ने आई है। स्थिति जारी रहेगी, "उन्होंने कहा।

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters