Today: 17.Jan.2018

ಮನಸ್ಸಿನ ಕಿಟಕಿ ತೆರೆಯಿರಿ

ಸುಜ್ಞಾನ ಸಂಪಾದನೆಗೆ ಮನಸ್ಸಿನ ಕಿಟಕಿಗಳನ್ನು ತೆರೆಯಿರಿ - ವಿವೇಕಾನಂದ

12 Jan 2018 0 comment
(1 Vote)
 

Hassan: ತನ್ನ ಮನಸ್ಸಿನ ಹತೋಟಿಗಾಗಿ ಧ್ಯಾನವನ್ನು ಮಾಡುವುದು ಸಹಜ. ಆದರೆ ಮುಚ್ಚಿದ ಬಾಗಿಲುಗಳ ಮನೆಯಲ್ಲಿ ಕುಳಿತು ಮನಶ್ಶಾಂತಿಯನ್ನು ಬಯಸಿದರೆ ಸಿಗುವುದಿಲ್ಲ. ಅದರ ಬದಲು ಕಿಟಕಿಗಳನ್ನು ತೆರೆದು ಹೊರಗೆ ನೋಡಿ ಸುತ್ತಲಿನ ಪರಿಸರದ ನೋವು ನಲಿವುಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವಂತಾದರೆ, ಅಕ್ಷರ ಬಾರದವರಿಗೆ ಅಕ್ಷರವನ್ನು, ಶಕ್ತಿವಿಹೀನರಿಗೆ ಗಮನಿಸಿಕೊಂಡು ಆಹಾರವನ್ನು ನೀಡುವಂತಾದರೆ, ಆ ಸೇವೆಯಿಂದ ಮನಶ್ಶಾಂತಿ ತನಗೆ ತಾನೇ ದೊರೆಯುತ್ತದೆ ಎಂದು ಸ್ವಾಮಿ ವಿವೇಕಾನಂದರ ವಾಣಿಯನ್ನು ಉಲ್ಲೇಖಿಸಿ ವಾಸವಿ ಆಂಗ್ಲಮಾಧ್ಯಮ ಶಾಲೆಯ ಆಡಳಿತ ನಿರ್ವಾಹಕ ಜಿ.ಎಸ್. ಮಂಜುನಾಥ್ ಮಕ್ಕಳಿಗೆ ಹಿತವಚನ ನೀಡಿದರು.

ನಗರದ ವಾಸವಿ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ದರಿದ್ರನಾರಾಯಣೋ ಭವ ಎಂಬ ಉಕ್ತಿಯನ್ನು ಮುಕ್ತ ಮನಸ್ಸಿನಿಂದ ಅರ್ಥೈಸಿಕೊಂಡು ಸೇವೆ ಮಾಡಿದರೆ ಎಲ್ಲರೂ ಸುಖಿಗಳೇ. ಇದನ್ನು ಅವರು ಸನಾತನಧರ್ಮದ ತಳಹದಿಯ ಮೇಲೆ ಹೇಳಿದ್ದಾರೆ. ಈ ರೀತಿ ಚಿಂತಿಸುವಾಗ ಸುಜ್ಞಾನ ಮತ್ತು ನಿಜವಾಧ ಧರ್ಮದ ಅರ್ಥದ ಅರಿವಾಗುತ್ತದೆ ಎಂಬುದನ್ನು ವಿವೇಕಾನಂದರು ಒತ್ತಿ ಹೇಳಿದ್ದಾರೆ ಎಂದರು.

ಆರಂಭದಲ್ಲಿ ಶಾಲೆಯ ಶಿಕ್ಷಕಿಯರು ಜಗತ್ತೆಲ್ಲವೂ ವಿವೇಕಮಯವಾಗಲಿ ಎಂದು ಹಾರೈಸಿ ಮಾಡಿದ ಪ್ರಾರ್ಥನೆಗೆ ಕಲಾಶಿಕ್ಷಕ ವಿರೂಪಾಕ್ಷ ವಿವೇಕಾನಂದರ ಚಿತ್ರವನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   ವಿದ್ಯಾರ್ಥಿನಿ ವೇದ ವಿವೇಕಾನಂದರ ಜೀವನ ಪರಿಚಯ ಮಾಡಿದಳು. ಏಳನೇ ತರಗತಿಗಯ ಮೋಕ್ಷಿತ್ ಮತ್ತು ತಂಡದವರು ವಿವೇಕಾನಂದರ ಕಿರು ರೂಪಕವನ್ನು ಪ್ರಸ್ತುತಪಡಿಸಿದರು. ಶಾಲೆಯ ಸಮಾಜಜಾಗೃತಿ ಸಂಘದ ಶಿಕ್ಷಕರು ನಡೆಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಮನೋಹರ್ ಕಾರ್ಯಕ್ರಮವನ್ನು ನಿರೂಪಿಸುತ್ತಾ, ಸ್ವಾಗತ-ವಂದನಾರ್ಪಣೆಯನ್ನೂ ನಿರ್ವಹಿಸಿದರು.

--------------------------------------------------------------------------------------------------------------------------

Open the mind windows for editing knowledge - Vivekananda

Hassan: It is normal to meditate on the control of his mind. But if you want to sit at home with closed doors you will not find peace. Responding to Swami Vivekananda's voice, GS Sharma, Vice Chancellor of the Vavavi English School, quoted saying that instead of opening the windows and looking out, understanding the surroundings of the surrounding environment and responding to the letter, Manjunath greeted children.

Speaking during the Vivekananda Jayanti held at Vasavi School in the city, Swami Vivekananda Diridranarayana Bhava served as an open mind and everybody was happy. This is what they said on the foundation of Sanatana. Vivekananda stressed that while thinking of this, he realized the sense of knowledge and real religion.

Earlier in the day, school teacher Vilupaksa initiated the program by releasing Vivekananda's image to the wish that the world wishes to be wise. Student Veda introduced Vivekananda's life. The seventh class, Mokshit and the team, presented the short form of Vivekananda.    The prize was awarded to the winners of the quiz competition conducted by the school sociologist's association teachers. Manohar also performed a welcome reception, comparing the program.

--------------------------------------------------------------------------------------------------------------------------

ज्ञान संपादन के लिए दिमाग की खिड़कियां खोलें- विवेकानंद

अपने मन के नियंत्रण पर ध्यान रखना सामान्य है लेकिन अगर आप बंद दरवाजे के साथ घर पर बैठना चाहते हैं, तो आपको शांति नहीं मिलेगी। खिड़कियां खोलने और आसपास के पर्यावरणीय दर्द और समझ को समझने और समझने के बजाय, स्वामी विवेकानंद वाणी, वाववी इंग्लिश स्कूल के गवर्नर, जी एस के संदर्भ में मंजूनाथ ने बच्चों को बधाई दी

शहर में वासवी विद्यालय में आयोजित विवेकानंद जयंती के दौरान बोलते हुए, स्वामी विवेकानंद दिरिद्रनारायण भव एक हैं जो खुले दिमाग से आशीषित हैं और हर कोई खुश है। सनातन की नींव पर उन्होंने यही कहा। विवेकानंद ने इस बात पर बल दिया कि इस बारे में सोचते हुए, उन्होंने ज्ञान और वास्तविक धर्म की भावना का एहसास किया।

इससे पहले दिन में स्कूल शिक्षक विरुप्पस्का ने विवेकानंद की छवि को इस इच्छा से जारी कर कार्यक्रम शुरू किया था कि दुनिया बुद्धिमान बनना चाहती है। छात्र वेद ने विवेकानंद के जीवन की शुरुआत की सातवीं कक्षा, मोक्षित और टीम ने विवेकानंद के संक्षिप्त रूप को प्रस्तुत किया | स्कूल समाजशास्त्री एसोसिएशन शिक्षकों द्वारा आयोजित क्विज प्रतियोगिता के विजेताओं को पुरस्कार प्रदान किया गया था। मनोहर ने कार्यक्रम की तुलना करते हुए एक स्वागत योग्य स्वागत किया।

-KONDI NEWS, HASSAN.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters