Today: 22.Jul.2018

ವಾಮಾಚಾರ-ಬೆದರಿಕೆ Featured

ನಾಮಪತ್ರ ಸಲ್ಲಿಸಿದರೆ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುತ್ತೇವೆ: ವಾಮಾಚಾರದ ಮೂಲಕ ಅಭ್ಯರ್ಥಿಗೆ ಬೆದರಿಕೆ

06 Apr 2018 0 comment
(0 votes)
 

ಬೆಂಗಳೂರು: ಎದುರಾಳಿ ಅಭ್ಯರ್ಥಿಯನ್ನು ಚುನಾವಣೆ ಕಣದಿಂದ ಹಿಮ್ಮೆಟ್ಟಿಸಲು ದುಷ್ಕರ್ಮಿಗಳು ವಾಮಾಚಾರಕ್ಕೆ ಮೊರೆಹೋಗಿರುವ ಪ್ರಸಂಗವೊಂದು ಬಯಲಾಗಿದೆ. 

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಗೌರಿಶಂಕರ್​ ಅವರ ಮನೆ ಎದುರು ಅನಾಮಿಕರು ವಾಮಾಚಾರ ಮಾಡಿದ್ದಾರೆ. ಮಾಜಿ ಸಚಿವ ಚೆನ್ನಿಗಪ್ಪ ಅವರ ಪುತ್ರ ಗೌರಿಶಂಕರ್​ ಅವರಿಗೆ ಈ ಬಾರಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್​ ಟಿಕೆಟ್​ ಘೋಷಣೆಯಾಗಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಬೆದರಿಕೆ ತಂತ್ರ ಅನುಸರಿಸಿರುವ ದುಷ್ಕರ್ಮಿಗಳು, ಬೆಂಗಳೂರಿನ ನಾಗರಬಾವಿಯಲ್ಲಿರುವ ಅವರ ನಿವಾಸದ ಎದುರು ಅನ್ನ, ಅರಿಶಿಣ ಹಾಕಿ, ಬೆದರಿಕೆ ಪತ್ರವೊಂದನ್ನು ಚಾಕುವಿಗೆ ಸುತ್ತಿ ತಟ್ಟೆಯಲ್ಲಿಟ್ಟು ಪರಾರಿಯಾಗಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ಗೌರಿಶಂಕರ್​ ಅವರ ಬೆಂಗಳೂರಿನ ನಾಗರಬಾವಿ ನಿವಾಸದ ಎದುರು ಪತ್ತೆಯಾಗಿರುವ ವಸ್ತುಗಳು ಚುನಾವಣೆಗೆ ನಾಮಪತ್ರ ಸಲ್ಲಿಸದಂತೆಯೂ, ಸ್ಪರ್ಧಿಸಿದ್ದೇ ಆದರೆ, ಹೆಂಡತಿ, ಮಕ್ಕಳನ್ನ ಕೊಲ್ಲುವುದಾಗಿಯೂ, ಭಿಕ್ಷೆ ಬೇಡುವಂತೆ ಮಾಡುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: