Today: 26.Apr.2018

ಕಾವೇರಿ ಬೇಕು ಅಂದ್ರೆ ಸಾಧ್ಯವಿಲ್ಲ. Featured

ನೀರಿ ಕೊಡಿಸಬಹುದೇ ಹೊರತು ಕಾವೇರಿಯನ್ನ ಕೊಡಿಸಲು ಸಾಧ್ಯವಿಲ್ಲ: ಡಾ.ಸುಬ್ರಹ್ಮಣಿಸ್ವಾಮಿ

06 Apr 2018 0 comment
(0 votes)
 

ಬೆಂಗಳೂರು, ಏ.6- ನೀರು ಕೇಳಿದ್ರೆ ಕೊಡಿ ಎಂದು ಹೇಳಿ ಕೊಡಿಸಬಹುದು ಆದ್ರೆ ಡ್ಯಾಮೇ ಬೇಕು ಅಂದ್ರೆ ಕೊಡಿಸೋದಿಕ್ಕಾಗಲ್ಲ ಈ ಮಾತನ್ನ ಹೇಳಿದ್ದು ಬೇರೆ ಯಾರು ಅಲ್ಲ. ಡಾ.ಸುಬ್ರಹ್ಮಣಿ ಸ್ವಾಮಿ, ಹೌದು ಕಾವೇರಿ ವಿಚಾರವಾಗಿ ಅವರು ತಮಿಳುನಾಡು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೀಡಿದ ಖಡಕ್ ಉತ್ತರವಿದು.  

ತಮಿಳರೇ ನಿಮಗೆ ನೀರು ಬೇಕಾ ಕಾವೇರಿ ಬೇಕಾ ಕಾವೇರಿ ನೀರು ಬೇಕು ಅಂದ್ರೆ ಸಿಗಲ್ಲ. ನೀರು ಬೇಕು ಅಂದ್ರೆ ಅದಕ್ಕೆ ನಾನು ಏರ್ಪಾಡು ಮಾಡುತ್ತೇನೆ. ಹೀಗಂತ ಸಲಹೆ ನೀಡಿದವರು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯಂ ಸ್ವಾಮಿ ಅವರು. ಕಾವೇರಿ ವಿವಾದ ಕುರಿತಂತೆ ತಮಿಳುನಾಡು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಉತ್ತರ ನೀಡಿದ್ದಾರೆ. ನಿಮಗೆ ನೀರು ಬೇಕಾ, ಕಾವೇರಿ ಬೇಕಾ ಎಂದಾಗ ಕೆಲವರು ಕಾವೇರಿ ಬೇಕು ಎಂದಾಗ ಅದು ಮಾತ್ರ ಸಿಗೋಲ್ಲ. ಕಾವೇರಿ ನೀರು ಕೊಡುತ್ತೇವೆ ಎಂದು ಕೆಲವರು ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಬೇಡಿ ಎಂದು ಅವರು ಮನವಿ ಮಾಡಿಕೊಂಡರು. 

ನೀರು ಬೇಕಾದರೆ ಇಸ್ರೇಲ್‍ನಿಂದ ಯಂತ್ರ ತರಿಸಿ ಸಮುದ್ರದ ಉಪ್ಪು ನೀರನ್ನು ಪರಿವರ್ತಿಸಿ ವ್ಯವಸಾಯಕ್ಕೆ ಅಗತ್ಯವಿರುವಷ್ಟು ಮತ್ತು 24 ಗಂಟೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅದು ಬಿಟ್ಟು ಕಾವೇರಿ ಬೇಕು ಎಂದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ. ಒಪಿಎಸ್ ಮತ್ತು ಇಪಿಎಸ್ ಅವರಿಗೂ ಈ ಸತ್ಯ ಗೊತ್ತು. ಆದರೆ, ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾವೇರಿ ವಿವಾದವನ್ನು ಬೆಳೆಸುತ್ತಿದ್ದಾರೆ. ಅವರ ಮಾತಿಗೆ ಬೆಲೆ ನೀಡಬೇಡಿ. ನಿಮಗೆ ಅಗತ್ಯವಿರುವ ನೀರನ್ನು ಕೊಡಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ. ಸಮುದ್ರದ ನೀರನ್ನು ಪರಿವರ್ತಿಸಲು ಹೆಚ್ಚು ದಿನಗಳು ಬೇಕಾಗುತ್ತದಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಯಾರು ಹಾಗಂತ ಹೇಳಿದ್ದು, ಕಾವೇರಿ ನೀರಿಗಾಗಿ 50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೀರ. ನನಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿ. ಸಮುದ್ರದ ನೀರನ್ನು ಪರಿವರ್ತಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.  

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: